Home Cinema ಡಾಲಿ ಧನಂಜಯ್ ಮಾತಿಗೆ ಅಭಿಮಾನಿಗಳು ಫ್ಲಾಟ್..!? “ಈ ಸಮಯದಲ್ಲಿ ನನ್ನ ಹುಟ್ಟು ಹಬ್ಬ ಮುಖ್ಯವಲ್ಲ”…!!?

ಡಾಲಿ ಧನಂಜಯ್ ಮಾತಿಗೆ ಅಭಿಮಾನಿಗಳು ಫ್ಲಾಟ್..!? “ಈ ಸಮಯದಲ್ಲಿ ನನ್ನ ಹುಟ್ಟು ಹಬ್ಬ ಮುಖ್ಯವಲ್ಲ”…!!?

3034
0
SHARE

ಧನಂಜಯ್.. ಡಾಲಿ ಪಾತ್ರದ ಮೂಲಕ ಪೋರಿಯರ್ ದಿಲ್ ಖದ್ದಿದ್ದ ಚೋರ. ಸದ್ಯ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಟಾಲಿವುಡ್‌ನಲ್ಲೂ ಕಮಾಲ್ ಮಾಡ್ತಿರುವ ಧನಂಭಯ್ ಅಭಿಮಾನಿಗಳಿಗೆ ಪ್ರೀತಿಯ ಕಿವಿ ಮಾತೊಂದನ್ನು ಹೇಳಿದ್ದಾರೆ. ಅಲ್ಲದೆ ಡಾಲಿ ಡೇ ಗೆ ಬ್ರೇಕ್ ಕೂಡ ಹಾಕಿದ್ದಾರೆ.ಧನಂಜಯ್ ಟಗರು ಸಕ್ಸಸ್ ಬಳಿಕ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ನಟ. ಇದೇ ೨೩ರಂದು ಧನಂಜಯ್ ಹುಟ್ಟುಹಬ್ಬ.

ಆದ್ರೆ ಧನಂಜಯ್ ಕೊಡಗು ಮತ್ತು ಕೇರಳದಲ್ಲಿ ಭಾರಿ ಮಳೆಗೆ ತತ್ತರಿಸಿರುವ ಈ ಸಮಯದಲ್ಲಿ ಹುಟ್ಟುಹಬ್ಬ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ ಅಂತ ಅಭಿಮಾನಿಗಳಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಈ ಕುರಿತು ಧನಂಜಯ್ ತಮ್ಮ ಫೇಸ್‌ಬುಕ್‌ನಲ್ಲಿ ಒಂದು ವಿಡಿಯೋ ವನ್ನು ಹಾಕಿದ್ದಾರೆ.

ಒಂದು ತಿಂಗಳಿನಿಂದ ಡಾಲಿ ಡೇ ಮಾಡಲು ಸಜ್ಜಾದ ಅಭಿಮಾನಿಗಳಿಗೆ ಉತ್ತಮ ಕೆಲಸಕ್ಕೆ ಕೈ ಜೋಡಿಸುವಂತೆ ಕರೆ ಕೊಟ್ಟಿದ್ದಾರೆ. ಸಂಭ್ರಮಾಚಣೆ ಮಾಡಲು ಇದು ಸರಿಯಾದ ಸಮಯವಲ್ಲ. ನನ್ನ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳ ಕಾತುರತೆ, ಖುಷಿ ಎಲ್ಲವೂ ಗೊತ್ತಾಗುತ್ತದೆ. ನಿಮ್ಮ ಅಭಿಮಾನ ನನಗೆ ದೊಡ್ಡದ್ದು. ಆದರೆ ಈ ದಿನ ಕೇರಳ ಹಾಗೂ ಕೊಡಗಿನಲ್ಲಿ ಆಗ್ತಿರುವ ತೊಂದರೆಗೆ ನಾವೆಲ್ಲಾ ಸ್ಪಂದಿಸಬೇಕಿದೆ.

ಇಂತಹ ಪರಿಸ್ಥಿತಿಯಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ ಅಂದಿದ್ದಾರೆ.ಆದ್ರೆ ಅಭಿಮಾನಿಗಳನ್ನು ಭೇಟಿ ಮಾಡಲು ಸಮ್ಮತಿಸಿರುವ ಧನಂಜಯ್. ಡಾಲಿ ಡೇ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಹಾಗಾಗಿನೇ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಪಟಾಕಿಗಾಗಿ ಹಣ ವ್ಯರ್ಥ ಮಾಡುವ ಬದಲು ಆ ಹಣವನ್ನು ನಿಮ್ಮ ಕೈಲಾದಷ್ಟು ದಾನ ಮಾಡುವಂತೆ ಕೇಳಿಕೊಂಡಿದ್ದಾರೆ.

ನೀವು ಕರೆದ ಜಾಗಕ್ಕೆ ಬಂದು ನಿಮ್ಮ ಜೊತೆ ಮತನಾಡಿ, ಫೋಟೊ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಇನ್ನೂ ಟಗರು ಬಳಿಕ ಭೈರವ ಗೀತಾ ಚಿತ್ರದಲ್ಲಿ ಧನಂಜಯ್ ಜಿಝೀಯಾಗಿದ್ದಾರೆ. ರಾಮ್ ಗೋಪಾಲ್ ವರ್ಮ ಶಿಷ್ಯ ಸಿದ್ಧಾರ್ಥ್ ನಿರ್ದೇಶನದಲ್ಲಿ ಚಿತ್ರ ಮೂಡಿಬರ್ತಿದೆ. ಈಗಾಗಲ್ಲೇ ಬಿಡುಗಡೆಯಾಗಿರುವ ಧನಂಜಯ್ ಲುಕ್‌ಗಳು ಚಿತ್ರದ ಮೇಲೆ ಕೂತೂಹಲ ಹೆಚ್ಚಿಸಿದ್ದು. ಚಿತ್ರ ಬೈ ಲ್ಯಾಂಗ್ವೇಜ್‌ನಲ್ಲಿ ತಯಾರಾಗ್ತಿದೆ.

ಅಲ್ಲದೆ ಸದ್ಯದಲ್ಲೇ ಟ್ರೇಲರ್ ಕೂಡ ರಿಲೀಸ್ ಮಾಡೋದಕ್ಕೆ ಚಿತ್ರತಂಡ ಕೂಡ ಪ್ಲಾನ್ ಮಾಡ್ತಿದೆ.
ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾದಲ್ಲಿ ಧನಂಜಯ್ ನಟಿಸುತ್ತಿದಾರೆ. ಅದಾದ ಬಳಿಕ ನಿರ್ದೇಶಕ ಸೂರಿ ಅವರ ಪಾಪ್ ಕಾರ್ನ್ ಮಂಕಿ ಟೈಗರ್ ಅಡ್ಡಾಗೆ ಧನು ಎಂಟ್ರಿಕೊಡಲಿದ್ದಾರೆ.

ಅದೇನೇ ಇದ್ರು ಸದ್ಯ ಡಾಲಿ ಡೇಯನ್ನು ರಾಜ್ಯಾದ್ಯಂತ ಆಚರಿಸಲು ಸಜ್ಜಾಗಿದ್ದ ಅಭಿಮಾನಿಗಳು ಧನು ನಿರ್ಧಾರದಿಂದ ಕೊಂಚ ನಿರಾಸೆಯಾಗಿದ್ರು. ಧನಂಜಯ್ ಅವರ ಉತ್ತಮ ಕೆಲಸಕ್ಕೆ ಕೈಜೋಡಿಸುವ ಪ್ಲಾನ್ ಕೂಡಾ ಮಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here