Home Elections 2019 ಕನ್ನಡಿಗರೊಬ್ಬರು ಪ್ರಧಾನಿಯಾಗಲು ಪ್ರಮುಖ ಪಾತ್ರ ವಹಿಸಿದ್ದರಂತೆ ಕರುಣಾನಿಧಿ..?! ಕರುನಾಡಿಗೂ ಕರುಣಾನಿಧಿಗೂ ಇದ್ದದ್ದು ಎಂತಹ ನಂಟು ಗೊತ್ತಾ..?!

ಕನ್ನಡಿಗರೊಬ್ಬರು ಪ್ರಧಾನಿಯಾಗಲು ಪ್ರಮುಖ ಪಾತ್ರ ವಹಿಸಿದ್ದರಂತೆ ಕರುಣಾನಿಧಿ..?! ಕರುನಾಡಿಗೂ ಕರುಣಾನಿಧಿಗೂ ಇದ್ದದ್ದು ಎಂತಹ ನಂಟು ಗೊತ್ತಾ..?!

4078
0
SHARE

ದೇಶದ ರಾಜಕಾರಣದಲ್ಲಿ ಕರುಣಾನಿಧಿ ಅವರದ್ದು ವಿಶೇಷ ನಡೆ, ವಿಭಿನ್ನ ಛಾಪು. ಪೆರಿಯಾರ್ ಮತ್ತು ಅಣ್ಣಾದೊರೈ ರಾಜಕೀಯ ಕಾರ್ಯ ವೈಖರಿ ನೋಡಿ ಪ್ರಭಾವಿತರಾಗಿ ರಾಜಕಾರಣಕ್ಕೆ ಕಾಲಿಟ್ಟ ಕರುಣಾನಿಧಿಯವರದ್ದೂ ಹೆಚ್ಚುಕಡಿಮೆ ಆ ಧೀಮಂತ ನಾಯಕರದ್ದೇ ನಿಲುವು. ರಾಷ್ಟ್ರ ರಾಜಕಾರಣದಲ್ಲಿ ಹಲವಾರು ವರ್ಷಗಳ ಕಾಲ ಪವರ್ ಸೆಂಟರ್, ಕಿಂಗ್ ಮೇಕರ್ ಪಾತ್ರ ನಿರ್ವಹಿಸಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆಯ ಪರಮೋಚ್ಚ ನಾಯಕ ಮುತ್ತುವೇಲು ಕರುಣಾನಿಧಿ ಇನ್ನಿಲ್ಲ.ಕರುಣಾನಿಧಿ ಅವರದ್ದು ವಿಶೇಷ ನಡೆ, ವಿಭಿನ್ನ ಛಾಪು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ದಕ್ಷಿಣಭಾರತದಲ್ಲಿ ಮೊತ್ತ ಮೊದಲಬಾರಿಗೆ ಅಧಿಕಾರಕ್ಕೆ ಬಂದ ಸಮಯವದು, ಕಾವೇರಿ ಮತ್ತು ಹೊಗೇನಕಲ್ ವಿಚಾರದಲ್ಲಿ ತಮಿಳರ ರಗಳೆ ವಿಪರೀತವಾಗಿತ್ತು. ಕನ್ನಡಪರ ಸಂಘಟನೆಗಳು ಇಲ್ಲಿ, ತಮಿಳು ಸಂಘಟನೆಗಳು ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದವು. ಆ ವೇಳೆ, ಪ್ರತಿಮೆ ಅನಾವರಣ ಕಾರ್ಯಕ್ರಮವೊಂದು ಉಭಯ ರಾಜ್ಯಗಳ ನಡುವಣ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯಿತು.

ಖುದ್ದು, ಅಂದಿನ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ, ಇಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರನ್ನು ‘ಚಿನ್ನತಂಬಿ’ ಎಂದು ಕರೆದು ತಮಿಳು-ಕನ್ನಡಿಗರ ನಡುವೆ ಸೌಹಾರ್ದತೆಯಿರಲಿ ಎಂದು ಸಾರಿದ್ದರು. ಎರಡು ರಾಜ್ಯಗಳ ಕಟ್ಟಾ ಭಾಷಾಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದರೂ, ರಾಷ್ಟ್ರಮಟ್ಟದಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಪ್ರಶಂಸೆಗೊಳಗಾಗಿತ್ತು.

ಎರಡು ರಾಜ್ಯಗಳ ಸಿನಿಮಾ ರಂಗವೂ ಇದಕ್ಕೆ ಜೈ ಅಂದಿತ್ತು. ಸರ್ವಜ್ಞ ಮತ್ತು ತಿರುವಳ್ಳುವರ್ ರಾಷ್ಟಕಂಡ ಮಹಾಕವಿಗಳಾದ ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರು ಮತ್ತು ಚೆನ್ನೈನಲ್ಲಿ ಅನಾವರಣ ಮಾಡಲು ಕರ್ನಾಟಕ ಮತ್ತು ತಮಿಳುನಾಡು ಸರಕಾರ ನಿರ್ಧರಿಸಿತ್ತು. ಇದನ್ನು ಎರಡು ರಾಜ್ಯಗಳ ನಡುವಣ ಆಡಳಿತಾತ್ಮಕ ಪ್ರಕ್ರಿಯೆ ಎಂದು ಹೇಳಬಹುದಾಗಿದ್ದರೂ, ಕರುಣಾನಿಧಿ ಮತ್ತು ಯಡಿಯೂರಪ್ಪ ಅಂದಿನ ಪ್ರತಿಮೆ ಅನಾವರಣ ಕಾರ್ಯಕ್ರಮಗಳಲ್ಲಿ ಇನ್ನೂ ಹೆಜ್ಜೆ ಮುಂದೆ ಹೋಗಿದ್ದರು.

ಪ್ರತಿಮೆ ಅನಾವರಣಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಇದೇ. ಹದಿನಾರನೇ ಶತಮಾನದ ದಾರ್ಶನಿಕ, ಕವಿ ಸರ್ವಜ್ಞ ಹದಿನಾರನೇ ಶತಮಾನದ ದಾರ್ಶನಿಕ, ಕವಿ ಸರ್ವಜ್ಞ ಅವರ ಪ್ರತಿಮೆಯನ್ನು ಆಗಸ್ಟ್ 14, 2009ರಲ್ಲಿ ಯಡಿಯೂರಪ್ಪ ಮತ್ತು ಕರುಣಾನಿಧಿ ಜಂಟಿಯಾಗಿ ಚೆನ್ನೈನಲ್ಲಿ ಅನಾವರಣಗೊಳಿಸಿದ್ದರು. ಇದಕ್ಕೆ ಐದು ದಿನ ಮೊದಲು ಬೆಂಗಳೂರಿನ ಹಲಸೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.

ಕವಿಗಳ ವಚನಗಳನ್ನು ನಾವು ಜೀವನದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಾಹಿತಿಯೂ ಆಗಿರುವ ಕರುಣಾನಿಧಿ, ಈ ಇಬ್ಬರು ಮಹಾನ್ ಕವಿಗಳ ವಚನಗಳನ್ನು ನಾವು ನಮ್ಮನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ. ಉಭಯ ರಾಜ್ಯಗಳು ಒಂದೊಳ್ಳೆ ಕೆಲಸಕ್ಕೆ ಮುಂದಾಗಿದೆ, ನೀವು ನನ್ನ ಚಿನ್ನತಂಬಿ ಇದ್ದಹಾಗೇ ಎಂದು ಯಡಿಯೂರಪ್ಪನವರತ್ತ ಬೊಟ್ಟು ಮಾಡಿ ಹೇಳಿದ್ದರು.

ಕರುಣಾನಿಧಿಯ ಈ ಮಾತಿಗೆ ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬೆಂಗಳೂರಿಗೆ ಬಂದಿದ್ದಕ್ಕೆ ನಿಮಗೆ ಧನ್ಯವಾದಗಳು. ಸರ್ವಜ್ಞ ಮತ್ತು ತಿರುವಳ್ಳುವರ್ ಈ ನಾಡು ಕಂಡ ಅಪ್ರತಿಮ ದಾರ್ಶನಿಕರು. ನೀವು ನನ್ನನ್ನು ಚಿನ್ನತಂಬಿ ಎಂದು ಕರೆದಿದ್ದಕ್ಕೆ ನನ್ನ ಹೃದಯ ತುಂಬಿಬಂದಿದೆ. ನೀವು ನನ್ನ ಪೆರಿಯಣ್ಣ ಎಂದು ಹೇಳಿದ್ದರು. ದೇಶ ತಳಮಟ್ಟದ ನಾಯಕನನ್ನು ಕಳೆದುಕೊಂಡಿದೆ.

“ಈ ದಿನ ನಾನು ನನ್ನ ಹಿರಿಯ ಅಣ್ಣನನ್ನು ಕಳೆದುಕೊಂಡಿದ್ದೀನಿ, ನನ್ನ ಆರು ದಶಕಗಳ ರಾಜಕೀಯದಲ್ಲಿ ನಾನು ಕಂಡ ಅತಿ ಸ್ನೇಹಮಯಿ, ಕರುಣಾಮಯಿ,ಸಹೃದಯಿ ಮತ್ತು ಹೃದಯವಂತಿಕೆಯುಳ್ಳ ಧೀಮಂತ ನಾಯಕ ಎಂ.ಕರುಣಾನಿಧಿ. 1996 ರಲ್ಲಿ ನಾನು ಪ್ರಧಾನ ಮಂತ್ರಿಯಾಗಬೇಕಾದರೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಪಾತ್ರ ಬಹಳ ದೊಡ್ಡದು. ಅವರ ಆಶೀರ್ವಾದದಿಂದಲೇ ನಾನು ಪ್ರಧಾನ ಮಂತ್ರಿ ಹುದ್ದೇಗೇರಿದ್ದೆ.”

ಎಂ.ಕರುಣಾನಿಧಿ ನಿಧನದ ಸುದ್ದಿ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಇಡೀ ದೇಶವೇ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ನಾನು ಕರುಣಾನಿಧಿ ಅವರನ್ನು ಸುಮಾರು 5 ದಶಕಗಳಿಂದ ಬಹಳ ಹತ್ತಿರದಿಂದ ಬಲ್ಲೆ , ಈ ದಿನ ನಾನು ನನ್ನ ಹಿರಿಯ ಅಣ್ಣನನ್ನು ಕಳೆದುಕೊಂಡಿದ್ದೀನಿ, ನಾನು ಪ್ರಧಾನಮಂತ್ರಿ ಆಗಬೇಕಾದರೆ ಕರುಣಾನಿಧಿ ಅವರ ಪಾತ್ರ ಬಹಳ ದೊಡ್ಡದು. ಇಂದು ಇಡೀ ದೇಶಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ತುಂಬಲಾಗದ ನಷ್ಟ ಉಂಟಾಗಿದೆ. ಆದರೆ, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ದೇವರು ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುವೆ ಎಂಬ ನುಡಿಗಳನ್ನಾಡಿದ್ದಾರೆ ಗೌಡರು.

ಹಿಂದೆ ಕನ್ನಡ ಚಿತ್ರರಂಗದ ಕಲಾವಿದರು ತಮಿಳುನಾಡಿನ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಹೀಗಾಗಿ, ಕನ್ನಡದ ಹಿಂದಿನ ಸ್ಟಾರ್ ನಟರ ಜೊತೆ ಕರುಣಾನಿಧಿ ಅವರು ಸಂಪರ್ಕ ಹೊಂದಿದ್ದರು. ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರನ್ನು ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದು ಕರುಣನಿಧಿಯವರು ಎನ್ನುತ್ತಾರೆ ಬಲ್ಲವರು.

 

LEAVE A REPLY

Please enter your comment!
Please enter your name here