Home District ಕಸದ ರಾಶಿಯಲ್ಲಿ ಅಮೂಲ್ಯ ಆಭರಣ ಪತ್ತೆ: ಮಲೆಮಹದೇಶ್ವರ ದೇವಸ್ಥಾನಕ್ಕೂಆಭರಣಕ್ಕೂ ಸಂಬಂಧವಿದೆಯೇ?

ಕಸದ ರಾಶಿಯಲ್ಲಿ ಅಮೂಲ್ಯ ಆಭರಣ ಪತ್ತೆ: ಮಲೆಮಹದೇಶ್ವರ ದೇವಸ್ಥಾನಕ್ಕೂಆಭರಣಕ್ಕೂ ಸಂಬಂಧವಿದೆಯೇ?

251
0

ಚಾಮರಾಜನಗರ: ದೇವಾಲಯದ ಉತ್ಸವ ಮೂರ್ತಿ ಶ್ರೀ ಪಾರ್ವತಿ ಅಮ್ಮರವರಿಗೆ ಧರಿಸಿದ್ದ ಸುಮಾರು 30 ಗ್ರಾಂ‌ ತೂಕದ ಕಳೆದು ಹೋದ ಚಿನ್ನದ ಕರಡಿಗೆ ಗುರುವಾರ ಮಧ್ಯಾಹ್ನ‌ 3.45ರ‌ ಸುಮಾರಿಗೆ ರಾಜಗೋಪುರದ ಮುಂಭಾಗ ಕಸ ಹಾಕುವ ಜಾಗದಲ್ಲಿ ದೇವಾಲಯದ ಹೊರಗುತ್ತಿಗೆ ನೌಕರ ಸುನಿಲ್ ಕುಮಾರ್ ಎಂಬುವವರು ನೋಡಿ ಕೂಡಲೇ ತಿಳಿಸಿದರು.
ಕೂಡಲೇ ಸಂಜೆ 4ಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಜಿ.ಎನ್ ಹಾಗೂ ಉಪಕಾರ್ಯದರ್ಶಿ ಬಸವರಾಜುರೊಡನೆ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಲಾಯಿತು. ದೇವರಿಗೆ ಧರಿಸಿದ್ದ ಚಿನ್ನದ ಕರಡಿಗೆಯು ಈ ತ್ಯಾಜ್ಯ ವಸ್ತು ಮಧ್ಯೆ‌ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡು ಮಹಜರು ಮಾಡುತ್ತಿದ್ದು ನಂತರ ದೇವಾಲಯಕ್ಕೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ದೇವಾಲಯದ‌ ಹೊರಗುತ್ತಿಗೆ ಪೌರಕಾರ್ಮಿಕ ನೌಕರ ಸುನಿಲ್ ಕುಮಾರ್‌ ಅವರಿಗೆ ಅಭಿನಂದನೆಗಳನ್ನು ಪ್ರಾಧಿಕಾರ ಸಲ್ಲಿಸಿದೆ. ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ, ನಿರ್ಲಕ್ಷ್ಯತನದ ಬಗ್ಗೆ ಹಾಗೂ‌ ಬೇಜವಾಬ್ದಾರಿ ಬಗ್ಗೆ‌ ಪೊಲೀಸರು ತನಿಖೆ ನಡೆಸಲಿದ್ದಾರೆ.

Previous articleಆಚಾರ್ಯವಾಣಿ: ಉದ್ಯೋಗ,ಆರೋಗ್ಯ,ಹಣಕಾಸಿನ ತೊಂದರೆಗಳಿಗೆ ಶೀಘ್ರ ಪರಿಹಾರ
Next articleವೇದಿಕೆಯ ಮೇಲೆಯೇ ಕಾಂಗ್ರೆಸಿಗರನ್ನು ತರಾಟೆಗೆ ತೆಗೆದುಕೊಂಡ ನಿಖಿಲ್ ಕುಮಾರಸ್ವಾಮಿ

LEAVE A REPLY

Please enter your comment!
Please enter your name here