Home Home Home Page ತಾಲಿಬಾನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಬೈಡನ್

ತಾಲಿಬಾನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಬೈಡನ್

72
0
SHARE

ಸದ್ಯ ಕಾಬೂಲ್‌ನಲ್ಲಿ ಅಮೆeರಿಕ ಸೇನೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ವಿಮಾನಗಳ ಮೂಲಕ ತಮ್ಮ ನಾಗರಿಕರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಅಮೆeರಿಕದ ಕಾರ್ಯಾಚರಣೆಗೆ ತಾಲಿಬಾನಿಗಳು ಅಡ್ಡಪಡಿಸುತ್ತಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅಮೆeರಿಕ ಅಧ್ಯಕ್ಷ ಜೋ ಬೈಡೆನ್‌ ತಾಲಿಬಾನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.ಅಫ್ಘಾನಿಸ್ತಾನದಲ್ಲಿ ಜನರನ್ನು ಹಿಂಸಿಸುತ್ತ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಹಲವೆಡೆ ತಾಲಿಬಾನ್‌ ಭಾರೀ ಹಿಂಸಾಚಾರ ನಡೆಸುತ್ತಿರುವ ಬೆನ್ನಲ್ಲೇ ಈ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ನಮ್ಮ ಸೇನಾ ಪಡೆಗಳ ಮೇಲೆ ತಾಲಿಬಾನ್‌ ದಾಳಿ ನಡೆಸಿದರೆ, ತಾಲಿಬಾನ್‌ಗೆ ತಕ್ಕ ಪ್ರತ್ಯುತ್ತರ ಸಿಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಕೆ ನೀಡಿದ್ದಾರೆ.ವಿಮಾನ ನಿಲ್ದಾಣದ ಮೇಲೆ ಯಾವುದೇ ದಾಳಿ, ನಮ್ಮ ಪಡೆಗಳ ಮೇಲೆ ಯಾವುದೇ ದಾಳಿ ಅಥವಾ ನಮ್ಮ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ನಾವು ತ್ವರಿತ ಮತ್ತು ಬಲವಾದ ಪ್ರತಿಕ್ರಿಯೆಯನ್ನು ನೀಡಲಿದ್ದೇವೆ ಎಂದು ನಾವು ತಾಲಿಬಾನ್‌ಗೆ ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಬೈಡನ್‌ ತಿಳಿಸಿದ್ದಾರೆ. ಅಲ್ಲದೇ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಬಗ್ಗೆಯೂ ಗಮನ ಹರಿಸುತ್ತಿದ್ದು, ತಾಲಿಬಾನ್‌ ಚಟುವಟಿಕೆ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ಇನ್ನು ಮುಂದಿನ ವಾರ ನಡೆಯುವ ಜಿ-7 ರಾಷ್ಟ್ರಗಳ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಲಿದೆ. ತಾಲಿಬಾನ್ ಉಗ್ರರ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ. ತಾಲಿಬಾನ್ ಸಂಘಟನೆ ಯಾವತ್ತಿದ್ದರೂ ಅಮೆರಿಕದ ವಿರೋಧಿ. ಅಂತಿಮ ಫಲಿತಾಂಶ ಏನಾಗುತ್ತೆಂದು ನಾನು ಭರವಸೆ ನೀಡಲ್ಲ ಆದರೆ, ಅಫ್ಘಾನಿಸ್ತಾನವನ್ನು ಉಗ್ರರ ನೆಲೆಯಾಗುವುದಕ್ಕೆ ನಾವು ಬಿಡಲ್ಲ ಎಂದು ತಿಳಿಸಿದ್ದಾರೆ. ಸದ್ಯ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರ ಕಾರ್ಯಾಚರಣೆ ಅಪಾಯಕಾರಿ. ಅಫ್ಘಾನಿಸ್ತಾನದಲ್ಲಿನ ಸಂಭಾವ್ಯ ದಾಳಿಗಳನ್ನ ಗಮನಿಸುತ್ತಿದ್ದೇವೆ. ಏರ್ಪೋರ್ಟ್ ಹಾಗೂ ಅದರ ಸಮೀಪದ ಸ್ಥಳಗಳಲ್ಲಿನ ದಾಳಿಗಳನ್ನು ನೋಡುತ್ತಿದ್ದೇವೆ.ಆಫ್ಘಾನ್‌ನಿಂದ ಬರುವವರಿಗೆ ಅನುಕೂಲ ಮಾಡಿಕೊಡುತ್ತೇವೆ. ಅಲ್ಲಿನ ಜನರ ಜತೆ ನಾವಿದ್ದೇವೆ ಎಂದು ಬೈಡನ್ ಅಭಯ ನೀಡಿದ್ದಾರೆ. ನಾವು ಏನು ಹೇಳ್ತಿದ್ದೇವೋ ಅದನ್ನೇ ಮಾಡ್ತಿದ್ದೇವೆ. ಇದು ಭಯೋತ್ಪಾದನೆಯನ್ನ ಕೊನೆಗಾಣಿಸುವಂಥ ಸಮಯ. ನಾವು ಕಾಬೂಲ್ನ ಏರ್ಪೋರ್ಟ್ ಸುರಕ್ಷಿತಗೊಳಿಸಿದ್ದೇವೆ. ನಾವು ಆಫ್ಘಾನ್‌ ನಾಗರಿಕರ ಜತೆಗಿರುತ್ತೇವೆ, ಓಡಿ ಹೋಗಲ್ಲ. ಈಗಾಗಲೇ ಜುಲೈನಿಂದ 18 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಕಾಬೂಲ್‌ನಿಂದ 13,000 ಜನರನ್ನ ಸ್ಥಳಾಂತರ ಮಾಡಿದ್ದೇವೆ. ಅಮೆರಿಕಕ್ಕೆ ಬರಬೇಕೆನ್ನುವ ಅಫ್ಘನ್ ನಾಗರಿಕರಿಗೆ ಸ್ವಾಗತ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here