Home Crime ಟ್ರಾಫಿಕ್ ಪೋಲಿಸರಿಗೆ ನಡು ಬೀದಿಯಲ್ಲೇ ಹಿಗ್ಗಾ-ಮುಗ್ಗಾ ಥಳಿಸಿದ ಕುಡುಕ..!? ಏಕೆ ಗೊತ್ತಾ..???

ಟ್ರಾಫಿಕ್ ಪೋಲಿಸರಿಗೆ ನಡು ಬೀದಿಯಲ್ಲೇ ಹಿಗ್ಗಾ-ಮುಗ್ಗಾ ಥಳಿಸಿದ ಕುಡುಕ..!? ಏಕೆ ಗೊತ್ತಾ..???

2399
0
SHARE

ಇತ್ತೀಚೆಗೆ ದಾವಣಗೆರೆಯಲ್ಲಿ ಆರಕ್ಷಕರಿಗೆ ರಕ್ಷಣೆ ಇಲ್ಲವೇನೋ ಎಂಬ ಆತಂಕ ಶುರುವಾಗಿದೆ. ಕಾರಣ, ತನ್ನ ಪಾಡಿಗೆ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಮೇಲೆ ಬೈಕ್ ಸವಾರನೋರ್ವ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕೈಗೆ ಸಿಕ್ಕ ವಸ್ತುಗಳಿಂದ ಪೊಲೀಸರ ಮೇಲೆ ಹಲ್ಲೆ ಎಸೆದು ಇಡೀ ರಸ್ತೆಯನ್ನೆ ರಣಾಂಗನ ಮಾಡಿದ್ಧಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸ್ ಇಲಾಖೆಯೇ ಬೆಚ್ಚಿ ಬೀಳುವಂತೆ ಮಾಡಿದೆ.

ಯಾವುದೇ ಒಬ್ಬ ವ್ಯಕ್ತಿ ಕುಡಿದ ಅಂದ್ರೆ ಭೂಮಿ ಮೇಲೆ ಅವನಿಗಿಂತ ಪರಾಕ್ರಮಿ ಮತ್ತೊರ್ವನಿಲ್ಲ ಎಂದುಕೊಳ್ಳುತ್ತಾರೆ. ತಾವು ನಿಂತಿರು ಜಾಗ ತಮ್ಮದೇ ಎಂದು ಕೊಳ್ಳುತ್ತಾರೆ, ಇನ್ನೂ ತಾವು ಏನ್ ಮಾಡಿದ್ರು ಅದೇ ಸರಿ ಎಂದುಕೊಂಡು ಮೈಯಲ್ಲಿ ಎಣ್ಣೆ ಹೇಗೆ ಆಡಿಸ್ತಾ ಇರುತ್ತೋ ಹಾಗೆ ಆಡ್ತಾ ಇರ್ತಾರೆ, ಅದೇ ರೀತಿ ಇಲ್ಲೊಬ್ಬ ಕುಡುಕ ಮಹಾಶಯ ಕುಡಿದು ರೂಲ್ಸ್ ಬ್ರೇಕ್ ಮಾಡಿದ್ದಲ್ದೆ ಕೇಳಿದ್ರೆ ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಇಲ್ನೋಡಿ ಪೊಲೀಸ್ರು ಎಂಬ ಭಯ ಇಲ್ದೆ ಹೆಂಗ್ ಕೈಗೆ ಸಿಕ್ಕಿದ್ದು ತಗೊಂಡು ಹೊಡಿತಾ ಇದಾನೆ ಅಂತ. ಈ ರೀತಿ ಪೊಲೀಸರಿಗೆ ಹೊಡಿತಾ ಇರೋದು ದಾವಣಗೆರೆಯಲ್ಲಿ, ದಾವಣಗೆರೆ ದಕ್ಷಿಣ ಸಂಚಾರ ಠಾಣೆಯ ಎಎಸ್ ಐ ಅಂಜಿನಪ್ಪ, ಹೆಡ್ ಕಾನ್ ಸ್ಟೇಬಲ್ ನಾರಾಯಣ್ ರಾಜ್ ಅರಸ್ ಹದಡಿ ರಸ್ತೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡ್ತಿದ್ರು. ಈ ವೇಳೆ ಬೈಕ್ ಚಾಲಕನೋರ್ವ ಕುಡಿದು ಹೆಲ್ಮೆಟ್ ಇಲ್ಲದೆ ಆಗಮಿಸಿದ್ದಾನೆ.

ಇತನನ್ನ ಪೊಲೀಸರು ಹಿಡಿದು ಹೆಲ್ಮೆಟ್ ಮತ್ತು ಬೈಕ್ ದಾಖಲೆ ಪಯತ್ರಗಳನ್ನು ಕೇಳಿದ್ದಾರೆ. ಇಷ್ಟು ಕೇಳಿದ್ದೇ ಸಾಕು ಮೈಯಲಿದ್ದ ಎಣ್ಣೆ ಕಿಕ್ಕು ಪುಲ್ ರೈಸ್ ಆಗಿ ಪೊಲೀಸರಿಗೆ ಓಡಾಡಿಸಿಕೊಂಡು ಹೊಡೆದಿದ್ದಾನೆ. ಇನ್ನೂ ಹೀಗೆ ಹಲ್ಲೆ ಮಾಡಿದ ವ್ಯಕ್ತಿ ದಾವಣಗೆರೆಯ ಸಿದ್ದರಾಮೇಶ್ವರ ಬಡಾವಣೆಯ ರುದ್ರಪ್ಪ ಎಂದು ಹೇಳಲಾಗುತ್ತಿದೆ. ಅಷ್ಟರಲ್ಲೆ ಸ್ಥಳಕ್ಕೆ ಬಂದ ಕೆಟಿಜೆ ನಗರ ಪೊಲೀಸರು ರುದ್ರಪ್ಪನನ್ನು ಠಾಣೆಗೆ ಕರೆದಯೊಯ್ದಿದ್ದಾರೆ.

ಘಟನೆಯಲ್ಲಿ ಎಎಸ್ ಐ ಆಂಜಿನಪ್ಪಗೆ ತಲೆ ಹಾಗೂ ಮುಖಕ್ಕೆ ಪೆಟ್ಟು ಬಿದ್ದಿದ್ದು, ಇದೀಗ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನು, ಪೊಲೀಸರ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಆರೋಪಿ ಕೆಟಿಜೆ ಪೊಲೀಸ್ ಠಾಣೆಯಲ್ಲಿ ಡ್ರಾಮಾ ಶುರುವಿಟ್ಟುಕೊಂಡಿದ್ದ, ಒಮ್ಮೆ ವಕೀಲ ಎಂದರೆ ಮತ್ತೊಮ್ಮೆ ಸೈಕಿಯಾಟ್ರಿಕ್ ಅಂತೆಲ್ಲಾ ಬಡಾಬಡಾಯಿಸಿದ್ದಾನೆ. ಈತ ಮಾನಸಿಕ ಅಸ್ವಸ್ಥನೋ, ಎಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇನ್ನೂ ಆತನ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮತ್ತು ಹಲ್ಲೆ, ಕೊಲೆ ಬೆದರಿಕೆ ಅಡಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಒಟ್ಟಾರೆ, ದಾವಣಗೆರೆಯಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಪೊಲೀಸರೇ ಬೆಚ್ಚಿ ಬೀಳುವಂತೆ ಮಾಡಿದೆ. ಆದರೂ, ಸಾರ್ವಜನಿಕರ ರಕ್ಷಣೆಗಿರುವ ಆರಕ್ಷಕರ ಮೇಲೆಯೇ ಇಂತಹ ಹೇಯ ಕೃತ್ಯಗಳು ನಡೆಯುತ್ತಿರುವುದು ವಿಪರ್ಯಾಸ.

LEAVE A REPLY

Please enter your comment!
Please enter your name here