Home Elections 2019 ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಟ್ವೀಟ್..! ರಾಜೀವ್ ಗಾಂಧಿ ಕೊಂದವರ ಸಂಖ್ಯೆ “17,000”..!?

ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಟ್ವೀಟ್..! ರಾಜೀವ್ ಗಾಂಧಿ ಕೊಂದವರ ಸಂಖ್ಯೆ “17,000”..!?

4424
0
SHARE

ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖರ ನಡುವೆ ಟ್ವಿಟ್ ವಾರ್ ಮುಂದುವರಿದಿದೆ. ಇಂದು ಬೆಳಗ್ಗೆಯೇ ನಾಥೂರಾಮ್ ಗೋಡ್ಸೆಯನ್ನು ಬೆಂಬಲಿಸಿ ಸಂಸದ ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. ನಾಥೂರಾಮ್ ಗೋಡ್ಸೆ ಕೊಂದಿದ್ದು ಒಬ್ಬರನ್ನು, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72 ಹಾಗೂ ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ನಾಥೂರಾಮ್ ಗೋಡ್ಸೆಯನ್ನು ಬೆಂಬಲಿಸಿ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೂಡ ಟ್ವೀಟ್ ಮಾಡಿ, ಕೆಲವೇ ನಿಮಿಷದಲ್ಲಿ ತಮ್ಮ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ. ತಮ್ಮ ಟ್ವೀಟರ್ ಹ್ಯಾಕ್ ಆಗಿತ್ತು. ಹಾಗಾಗಿ ಎರಡು ಟ್ವೀಟ್ ಗಳನ್ನು ಬೇರೆ ಯಾರೋ ಪೋಸ್ಟ್ ಮಾಡಿದ್ದಾರೆ ಎಂದು ಅನಂತಕುಮಾರ್ ಹೆಗಡೆ ಮರು ಟ್ವೀಟ್ ಮಾಡಿದ್ದಾರೆ. ಬಿಜೆಪಿಗರ ಟ್ವೀಟ್ ಗೆ ಮೊದಲ ಪ್ರತಿಕ್ರಿಯೆ ನೀಡಿರೋದು ಮಾಜಿ ಸಿಎಂ ಸಿದ್ದರಾಮಯ್ಯ.

ಸಿದ್ದರಾಮಯ್ಯ ಅವರು ನೇರವಾಗಿಯೇ ಸ್ವಾದ್ವಿ ಪ್ರಜ್ಞಾಸಿಂಗ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಪ್ರಜ್ಞಾ ಸಿಂಗ್ ಗೆ ಕುಮ್ಮಕ್ಕು ನೀಡಿದ್ದಾರೆ. ಇದು ಸಂಘಪರಿವಾರ ತನ್ನ ಸಿದ್ದಾಂತವನ್ನು ಹರಡುತ್ತಿರುವುದರ ಸ್ಪಷ್ಟ ದ್ಯೋತಕ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here