Home Cinema ಗೂಗ್ಲಿ ಹುಡುಗಿ ಕೃತಿ ಕರಬಂದ “ಬಾತ್ ಟಬ್”ನಲ್ಲಿ ಕೊಟ್ಟಿರೋ ನಾನಾ ಭಂಗಿಗಳ ಫೋಟೋ ಸಖತ್ ವೈರಲ್..!!...

ಗೂಗ್ಲಿ ಹುಡುಗಿ ಕೃತಿ ಕರಬಂದ “ಬಾತ್ ಟಬ್”ನಲ್ಲಿ ಕೊಟ್ಟಿರೋ ನಾನಾ ಭಂಗಿಗಳ ಫೋಟೋ ಸಖತ್ ವೈರಲ್..!! ಅಷ್ಟಕ್ಕೂ ಈ ಫೋಟೋಗಳ ಹಿಂದಿನಿ ರಹಸ್ಯವೇನು.? ಸ್ಟೋರಿ ಓದಿ…

2888
0
SHARE

ಕೃತಿ ಕರಬಂಧ…..ಗೂಗ್ಲಿ ಮೂಲಕ ಯುವ ಹೃದಯಕ್ಕೆ ಕನ್ನ ಹಾಕಿದ್ದ ಗ್ಲಾಮರ್ ಗೊಂಬೆ..ಚಿರು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟ ಕೃತಿಗೆ ಚಂದನವನದಲ್ಲಿ  ಅವಕಾಶಗಳ ಬಾಗಿಲು ಕೈ ಬೀಸಿ ಕರೆದಿತ್ತು. ಒಂದಾದ  ಮೇಲೆ ಒಂದು ಅವಕಾಶಗಳು ಸಾಲು ಸಾಲಾಗಿ ಗೂಗ್ಲಿ  ಹುಡುಗಿಯ ಮನೆ ಬಾಗಿಲಿಗೆ ಬಂದ್ವು..

ಚಂದನವನದ  ಸಿನಿ ಪ್ರೇಮಿಗಳಲ್ಲಿ ನೆಲೆಯೂರುತ್ತಲೆ ಬಿಟೌನ್ ಬಾಗಿಲು ತಟ್ಟಿದ ಕೃತಿ ಕರಬಂಧ ಹಾಟ್ ಫೋಟೋ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಪಡ್ಡೆ ಹುಡುಗರ ನಿದ್ದೆ ಕದ್ದಿದೆ.ಸೋಶಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಗೂಗ್ಲಿ ಬೆಡಗಿಯದ್ದೇ ಸಿಕ್ಕಾಪಟ್ಟೆ ಸೌಂಡು..ಈ ಗ್ಲಾಮರ್ ಗೊಂಬೆ ಹಾಕಿರುವ ಗೂಗ್ಲಿಗೆ ಪಡ್ಡೆ ಹುಡುಗರ ಹೃದಯದಲ್ಲಿ ಚಿಟ್ಟೆ ಬಿಟ್ಟಂಗೆ ಆಗಿದೆ..

ಅರೆ, ಅದ್ಯಾವುದಪ್ಪ ಆ ಫೋಟೋ, ಅಷ್ಟಕ್ಕೂ ಅದ್ರೆಲ್ಲೇನಿದೆ ವಿಶೇಷ ಅಂತಿರಾ. ಅಲ್ಲೇ ಇರೋದು ವಿಶೇಷ.ಕೃತಿ ಪೋಸ್ ಕೊಟ್ಟಿರೋದು ಯಾವುದೋ ಗ್ರೀನ್ರಿ ಲೋಕೇಷನ್ ನಲ್ಲಲ್ಲ.ಬದ್ಲಾಗಿ ಬಾತ್ ರೂಂ ನಲ್ಲಿ, ಬಾತ್ ಟಬ್ ಮೇಲೆ ..ಸದ್ಯ ಈ ಹಾಟ್ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗೂಗ್ಲಿ ಬೆಡಗಿಯ ಕಲರ್ ಫುಲ್ ಹಾಟ್ ಪೋಟೋ ಇದು.

ಹೀಗೆ ಸ್ವಿಮ್ ಸೂಟ್ ಧರಿಸಿ ಬಾತ್ ಟಬ್ ಮೇಲೆ ಹಾಟ್ ಆಗಿ  ಪೋಸ್ ಕೊಟ್ಟಿರುವ ಕೃತಿಯ ಪೊಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊನ್ನೆ ಮೊನ್ನೆಯಷ್ಟೇ ಪೋಲ್  ಡಾನ್ಸ್ ಮಾಡಿ ವಿಡಿಯೋ ಅಪ್ ಲೋಡ್ ಮಾಡಿ ಸುದ್ದಿಯಾಗಿದ್ದ ಕೃತಿ ಕರಬಂಧ ಈಗ ಈ ಹಾಟ್ ಪೋಟೋ ಮೂಲಕ  ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ..ಸದ್ದು ಮಾಡ್ತಿದ್ದಾರೆ.

ಪೋಟೋ ಗೆ ಸಿಕ್ಕಾಪಟ್ಟೆ ಲೈಕ್ಸ್, ಕಂಮೆಂಟ್ ಸುರಿ ಮಳೆಯೂ  ಆಗ್ತಿದೆ. ವೈರಲ್ಲೂ ಆಗ್ತಿದೆ.ಆಕ್ಚುಲಿ ಈ ಪೋಸು ಯಾವುದೇ ಸಿನಿಮಾಗಾಗಿ ಅಲ್ಲ. ಬದ್ಲಿಗೆ  ಮ್ಯಾಗ ಜಿನ್ ಗಾಗಿ ಮಾಡಿಸಿದ  ಹಾಟ್ ಪೋಟೋ ಶೂಟ್ ಇದು..ಎಸ್. ಎಕ್ಸಿಬಿಟ್  ಎಂಬ ಟೆಕ್ನಾಲಜಿ ಕಂ ಲೈಫ್ ಸ್ಟೈಲ್ ಮ್ಯಾಗ್ ಜಿನ್ ಗೆ ನೀಡಿರೋ ಭಾವ ಭಂಗಿ ಇದು. ಈ ಗ್ಲಾಮರ್ ಗೊಂಬೆಯ ಮಾದಕ ನೋಟ ಹಾವ ಭಾವ ಭಂಗಿ ಚಿಟ್ಟೆಯಂತ ರೆಕ್ಕೆಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಪಡ್ಡೆ ಹೈಕ್ಳು..

ಇನ್ನು ಚಂದನವನದಲ್ಲಿ ನೆಲೆಯೂರುತ್ತಲೆ ಬಾಲಿವುಡ್ ಅಂಗಳಕ್ಕೆ ಹಾರಿರುವ ಕೃತಿ ಬಿಟೌನ್ ಅಂಗಳದಲ್ಲಿ ಭದ್ರವಾಗಿ ನೆಲೆಯೂರಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ.. . ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಮೇಲೆ ತಮ್ಮ  ಅಂದ ಚೆಂದ ಗ್ಲಾಮರ್ ಮೂಲಕ ಮತ್ತಷ್ಟು ಅಟ್ರ್ಯಾಕ್ಟ್ ಮಾಡ್ತಿದ್ದಾರೆ..

ಸದ್ಯ ಬಿ ಟೌನ್ ನಲ್ಲಿ ಬ್ಯುಸಿಯಾಗಿರುವ ಕೃತಿ ಯಮಲಾ ಪಗ್ಲಾ ದೀವಾನ –ಫಿರ್ ಸೇ ಹಾಗು ಹೌಸ್ ಫುಲ್ -4 ಚಿತ್ರದಲ್ಲಿ  ಬ್ಯುಸಿಯಾಗಿದ್ದಾರೆ.ಎನಿ ವೇ.. ಗೂಗ್ಲಿಯ ಬೆಡಗಿ  ಬಾತ್  ಟಬ್  ಮೇಲೆ  ಕೊಟ್ಟಿರೋ ಪೋಸ್  ಸದ್ಯ ವೈರಲ್ ಆಗೋದ್ರ ಜೊತೆ ಪಡ್ಡೆ ಹುಡುಗರ ಮನಸ್ಸಲ್ಲಿ ಕಚಗುಳಿ ಇಡುತ್ತಿದ್ದು, ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುವಂತೆ ಮಾಡಿದೆ.

LEAVE A REPLY

Please enter your comment!
Please enter your name here