Home Cinema ನಿಂದು ಯಾವ ಲಿಂಗ ನೋಡ್ಕೋ, ಅಕುಲ್ ಹೀಗಂದ್ರಾ..? ಸ್ವಾಭಿಮಾನವನ್ನ ಕೆಣಕಿದ ಅಕುಲ್ಗೆ, ಆಡಂ ಧಿಕ್ಕಾರ..!

ನಿಂದು ಯಾವ ಲಿಂಗ ನೋಡ್ಕೋ, ಅಕುಲ್ ಹೀಗಂದ್ರಾ..? ಸ್ವಾಭಿಮಾನವನ್ನ ಕೆಣಕಿದ ಅಕುಲ್ಗೆ, ಆಡಂ ಧಿಕ್ಕಾರ..!

2598
0
SHARE

ಬಿಗ್‌ಬಾಸ್ ಶೋನ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಕಳೆದ ಸೀಜನ್ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಆಂಡಿ, ಕವಿತಾ, ರಾಕೇಶ್, ಪಾಂಡವಪುರದ ಡ್ರಾಮಾ ಕ್ವೀನ್ ಅಕ್ಷತಾ, & ಆಡಂ ಪಾಶಾಗಳಿಂದ ತುಂಬಿದ್ದ ಒಂಟಿ ಮನೆಯ ಆಟ ಮುಗಿದಿದೆಯಾದ್ರೂ, ವಿವಾದಗಳೂ ಮುಗಿದಿಲ್ಲ.

ಇದಕ್ಕೆ ಇನ್ನೊಂದು ಉದಾಹರಣೆ ಆಡಂ ಪಾಶಾ.ಹೌದು, ಬಿಗ್ ಬಾಸ್ ಮನೆನಿಂದ ಹೊರಬಂದ್ಮೇಲೆ ಆಡಂ ಪಾಶಾ, ರಿಯಾಲಿಟಿ ಡ್ಯಾನ್ಸ್ ಶೋದಲ್ಲಿ ಭಾಗಿಯಾಗಿದ್ದರು. ಬಿಗ್ ಮನೆಯಲ್ಲೇ ತನ್ನ ಡ್ಯಾನ್ಸ್ ಸ್ಕಿಲ್ ಪ್ರದರ್ಶನ ಮಾಡಿದ್ದ ಆಡಂ ಪಾಶಾ, ಡ್ಯಾನ್ಸ್ ಶೋದಲ್ಲೂ ಮೆಚ್ಚುಗೆಗೆ ಪಾತ್ರವಾಗಿದ್ದರು. ಆದ್ರೆ ಅಕುಲ್ ಬಾಲಾಜಿಗ್ಯಾಕೋ ಆಡಂ ಮೊದಲಿಂದನೂ ಇಷ್ಟವಿದ್ದಂತೆ ಇರಲಿಲ್ಲವೇನೋ. ಹಾಗಾಗೇ, ಕ್ಷಣಕ್ಷಣಕ್ಕೂ ಅಕುಲ್ ಆಡಂರನ್ನ ಅವಮಾನ ಮಾಡ್ತಾನೇ ಬಂದಿದ್ದರಂತೆ.

ಜೋಕರ್ ಥರ ಟ್ರೀಟ್ ಮಾಡ್ತಿದ್ದಂತೆ. ಹಾಗಾಗಿ, ಬೇಸತ್ತ ಆಡಂ ಪಾಶಾ ಡ್ಯಾನ್ಸ್ ಶೋದಿಂದ ಹೊರಬಂದಿದ್ದಾರೆಆಡಂಗೆ ಅಕುಲ್ ಸ್ತ್ರೀಲಿಂಗನಾ, ಪುಲ್ಲಿಂಗನಾ.. ನಿಮ್ದು ಯಾವ ಲಿಂಗ ಚೆಕ್ ಮಾಡಿಕೊಳ್ಳಿ ಅಂದಿದ್ದಾರೆ. ಇದು, ಆತ್ಮಾಭಿಮಾನವನ್ನೇ ಉಸಿರಾಗಿಸಿಕೊಂಡು ಬದುಕು ಯಾರಿಗೇ ಆದರೂ ತಡದುಕೊಳ್ಳಲಾಗದ ಪೆಟ್ಟು.

ಇದೇ ಕಾರಣದಿಂದ.. ಶೋ, ಫೇಮ್‌ಗಿಂತ, ಸೆಲ್ಫ್ ರೆಸ್ಫೆಕ್ಟ್ ಮುಖ್ಯ ಅನ್ನುವ ಆಡಂ ಪಾಶಾ, ನನ್ನ ನಡೆಸಿಕೊಂಡ ರೀತಿಗೊಂದು ಧಿಕ್ಕಾರವಿರಲಿ ಅನ್ನುತ್ತಾರೆ.ಒಟ್ನಲ್ಲಿ ಬಿಗ್ ಮನೆಯೊಳಗೆ ಹೋಗಿ, ನಸೀಬು ಪರೀಕ್ಷೆ ಮಾಡ್ಕೊಂಡು..

ನೇಮು, ಫೇಮು ಗಳಿಸಿದ ಐದು ಮಂದಿಯ ಬದುಕು, ಐದು ದಿಕ್ಕಿನತ್ತ ತಿರುಗಿದೆ. ಮುಂದಿನ ದಿನಗಳಲ್ಲಿ ಇನ್ಯಾವ ತಿರುವು ಈ ಐದು ಜನರ ಬದುಕಿನಲ್ಲಿ ಕಾದು ಕುಂತಿದೆಯೋ ಅನ್ನೋದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ..

LEAVE A REPLY

Please enter your comment!
Please enter your name here