Home Cinema ಗೊತ್ತಾ..! ದರ್ಶನ್ ಮರುಜೀವ ನೀಡಿದ್ದು, ಅದ್ಯಾರಿಗೆ..! ನೆರಳಾಗಿ ನಿಂತಿದ್ದಾರೆ ಸಾರಥಿ, ಸ್ನೇಹಿತರ ಪಾಲಿಗೆ..!

ಗೊತ್ತಾ..! ದರ್ಶನ್ ಮರುಜೀವ ನೀಡಿದ್ದು, ಅದ್ಯಾರಿಗೆ..! ನೆರಳಾಗಿ ನಿಂತಿದ್ದಾರೆ ಸಾರಥಿ, ಸ್ನೇಹಿತರ ಪಾಲಿಗೆ..!

2013
0
SHARE

ದರ್ಶನ್ ಅಂದ್ರೇನೇ ಹಂಗೆ. ಯಾರಿಗೂ ಸುಲಭವಾಗಿ ಅರ್ಥವಾಗದ ವ್ಯಕ್ತಿತ್ವ. ತಾನಾಯ್ತು.. ತಮ್ಮ ಸಿನಿಮಾ ಆಯ್ತು.. ಅಭಿಮಾನಿಗಳಾಯ್ತು.. ಅಂಥ ತಮ್ಮ ಪಾಡಿಗೆ ತಾವಿರುವ ಇದೇ ಚಕ್ರವರ್ತಿ, ನಿಜ ಜೀವನದಲ್ಲೂ ಅನೇಕ ಸ್ನೇಹಿತರ ಜೀವನದ ಪಾಲಿನ ಸಾರಥಿನೂ ಹೌದು.ಹೌದು, ತಮ್ಮ.. ಸ್ನೇಹಿತರ ಸಿನಿಮಾಗಳ ಬೆನ್ನೆಲುಬಾಗಿ ದರ್ಶನ್ ಮೊದಲಿಂದನೂ ನಿಲ್ಲುತ್ತಾ ಬಂದಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಸ್ನೇಹಿತರ ಕರೆಗೆ ಒಗೂಟ್ಟು ಸ್ನೇಹಪೂರ್ವಕವಾಗಿ ಬಂದು ಸ್ನೇಹಿತನ ಡ್ಯೂಟಿ ನಿಭಾಯ್ಸುವ ದರ್ಶನ್, ಮರಿಟೈಗರ್ ವಿನೋದ್ ಪ್ರಭಾಕರ್ ಮರುಜನ್ಮಕ್ಕೂ ಕಾರಣವಾಗಿದ್ದಾರೆ.

ಇದು, ನಮ್ಮ ಮಾತಲ್ಲ ಬದ್ಲಾಗಿ ಖುದ್ದು ವಿನೋದ್ ಪ್ರಭಾಕರ್ ಹೇಳಿಕೊಂಡ ಮನದಾಳದ ಮಾತುಗಳು.ನಿಮಗೆ ಗೊತ್ತಿರಲಿ ಇತ್ತೀಚಿಗೆ ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೋ ಸಿನಿಮಾದ ಟೀಸರ್ ಬಿಡುಗಡೆಯಾಯ್ತು. ಟೀಸರ್ ಬಿಡುಗಡೆಗೊಳಿಸಲು ಮುಖ್ಯ ಅತಿಥಿಯಾಗಿ ಚಂದನವನದ ಓನ್ ಆಫ್ ದಿ ಆರಡಿ ಕಟೌಟ್ ಆಗಿರುವ ದರ್ಶನ್ ಬಂದಿದ್ದರು. ಟೀಸರ್‌ನ್ನೂ ಬಿಡುಗಡೆಗೊಳಿಸಿದ್ರು. ಇದೇ ವೇಳೆ ಮಾತನಾಡಿದ ವಿನೋದ್ ಪ್ರಭಾಕರ್, ನಾನು ಮತ್ತೆ ಸಿನಿಮಾರಂಗಕ್ಕೆ ಬರಲು ಕಾರಣ ಓನ್ & ಓನ್ಲೀ ದರ್ಶನ್ ಅಂದರು.

ನಿಮಗೆ ಗೊತ್ತಿರಲಿ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ವಿನೋದ್ ಸೋಲಿನಿಂದ ಕೆಂಗಟ್ಟಿದ್ದರು. ಚಿತ್ರರಂಗದ ಸಹವಾಸವೇ ಬೇಡ ಅಂಥ ದೂರ ಇದ್ದರು. ಆಗ, ವಿನೋದ್ ಪ್ರಭಾಕರ್ ಅವ್ರನ್ನ ಎಳೆದುಕೊಂಡು ಬಂದಿದ್ದು ಇನ್ಯಾರು ಅಲ್ಲ ಇದೇ ದರ್ಶನ್. ಅವತ್ತು, ನಾನ್ ತಿರುಗಿ ನಿಂತ್ರೆ ನನ್ನ ಬೆನ್ನ ಹಿಂದೆ ನೀನೆ ಇರ‍್ಬೇಕು ಅನ್ನುವ ಮಾತುಗಳನ್ನ ದರ್ಶನ್ ವಿನೋದ್ ಪ್ರಭಾಕರ್‌ಗೆ ಹೇಳಿದ್ದರು. ದರ್ಶನ್ ಆಡಿದ್ದ ಇದೇ ಮಾತುಗಳಿಂದ ಮತ್ತೆ ಕಂ ಬ್ಯಾಕ್ ಮಾಡಿದ ವಿನೋದ್ ತಮ್ಮ ಪರಿಶ್ರಮದ ಫಲದಿಂದ ಯಶಸ್ಸನ್ನೂ ಕಂಡರು.

ಭದ್ರವಾಗಿ ನೆಲೆ ನಿಂತರು.ಇನ್ನೂ ದರ್ಶನ್‌ಗಿರುವ ಕಾಮಿಡಿ ಸೆನ್ಸ್ ಬಗ್ಗೆ ಚಿತ್ರರಂಗದವ್ರಿಗೆ, ಸ್ನೇಹಿತರಿಗೆ ಮೊದಲಿಂದನೂ ಗೊತ್ತು. ಶ್ಯಾಡೋ ಸಿನಿಮಾದ ಹಾಡುಗಳ ಬಿಡುಗಡೆ ವೇದಿಕೆ ಇದೇ ಮಾತಿಗೆ ಮತ್ತೊಮ್ಮೆ ಸಾಕ್ಷಿಯಾಗಿತ್ತು. ಚಿತ್ರದ ಬಗ್ಗೆ ಮಾತನಾಡುತ್ತಾ, ವಿನೋದ್ ಪ್ರಭಾಕರ್‌ಗೆ ಶುಭ ಕೋರಿದ ದರ್ಶನ್, ಇದೇ ವೇಳೆ ಟೈಗರ್ ಪ್ರಭಾಕರ್‌ರಂತೇ ಮಿಮಿಕ್ರಿ ಮಾಡಿದ್ರು. ಬಸ್ಸು ಹಾರ್ಬರ್ ತಲುಪಲ್ಲ ಅನ್ನುವ ಡೈಲಾಗ್ ಹೊಡೆದ್ರು.ಅಂದ ಹಾಗೇ ವಿನೋದ್ ಪ್ರಭಾಕರ್‌ಗೆ ಶ್ಯಾಡೋ ಮೇಲೆ ಎಲ್ಲಿಲ್ಲದ ಕಾನ್ಫಿಡೆನ್ಸ್ ಇದೆ. ಸಿನಿಮಾದಲ್ಲಿ ಹಿಂದೆಂದೂ ನೋಡಿರದ ರಗಡ್ ಲುಕ್‌ನಲ್ಲಿ ವಿನೋದ್ ಇಲ್ಲಿ ಕಾಣಸಿಗಲಿದ್ದಾರೆ.

ಅಭಿಮಾನಿಗಳಿಗೆ ಸಿನಿಮಾ ಖಂಡಿತ ಇಷ್ಟವಾಗುತ್ತೆ ಅನ್ನುವ ನಂಬಿಕೆಯಲ್ಲಿರುವ ಮರಿಟೈಗರ್ ಸಿನಿಮಾ ಬಗ್ಗೆ ಹೇಳೋದಿಷ್ಟು.ಇನ್ನೂ ಟಿಟೌನ್ ಗಲ್ಲಿಗಳಲ್ಲಿ ಪಳಗಿರುವ ರವಿಗೌಡ ಶ್ಯಾಡೋಗೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದಲ್ಲಿದು ಇವ್ರ ಮೊದಲ ಪ್ರಯತ್ನ. ಇನ್ನೂ ತೆಲುಗು ಸಿನಿಮಾರಂಗದಲ್ಲಿ ಕೆಲ್ಸ ಮಾಡಿದ ಅನುಭವ ಇರುವ ಕಾರಣಕ್ಕೋ ಏನೋ.. ಶ್ಯಾಡೋ ಮೇಕಿಂಗ್ ತೆಲುಗು ಸಿನಿಮಾದಂತಿದೆಯಲ್ವಾ ಅನ್ನುವ ಭಾವ ಕಾಡುತ್ತೆ.

ಶೋಭಿತಾ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಸತ್ಯದೇವ್, ಉಮೇಶ್, ಕಿಲಾಡಿ ಲೊಕೇಶ್, ಭರಣಿ, ಧನರಾಜ್ ಚಿತ್ರದ ಇನ್ನುಳಿದ ಕಲಾವಿದರು. ಅಚ್ಚು ಚಿತ್ರದ ಸಂಗೀತ ನಿರ್ದೇಶಕ. ಚಕ್ರವರ್ತಿ ಚಿತ್ರದ ನಿರ್ಮಾಪಕ. ಅದೇನೆ ಇರ‍್ಲಿ, ಸದ್ಯ ಟೀಸರ್ ಮೂಲಕ ಸದ್ದು ಮಾಡಲು ಶುರುವಿಟ್ಟುಕೊಂಡಿರುವ ಶ್ಯಾಡೋ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅಲ್ಲಿವರೆಗೂ ಟೀಸರ್ ನೋಡಿ ಎಂಜಾಯ್ ಮಾಡಿ.

LEAVE A REPLY

Please enter your comment!
Please enter your name here