Home Elections 2019 ಕಾಂಗ್ರೆಸ್ ನಾಯಕರ ದಾರಿ ತಪ್ಪಿಸಲು ತೇಜಸ್ವಿನಿ ಹೆಸರು ದಾಳವಾಗಿ ಬಳಕೆ.? Bjp ರಾಜ್ಯಸಭಾ ಸದಸ್ಯತ್ವದ ಆಫರ್.?

ಕಾಂಗ್ರೆಸ್ ನಾಯಕರ ದಾರಿ ತಪ್ಪಿಸಲು ತೇಜಸ್ವಿನಿ ಹೆಸರು ದಾಳವಾಗಿ ಬಳಕೆ.? Bjp ರಾಜ್ಯಸಭಾ ಸದಸ್ಯತ್ವದ ಆಫರ್.?

1981
0
SHARE

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕಟ್ ಸಿಗದ ಕಾರಣಕ್ಕೆ ಮುನಿಸಿಕೊಂಡಿರುವ ತೇಜಸ್ವಿನಿ ಅನಂತಕುಮಾರ್ ಗೆ ರಾಜ್ಯಸಭಾ ಸದಸ್ಯತ್ವ ಕೊಡಿಸುವುದಾಗಿ ಬಿಜೆಪಿ ಹೈ ಕಮಾಂಡ್ ಆಮಿಷವೊಡ್ಡಿದೆ.

ಗುರುವಾರ ತೇಜಸ್ವಿನಿಯವರ ಮನೆಗೆ ಬಂದಿದ್ದ ಬಿಜೆಪಿ ಉಸ್ತುವಾರಿ ಮುರುಳೀಧರರಾವ್ ಅವರು, ಕೇಂದ್ರದ ವರಿಷ್ಟರ ಸಂದೇಶ ತಲುಪಿಸಿದ್ದಾರೆ.ಕಾಂಗ್ರೆಸ್ ನಾಯಕರನ್ನು ದಾರಿ ತಪ್ಪಿಸುವ ಸಲುವಾಗಿ ತೇಜಸ್ವಿನಿ ಅನಂತಕುಮಾರ್ ಹೆಸರನ್ನು ದಾಳವಾಗಿ ಬಳಸಿಕೊಳ್ಳಲಾಯ್ತು ಎಂಬುದನ್ನು ಮುರುಳೀಧರರಾವ್ ಒಪ್ಪಿಕೊಂಡಿದ್ದಾರೆ. ಮೊದಲೇ ತೇಜಸ್ವಿ ಸೂರ್ಯ ಹೆಸರನ್ನು ಪ್ರಕಟಿಸಿದ್ದರೆ, ಕಾಂಗ್ರೆಸ್ ನಿಂದ ರಾಮಲಿಂಗಾರೆಡ್ಡಿಯವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇತ್ತು.

ಹಾಗಾಗಿ ತೇಜಸ್ವಿನಿ ಅನಂತಕುಮಾರ್ ಅವರೇ ಬೆಂಗಳೂರು ದಕ್ಷಿಣದ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸುವಂತೆ ಮಾಜಿ ಡಿಸಿಎಂ ಆರ್. ಅಶೋಕ್ ಗೆ ಸೂಚನೆ ನೀಡಲಾಯ್ತು. ತೇಜಸ್ವಿನಿ ಅನಂತಕುಮಾರ್ ರನ್ನು ಅಭ್ಯರ್ಥಿ ಎಂದು ಬಿಂಬಿಸಿದ ಕಾರಣಕ್ಕೆ ಪ್ರಿಯಾಕೃಷ್ಣ, ರಾಮಲಿಂಗಾ ರೆಡ್ಡಿಯಂತಹಾ ಘಟಾನುಘಟಿ ಕಾಂಗ್ರೆಸ್ ನಾಯಕರು ಚುನಾವಣಾ ಕಣದಿಂದ ಹಿಂದೆ ಸರಿದ್ರು.ಹಾಗಾಗಿಯೇ ಕೊನೆ ಕ್ಷಣದ ವರಗೆ ತೇಜಸ್ವಿ ಸೂರ್ಯ ಹೆಸರು ಪ್ರಕಟಿಸದೆ ರಹಸ್ಯ ಕಾಯ್ದುಕೊಳ್ಳಲಾಯ್ತು ಎಂದೂ ಮುರಳೀಧರರಾವ್ ವಿವರಿಸಿದ್ದಾರೆ.

ಅಲ್ಲದೆ, ನಾಲ್ಕಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿರುವ ಸಂಸದರಿಗೆ ಮತ್ತೆ ಟಿಕೆಟ್ ಕೊಡಬಾರದು, ಹೊಸ ಮುಖಗಳಿಗೆ ಹೆಚ್ಚು ಅವಕಾಶ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಮಾಡಿದ್ದರು. ಹಾಗಾಗಿಯೇ ಲಾಲ್ ಕೃಷ್ಣ ಅಡ್ವಾಣಿ, ಮುರಳೀಮನೋಹರ ಜೋಷಿಯವರಂತಹಾ ಹಿರಿಯರಿಗೆ ಈ ಬಾರಿ ಟಿಕೆಟ್ ಕೊಡಲಾಗಿಲ್ಲ. ಒಂದು ವೇಳೆ ಅನಂತಕುಮಾರ್ ಬದುಕಿದ್ದಿದ್ದರೂ ಅವರಿಗೆ ಟಿಕೆಟ್ ಸಿಗುತ್ತಿರಲಿಲ್ಲ ಎಂದೂ ಮುರುಳೀಧರರಾವ್ ವಿವರಿಸಿದ್ದಾರೆ.

ತೇಜಸ್ವಿನಿ ಅನಂತಕುಮಾರ್ ಅವರನ್ನು ದಾಳವಾಗಿ ಬಳಸಿಕೊಂಡಿದ್ದಕ್ಕೆ ಬಿಜೆಪಿ ವರಷ್ಟರಿಗೆ ಬೇಸರವಿದೆ. ಆಗಿರುವ ಅನ್ಯಾಯವನ್ನು ಸರಿಪಡಿಸಲು ತೇಜಸ್ವಿನಿ ಅನಂತಕುಮಾರ್ ಅವರನ್ನುರಾಜ್ಯ ಸಭೆಗೆ ಆಯ್ಕೆ ಮಾಡಲಾಗುತ್ತದೆ ಎಂದೂ ಮುರುಳೀಧರರಾವ್ ಹೇಳಿದ್ದಾರೆ.ಆದರೆ, ಈ ಮಾತುಗಳನ್ನು ತಾವು ನೇರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಥವಾ ಪ್ರಧಾನಿ ನರೇಂದ್ರ ಮೋದಿಯವರಿಂದಲೇ ನೇರವಾಗಿ ಕೇಳಬೇಕು ಎಂದು ತೇಜಸ್ವಿನಿ ಅನಂತಕುಮಾರ್ ಪಟ್ಟು ಹಿಡಿದಿದ್ದಾರೆ.

ಹಾಗಾಗಿ ಈ ವಿದ್ಯಮಾನವನ್ನು ಕೇಂದ್ರದ ವರಿಷ್ಟರಿಗೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿ ಮುರಳೀಧರರಾವ್ ಹೊರ ಬಂದಿದ್ದಾರೆ. ಆದರೆ, ಹೊರ ಬಂದ ಮುರಳೀಧರರಾವ್ ಅವರು ತೇಜಸ್ವಿನಿ ಅನಂತಕುಮಾರ್ ನಿವಾಸದಲ್ಲಿದ್ದ ಅದಮ್ಯ ಚೇತನದ ಕಾರ್ಯಕರ್ತರ ತೀವ್ರ ಪ್ರತಿಭಟನೆ ಎದುರಿಸಬೇಕಾಯ್ತು.

LEAVE A REPLY

Please enter your comment!
Please enter your name here