Home KARNATAKA ಕೊಹ್ಲಿ ಬಾಯ್ಸ್‌ಗೆ ಸವಾಲಾಕಿ ಮಣ್ಣುಮುಕ್ಕಿದ ಕಿವೀಸ್ ಕಥೆ-ವ್ಯಥೆ..! 2 ಪಂದ್ಯ ಇರುವಾಗಲೇ ಸರಣಿ ಇಂಡಿಯಾ ಕೈವಶ..!...

ಕೊಹ್ಲಿ ಬಾಯ್ಸ್‌ಗೆ ಸವಾಲಾಕಿ ಮಣ್ಣುಮುಕ್ಕಿದ ಕಿವೀಸ್ ಕಥೆ-ವ್ಯಥೆ..! 2 ಪಂದ್ಯ ಇರುವಾಗಲೇ ಸರಣಿ ಇಂಡಿಯಾ ಕೈವಶ..! ಕೊಹ್ಲಿ-ರೋಹಿತ್ ಮುಂದೆ ಮಂಡಿಯೂರಿದ ಕಿವೀಸ್ ಬೌಲರ್ಸ್..!

6653
0
SHARE

ನ್ಯೂಜಿಲೆಂಡ್ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿ ಮುಕ್ತಾಯಗೊಳ್ಳುವ ಮುನ್ನವೇ ಟೀಂ ಇಂಡಿಯಾಗೆದ್ದುಕೊಂಡಿದೆ.3-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ.ಮೂರನೇ ಹಾಗೂ ಕೊನೆ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಬೇ ಓವಲ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಇನ್ನೂ 2 ಪಂದ್ಯ ಬಾಕಿ ಇರುವಾಗ್ಲೆ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಅಲ್ದೇ 10 ವರ್ಷಗಳ ನಂತ್ರ ಕಿವೀಸ್ ನಾಡಲ್ಲಿ ಸಿರೀಸ್ ಗೆದ್ದ ಸಾಧನೆಯನ್ನ ಬ್ಲೂಬಾಯ್ಸ್ ಮಾಡಿದ್ರು.

ನ್ಯೂಜಿಲೆಂಡ್ ನೀಡಿದ್ದ 243 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅಬ್ಬರದ ಆರಂಭ ಒದಗಿಸಿದ್ರು. ಆದ್ರೆ ಧವನ್ 28 ರನ್ ಗಳಿಸಿದ್ದಾಗ ಔಟಾಗಿ ನಿರಾಸೆ ಅನುಭವಿಸಿದ್ರು.

ವಿರಾಟ್-ರೋಹಿತ್ ಬೊಂಬಾಟ್ ಬ್ಯಾಟಿಂಗ್:ಬೇ ಓವಲ್ ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಅಲ್ದೇ 16ನೇ ಬಾರಿಗೆ ಏಕದಿನದಲ್ಲಿ 100ಕ್ಕೂ ಅಧಿಕ ರನ್ ಕಲೆಹಾಕಿದ ಆಸೀಸ್ ನ ಆಡಂ ಗಿಲ್ ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೆಡನ್ ದಾಖಲೆ ಸರಿಗಟ್ಟಿದ್ರು. ಇದೇ ವೇಳೆ ರೋಹಿತ್ 68 ಮತ್ತು ಕೊಹ್ಲಿ 60 ರನ್ ಗಳಿಸಿ ಪೇವಿಲಿಯನ್ ಸೇರಿಕೊಂಡ್ರು.

ಕೆಳಕ್ರಮಾಂಕದಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿದ ಅಂಬಾಟಿ ರಾಯುಡು ಅಜೇಯ 40 ಮತ್ತು ದಿನೇಶ್ ಕಾರ್ತಿಕ್ ಅಜೇಯ 38 ರನ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಂತಿಮವಾಗಿ ಭಾರತ 43 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿ ಜಯದ ನಗೆ ಬೀರಿತು…

ಇದಕ್ಕೂ ಮೊದ್ಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಯ್ತು. ಮಾರ್ಟಿನ್ ಗಪ್ಟಿಲ್ 13, ಮನ್ರೋ ಹಾಗೂ ಕೇನ್ ವಿಲಿಯಂಸನ್ 28, ಟಾಮ್ ಲಥಾಮ್ 51 ರನ್ ಗಳಿಸಿ ಔಟಾದ್ರು. ಆದ್ರೆ ಏಕಾಂಗಿಯಾಗಿ ಬ್ಯಾಟ್ ಬೀಸಿದ ರಾಸ್ ಟೇಲರ್ 93 ರನ್ ಸಿಡಿಸಿದ್ದಾಗ ಶಮಿಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾದ್ರು.

ಇನ್ನುಳಿದಂತೆ ಬಾಲಂಗೋಚಿಗಳು ಕ್ರೀಸ್ ನಲ್ಲಿ ನಿಲ್ಲದೇ ಒಬ್ಬರ ಹಿಂದೆ ಒಬ್ಬರು ಡ್ರೆಸ್ಸಿಂಗ್ ರೂಮ್ ಸೇರಿಕೊಂಡ್ರು. ಹೀಗಾಗಿ ಕಿವೀಸ್ 49 ಓವರ್ ಗಳಲ್ಲಿ 243 ರನ್ ಗಳಿಗೆ ಆಲೌಟ್ ಆಯ್ತು. ಮೊಹಮ್ಮದ್ ಶಮಿ 3 ವಿಕೆಟ್ , ಭುವಿ, ಚಹಲ್ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 2 ವಿಕೆಟ್ ಪಡೆದು ಮಿಂಚಿದ್ರು.

LEAVE A REPLY

Please enter your comment!
Please enter your name here