Home Health ಕರೋನಾ ಮಹಾಮಾರಿಗೆ ರಾಮಬಾಣ? ಹೈಡ್ರಾಕ್ಸಿಕ್ಲೋರೋಕ್ವಿನ್ ಜನಕ ಭಾರತದ ಆಚಾರ್ಯ ಪ್ರಫುಲ್ ಚಂದ್ರ ರಾಯ್

ಕರೋನಾ ಮಹಾಮಾರಿಗೆ ರಾಮಬಾಣ? ಹೈಡ್ರಾಕ್ಸಿಕ್ಲೋರೋಕ್ವಿನ್ ಜನಕ ಭಾರತದ ಆಚಾರ್ಯ ಪ್ರಫುಲ್ ಚಂದ್ರ ರಾಯ್

2823
0
SHARE

ಇಡೀ ವಿಶ್ವವೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದು, ವೈರಸ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಮೇಲಿನ ರಫ್ತು ನಿರ್ಬಂಧವನ್ನು ಮಾನವೀಯ ನೆಲೆಗಟ್ಟಿನಲ್ಲಿ ಭಾರತ ಸರ್ಕಾರ ತೆರವುಗೊಳಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕರೊನಾ ಸೋಂಕಿಗೆ ಈವರೆಗೆ ಯಾವುದೇ ನಿರ್ದಿಷ್ಟ ಔಷಧ ಇಲ್ಲ. ಆದರೆ, ಮಲೇರಿಯಾಗೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್, ಮಾತ್ರೆ ಸದ್ಯದ ಮಟ್ಟಿಗೆ ರಾಮಬಾಣದಂತೆ ಕೆಲಸ ಮಾಡುತ್ತಿದೆ ಎಂದು ವಿಶ್ವದ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಔಷಧ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಭಾರತದ ರಸಾಯನ ಶಾಸ್ತ್ರದ ಜನಕ ಎಂದೇ ಕರೆಯಲ್ಪಡುವ ಆಚಾರ್ಯ ಪ್ರಫುಲ್‌ಚಂದ್ರ ರಾಯ್. 1934ರಲ್ಲಿ ರಾಯ್ ಆರಂಭಿಸಿದ ಪಶ್ಚಿಮ ಬಂಗಾಳ ಕೆಮಿಕಲ್ಸ್ ಆಂಡ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ ಅತಿ ಹೆಚ್ಚು ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ಉತ್ಪಾದನೆ ಮಾಡುವ ಕಂಪನಿಯಾಗಿತ್ತು.

ಆಚಾರ್ಯ ಪ್ರಫುಲ್‌ಚಂದ್ರ ರಾಯ್ ಭಾರತೀಯ ಔಷಧ ಉದ್ಯಮದ ಪಿತಾಮಹ ಎಂದೂ ಪರಿಗಣಿಸಲಾಗಿದೆ. ರಾಯ್ 1861ರ ಆ.2 ರಂದು ಬಂಗಾಳದ ಖುಲ್ಲಾ ಜಿಲ್ಲೆಯ ರುರುಲಿ ಕಟಿಪಾರದಲ್ಲಿ (ಇಂದಿನ ಬಾಂಗ್ಲಾದೇಶ) ಜನಿಸಿದರು.ರಸಾಯನಶಾಸ್ತ್ರದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಅವರು, ಎಡಿನ್‌ಬರೊ ವಿವಿಯಲ್ಲಿ ವ್ಯಾಸಂಗ ಮಾಡಿದವರು. 1888ರಲ್ಲಿ ಭಾರತಕ್ಕೆ ಮರಳಿ ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರೊಂದಿಗೆ ತಮ್ಮ ಪ್ರಯೋಗಾಲಯದಲ್ಲಿ ಒಂದು ವರ್ಷ ಕೆಲಸ ನಿರ್ವಹಿಸಿದರು. 1894 ರಲ್ಲಿ ಪ್ರಫುಲ್‌ಚಂದ್ರ ಪಾದರಸವನ್ನು ಮೊದಲ ಆವಿಷ್ಕಾರ ಮಾಡಿ ಮರ್ಕ್ಯುರಸ್ ನೈಟ್ರೇಟ್‌ನ್ನು ತಯಾರಿಸಿದರು, ಇದರ ಸಹಾಯದಿಂದ 80 ಹೊಸ ಸಂಯುಕ್ತಗಳನ್ನು ತಯಾರಿಸಲಾಯಿತು.

LEAVE A REPLY

Please enter your comment!
Please enter your name here