Home District ಜರ್ನಾದನ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಟಾಂಗ್..?! ರೆಡ್ಡಿ ಟಾಂಗ್ ಬೆನ್ನಲ್ಲೇ ಡಿಕೆಶಿ ಬಾಂಬ್..!? “ಗಣಿದಣಿಗಳ ಜಾತಕ...

ಜರ್ನಾದನ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಟಾಂಗ್..?! ರೆಡ್ಡಿ ಟಾಂಗ್ ಬೆನ್ನಲ್ಲೇ ಡಿಕೆಶಿ ಬಾಂಬ್..!? “ಗಣಿದಣಿಗಳ ಜಾತಕ ಬಿಚ್ಚಿಡಲಿದ್ದಾರಾ D.K.ಶಿವಕುಮಾರ್..!?”

3428
0
SHARE

ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅವ್ರನ್ನ ತರಾಟೆಗೆ ತೆಗೆದುಕೊಂಡ ರೆಡ್ಡಿ, ಶ್ರೀರಾಮುಲು ಅವ್ರನ್ನ 420 ಎಂದು ಕರೆಯುವ ಮೂಲಕ ವಾಲ್ಮೀಕಿ ಜನಾಂಗಕ್ಕೆ ಅಪಮಾನ ಮಾಡಿದ್ದೀನಿ ಎಂದರು. ಜೆಡಿಎಸ್ ನಿಂದ ವಲಸೆ ಬಂದು 250 ಮತಗಳಿಂದ ಗೆಲ್ತಾರೆ.

ಹಣದ ಚೀಲ ತಂದು ನೀವು ಬಳ್ಳಾರಿ ಜನರನ್ನು ಖರೀದಿ ಮಾಡಲು ಸಾಧ್ಯವಿಲ್ಲ.ಕನಕ ದುರ್ಗಮ್ಮ ನಿಮಗೆ ಒಳ್ಳೆಯದು ಒಳ್ಳೆಯದು ಮಾಡಲ್ಲ ಎಂದರು. ಸಿದ್ದರಾಮಯ್ಯ ಅವರು ವಾಲ್ಮೀಕಿ ಮತ್ತು ಕುರುಬ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಡಿಕೆಶಿ ತಂತ್ರ, ಕುತಂತ್ರಗಳಲ್ಲಿ ಪಿಎಚ್. ಡಿ‌ ಮಾಡಿದ್ದಾರೆ.

ದುಡ್ಡು ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಲು ಆಗಲ್ಲ. ಡಿಕೆಶಿವಕುಮಾರ ಮೊಳಕಾಲ್ಮೂರು, ರಾಂಪುರಕ್ಕೋ ಬರಲಿ.ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.ಅಕ್ರಮ ಗಣಿಗಾರಿಕೆ ವಿಚಾರವನ್ನು ಕೇವಲ ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ ಎಂದು ಇದೇ ವೇಳೆ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

ಜನಾರ್ದನ ರೆಡ್ಡಿ ವಾಗ್ದಾಳಿ ನಡೆಯುವೆಯೇ ನವೆಂಬರ್ 1 ರಂದು ಸಚಿವ ಡಿ.ಕೆ.ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಅಂದು ಮಹತ್ವದ ವಿಷಯ ಮಾತನಾಡುತ್ತೇನೆ ಎಂದು ಬಳ್ಳಾರಿಯಲ್ಲಿ ತಿಳಿಸಿದ್ದಾರೆ. ಮೊಳಕಾಲ್ಮೂರಿನಲ್ಲಿ ವಾಗ್ದಾಳಿ ನಡೆಸಿದ ಬೆನ್ನೆಲೆ ಡಿ.ಕೆ.ಶಿವಕುಮಾರ್ ಕರೆದಿರೋ ಸುದ್ದಿಗೋಷ್ಠಿ ಮಹತ್ವ ಪಡೆದುಕೊಂಡಿದ್ದಾರೆ. ಇದೇ ವೇಳೆ, ಜನಾರ್ದನ ರೆಡ್ಡಿ ಟೀಕೆಗಳಿಗೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.

ಯಾರೇ ರಂಗ ಪ್ರವೇಶ ಮಾಡಿದ್ರು ನಮಗೆ ಯಾವುದೇ ಸಮಸ್ಯೆ ಇಲ್ಲ. ದೊಡ್ಡ ದೊಡ್ಡವರೇ ಬರಲಿ ಪರವಾಗಿಲ್ಲ. ಚುನಾವಣೆಯಲ್ಲಿ ಇದನ್ನೆಲ್ಲಾ ನೋಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಹಜವಾಗಿ ನಡೆಯುವಂತಹದ್ದು.

ಬಳ್ಳಾರಿಯನ್ನು ಅಭಿವೃದ್ದಿ ಮಾಡಿದ್ವಿ ಅಂತಾ ಹೇಳುವವರು ಬಳ್ಳಾರಿಯ ಗಡಗಿ ಚೆನ್ನಮ್ಮ ವೃತ್ತವನ್ನು ಕೆಡವಿದವರು ಯಾರು, ಬಳ್ಳಾರಿ ಜಿಲ್ಲೆಯನ್ನು ಬರ್ಬಾದ್ ಮಾಡಿದವರು ಯಾರು. ಶ್ರೀರಾಮುಲುವನ್ನು ಏಕಾಂಗಿಯಾಗಿ ಮಾಡಿ ಹೋದವರು ಇಂದು ಬಂದು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here