Home Cinema ಕೆಜಿಎಫ್-2 ಮುಗೀತು! ಇನ್ಮುಂದೆ ರಾಕಿ ಬಾಸ್ ಮತ್ತು ರಾಮ್ ಚರಣ್ ರದ್ದೇ ಹವಾ…!!!

ಕೆಜಿಎಫ್-2 ಮುಗೀತು! ಇನ್ಮುಂದೆ ರಾಕಿ ಬಾಸ್ ಮತ್ತು ರಾಮ್ ಚರಣ್ ರದ್ದೇ ಹವಾ…!!!

501
0
SHARE

ಬಹುಭಾಷಾ ತಾರಾಗಣದ ಅದ್ದೂರಿ ವೆಚ್ಚದ ಕನ್ನಡಿಗರೇ ನಿರ್ದೇಶಿಸಿ ನಿರ್ಮಿಸಿ ನಟಿಸಿರುವ ಚಿತ್ರ ಕೆಜಿಎಫ್2 ಈಗ ಈ ಚಿತ್ರದ ಚಿತ್ರೀಕರಣ ಪೋಸ್ಟ್ ಪ್ರೋಡಕ್ಷನ್ ವರ್ಕ್ ಎಲ್ಲವು ಮುಗಿದಿದ್ದು ಚಿತ್ರ ಬಿಡುಗಡೆಗಾಗಿ ಕಾಯುತ್ತಿದೆ. ಅಭಿಮಾನಿಗಳು ಕೂಡ ಕೆಜಿಎಫ್2 ಚಿತ್ರದ ಬರುವಿಕೆಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಾ ಕುಳಿತಿದ್ದಾರೆ. ಕೆಜಿಎಫ್-2 ಮುಗಿತು ರಾಕಿ ಬಾಸ್ ಮತ್ತೆ ಏನ್ ಮಾಡ್ತಾರೆ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್  ಏಕಕಾಲಕ್ಕೆ ಭರ್ಜರಿಯಾದ ಸುದ್ದಿಯೊಂದು ಬಂದಿದೆ.

ಇಷ್ಟಕ್ಕೂ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ನಂತರ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದು ಬಂದಿದೆ. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಚಿತ್ರ ಮಾಡ್ತಾರೆ ಮಫ್ತಿ ಕ್ಯಾಪ್ತಿಯನ್ ನರ್ತನ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನುವ ಲೆಕ್ಕಾಚಾರಗಳು ಸ್ಯಾಂಡಲ್ ವುಡ್ ನಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದ್ದ.

ಆದರೆ ಈಗ ಬಂದಿರುವ ಸುದ್ದಿಯೇ ಬೇರೆ ತಮಿಳುನಾಡಿನ ಖ್ಯಾತ ನಿರ್ದೇಶಕ ರಜನಿಕಾಂತ್ ಅಂಗಳದ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಶಂಕರ್ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕೆಜಿಎಫ್-2 ಚಿತ್ರೀಕರಣ ನಡೆಯುತ್ತಿರುವ ಆಗಲೇ ಬೇಟಿ ನೀಡಿದ ಶಂಕರ ಯಶ ಜೊತೆ ಮಾತನಾಡಿ ಚಿತ್ರಕತೆಯನ್ನು ಅವರ ಅನುಮತಿ ಪಡೆದಿದ್ದಾರೆ ಎಂಬ ಮಾತು ಈಗ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬರುತ್ತಿದೆ .

ಅಂದುಕೊಂಡಂತೆ ಆದರೆ ಶಂಕರ್ ನಿರ್ದೇಶನದ ರಾಕಿಬಾಯ್ ನಟಿಸುತ್ತಿರುವ ಈ ಚಿತ್ರ 2022 ರಲ್ಲಿ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಯಸ್ ಮಾತ್ರವಲ್ಲ ಜೊತೆಗೆ ರಾಮಚರಣ್ ಕೂಡ ನಟಿಸುತ್ತಿದ್ದಾರೆ ಎಂಬ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ.ಯಶ್-ರಾಮಚರಣ್ ಜೋಡಿಯ ಚಿತ್ರ ಅಭಿಮಾನಿಗಳಿಗೆ ರಸದೌತಣವನ್ನು ನೀಡುವುದಂತೂ ಗ್ಯಾರಂಟಿ.ಈ ಮೆಗಾ ಪ್ರಾಜೆಕ್ಟ್ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಲಿದೆಯಂತೆ. ತಮಿಳು ನಟ ವಿಜಯ್ ಸೇತುಪತಿ ಅವರನ್ನು ಸಹ ಶಂಕರ್ ಸಂಪರ್ಕಿಸಿದ್ದಾರೆ.

ಎಲ್ಲ ಪೂರ್ವ ತಯಾರಿ ನಡೆಸಿದ ಬಳಿಕ ಈ ವರ್ಷ ಅಂತ್ಯದಲ್ಲಿ ಈ ಸಿನಿಮಾ ಕುರಿತು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here