Home Crime ಗರ್ಲ್ ಫ್ರೆಂಡ್ ಗಾಗಿ ಹೆತ್ತವಳನ್ನೇ ಪೊರಕೆಯಿಂದ ಥಳಿಸಿದ ಕಿರಾತಕ..! ತಾಯಿಯನ್ನೇ ಕಾಲ ಕಸದಂತೆ ಕಂಡ ಯುವಕ..!

ಗರ್ಲ್ ಫ್ರೆಂಡ್ ಗಾಗಿ ಹೆತ್ತವಳನ್ನೇ ಪೊರಕೆಯಿಂದ ಥಳಿಸಿದ ಕಿರಾತಕ..! ತಾಯಿಯನ್ನೇ ಕಾಲ ಕಸದಂತೆ ಕಂಡ ಯುವಕ..!

2354
0
SHARE

ಗಂಡು ಮಕ್ಕಳಾಗ್ಲಿ ಗಂಡು ಮಕ್ಕಳಾಗ್ಲಿ ಅಂತ ಆ ತಾಯಿ ಕಂಡ ಕಂಡ ದೇವರಿಗೆಲ್ಲಾ ಹರಕೆ ಹೊತ್ತಿದ್ರು. ಆ ತಾಯಿ ಗಂಡು ಮಗ ಹುಟ್ಟಿದ ಅಂತ ಮುದ್ದಿನಿಂದ ಬೆಳೆಸಿದ್ರು. ಆದ್ರೆ ವಯಸ್ಸಿಗೆ ಬಂದ ಬಳಿಕ ಆತ ಮಾಡಿದ್ದೇನು ಗೊತ್ತಾ ?ಇದು ವಯಸ್ಸಿಗೆ ಬಂದ ಮಗನೊಬ್ಬ ತಾಯಿಗೆ ಮಾಡ್ತಿರೋ ಸೇವೆ. ಬೆಂಗಳೂರಿನ ಜೆಪಿನಗರದಲ್ಲಿ ನಡೆದ ಘಟನೆಯಲ್ಲಿ ತಾಯಿ ಬುದ್ಧಿ ಹೇಳಿದ್ದಕ್ಕೆ ಮಗ ಈ ರೀತಿಯಾಗಿ ಥಳಿಸಿದ್ದಾನೆ.

ಅಂದಹಾಗೆ ಯಶೋಧ ಅನ್ನೋರ ಮಗನೇ ಈ ಜೀವನ್. ಇತ ವಯಸ್ಸಿಗೆ ಬರ್ತಿದ್ದ ಹಾಗೆ ಪೋಲಿ ಹುಡುಗರ ಸಹವಾಸ ಮಾಡಿ ಕುಲಗೆಟ್ಟು ಹೋಗಿದ್ದ. ಓದೋ ವಯಸ್ಸಲ್ಲೇ ಸಕಲ ದುಶ್ಚಟಗಳಲ್ಲಿ ಪಿಎಚ್ ಡಿ ಮಾಡಿದ್ದ.ಇವನಿಗೆ ಈ ವಯಸ್ಸಲ್ಲೇ ಗರ್ಲ್ ಫ್ರೆಂಡ್ ಒಬ್ಬಳು ಇದ್ಲು. ಆಕೆಯ ಜೊತೆಗೆ ಮಾಡಬಾರದ್ದನ್ನ ತಾಯಿಯ ಎದುರಿಗೆ ಮಾಡ್ತಿದ್ದ. ಇದ್ರಿಂದ ಮಗ ದಾರಿ ತಪ್ಪುತ್ತಿದ್ದಾನಲ್ಲಾ ಅಂತ ಸ್ವಲ್ಪ ಬೈದು ಬುದ್ಧಿ ಹೇಳಿದ್ರು.

ತಾಯಿ ಜೊತೆಗೆ ಅಕ್ಕಂದಿರು ಕೂಡ ಜೀವನ್‌ಗೆ ಹೀಗೆಲ್ಲಾ ಮಾಡಬಾರದ್ದಪ್ಪ ಅದು ತಪ್ಪು ಅಂತ ಹೇಳಿದ್ರು. ಆದ್ರೆ, ನನಗೆ ಬುದ್ಧಿ ಹೇಳುವಷ್ಟು ದೊಡ್ಡವರಾದ್ರ ನೀವು ಅಂತ ಅಮ್ಮನಿಗೆ ಪೊರಕೆ ತಗೊಂಡು ಹೊಡೆದಿದ್ದಾನೆ. ಬೇಕಾದ್ರೆ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ಕೊಡಿ ಅಂತಾ ಅವಾಜ್ ಹಾಕಿದ್ದಾನೆ. ತಾಯಿಗೆ ಥಳಿಸೋ ವೀಡಿಯೋವನ್ನ ಅಕ್ಕಂದಿರು ರೆಕಾರ್ಡ್ ಮಾಡ್ಕೊಂಡಿದ್ದಾರೆ. ಜೀವನ್ ಮನೆಗೊಬ್ಬ ಮಗ ಅಂತ ಎಲ್ಲಾ ಮುದ್ದಿನಿಂದ ಸಾಕಿದ್ರು.

ಅದ್ರೆ ಅದೇ ಅತಿಯಾದ ಪ್ರೀತಿಯಿಂದ ಈಗ ದಾರಿ ತಪ್ಪಿದ್ದಾನೆ. ಕೇವಲ ಗರ್ಲ್ ಫ್ರೆಂಡ್ ಗೋಸ್ಕರ ಅಮ್ಮನನ್ನ ಕಾಲು ಧೂಳಿನ ಹಾಗೆ ನೋಡಿಕೊಳ್ತಿದ್ದಾನೆ. ಆತ ತಾಯಿಗೆ ಹೊಡೆಯುತ್ತಿರೋ ವೀಡಿಯೋ ವೈರಲ್ ಆಗ್ತಿದ್ದ ಹಾಗೆ ಜೆಪಿ ನಗರ ಪೊಲೀಸ್ರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಠಾಣೆಗೆ ಕರೆಸಿ ಅಮ್ಮ ಅಂದ್ರೆ ಏನು, ಅವರ ಮಹತ್ವ ಏನು ಅನ್ನೋದರ ಬಗ್ಗೆ ಪಾಠ ಮಾಡಿದ್ದಾರೆ.

LEAVE A REPLY

Please enter your comment!
Please enter your name here