Home Cinema ಪ್ರಿಯಾ ವಾರಿಯರ್ ಮ್ಯಾಲೇ ದೀಪಿಕಾ ಪಡುಕೋಣೆಯ ಮನದ ಒಡೆಯ ರಣ್ವೀರ್ ಸಿಂಗ್‌ಗೂ ಪ್ರೀತಿಯಾಗಿದೆ..!? ಹಾಗಾದ್ರೆ ದೀಪಿಕಾ...

ಪ್ರಿಯಾ ವಾರಿಯರ್ ಮ್ಯಾಲೇ ದೀಪಿಕಾ ಪಡುಕೋಣೆಯ ಮನದ ಒಡೆಯ ರಣ್ವೀರ್ ಸಿಂಗ್‌ಗೂ ಪ್ರೀತಿಯಾಗಿದೆ..!? ಹಾಗಾದ್ರೆ ದೀಪಿಕಾ ಕಥೆ ಏನು ಅಂತಿರಾ..? ಸ್ಟೋರಿ ಓದಿ…

3385
0
SHARE

ಕಳೆದ ವರ್ಷ ಒರು ಅಡಾರ್ ಲವ್ ಸಿನಿಮಾದ ಸಾಂಗ್‌ನಲ್ಲಿ, ಪ್ರೀಯಾ ಕಣ್ ಹೊಡೆದಿದ್ದೇ ತಡ.. ಧೂಮಕೇತು ಬಂದು ಭೂಮಿಗೆ ಅಪ್ಪಳಿಸಿದಂಗೆ, ಪಡ್ಡೆಗಳ ಮನಸಿಗೆ, ಪ್ರಿಯಾ.. ಕಣ್ಣೇಟು ಅಪ್ಪಳಿಸಿತ್ತು. ಘಾಸಿ ಮಾಡಿತ್ತು.ಪ್ರಿಯಾಳ ಮುದ್ದಾದ ಎಕ್ಸ್‌ಫ್ರೆಶನ್ಸ್, ರಾಷ್ಟ್ರ ಮಟ್ಟದಲ್ಲಿ ವೈರಲ್ ಆಗಿತ್ತು. ಎಷ್ಟರ ಮಟ್ಟಿಗೆ ಅಂದ್ರೆ.. ಪ್ರಿಯಾ ಕಣ್ ಹೊಡೆತಕ್ಕೆ ದೊಡ್ಡ ದೊಡ್ಡವರೆಲ್ಲಾ ಬಲಿಯಾಗಿದ್ದರು. ಇದೀಗ, ಇದೇ ಪ್ರಿಯಾ ಮ್ಯಾಲೇ ದೀಪಿಕಾ ಪಡುಕೋಣೆಯ ಮನದ ಒಡೆಯ ರಣ್ವೀರ್ ಸಿಂಗ್‌ಗೂ ಪ್ರೀತಿಯಾಗಿದೆ.

ಅರೇ, ಪ್ರಿಯಾ ಮೇಲೆ ರಣ್ವೀರ್‌ಗೆ ಪ್ರೀತಿನಾ.. ಹಾಗಿದ್ದರೆ, ಡಿಪ್ಪಿಯ ಕಥೆ ಏನು ಅಂಥ ನೀವ್ ಗಾಬರಿಯಾಗಬೇಡಿ. ಕಾರಣ, ಇದು.. ಅಭಿಮಾನಿಯ ಪ್ರೀತಿ. ಹೌದು, ಅಸಲಿಗೆ ಪಡ್ಡೆಗಳ ಮನಸಿನ ರಾಣಿ ಪ್ರಿಯಾ ರಣ್ವೀರ್ ಸಿಂಗ್ ಅಭಿಮಾನಿ. ಹಾಗಾಗಿ, ರಣ್ವೀರ್‌ನ ಭೇಟಿಯಾಗುವ ಮಹಾಬಯಕೆ ಪ್ರಿಯಾಗಿತ್ತು. ಇದೇ ಬಯಕೆ ಇತ್ತೀಚಿಗೆ ಈಡೇರಿದೆ. ಹಾಗಾಗೇ, ಇದೇ ಖುಷಿಯಲ್ಲಿ ಸೆಲ್ಫೀಯನ್ನೂ ಕ್ಲಿಕಿಸಿಕೊಂಡಿರುವ ಪ್ರಿಯಾ, ತುಂಬು ಅಭಿಮಾನದಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿದ್ದಾರೆ.

ಹೀಗೆ ಪ್ರಿಯಾ ಹಂಚಿಕೊಂಡ ಇದೇ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.ಇನ್ನೂ.. ಪ್ರಿಯಾ ಸಂಭ್ರಮದ ಕ್ಷಣಕ್ಕೆ ಕಾರಣವಾಗಿದ್ದು ಉರಿ ಸಿನಿಮಾ. ಹೌದು, ಸರ್ಜಿಕಲ್ ಸ್ಟೈಕ್ ಆಧರಿಸಿ ಮಾಡಲಾದ ಉರಿ, ಮೊನ್ನೆಯಷ್ಟೇ ತೆರೆಗೆ ಬಂದಿತ್ತು. ಇದೇ ಸಿನಿಮಾದ ಪ್ರಿಮಿಯರ್‌ಗೆ ಪ್ರಿಯಾರನ್ನೂ ಆಹ್ವಾನಿಸಲಾಗಿತ್ತು. ಇದೇ ವೇಳೆ, ಪ್ರಿಯಾಗೆ ರಣ್ವೀರ್ ದರ್ಶನವಾಗಿದೆ. ಸಂಭ್ರಮನೂ ಹೆಚ್ಚಾಗಿದೆ.

ಅಂದ ಹಾಗೇ, ಪ್ರಿಯಾ ವಾರಿಯರ್ ಏನ್ ಮಾಡಿದ್ರೂ ಅದು ವೈರಲ್ ಆಗಬೇಕೆನ್ನುವ ಅಲಿಖಿತ ನಿಯಮ ಇದ್ದಂತಿದೆ. ಬಹುಶ, ಇದೇ ಕಾರಣಕ್ಕೋ ಏನೋ.. ಪ್ರಿಯಾ, ಫೋಟೊ ಹಂಚಿಕೊಂಡ ಕ್ಷಣಾರ್ಧದಲ್ಲೇ, ಫೋಟೊಗೆ ಅಭಿಮಾನಿಗಳ ವಿಪರೀತ ಪ್ರೀತಿ ಸಿಕ್ಕಿದೆ. ಬರೀ ರಣ್ವೀರ್ ಹಾಗೂ ಪ್ರಿಯಾ ಫೋಟೊವಷ್ಟೇ ಅಲ್ಲ, ವಿಕ್ಕಿ ಕುಶಾಲ್ ಜೊತೆ ಮಾಡಿರುವ ವಿಡಿಯೋನೂ.. ಸಿಕ್ಕಾಪಟ್ಟೆ ವೈರಲ್ ಆಗಿದೆ.ಹೌದು, ವಿಕ್ಕಿ ಕುಶಾಲ್.. ಪ್ರಿಯಾ ವಾರಿಯರ್ ಸ್ಟೈಲಿನಲ್ಲಿ, ಗನ್.. ಲೋಡ್ ಮಾಡಿದ್ದಾರೆ. ವಿಂಕ್ ಮಾಡಿ..

ವಿಂಕ್ ವಿಟಮಿನ್ ಪ್ರಿಯಾಗೆ ಸವಾಲು ಹಾಕಿದ್ದಾರೆ. ಸದ್ಯ, ಇವ್ರಿಬ್ಬರ ಇದೇ ಸ್ವೀಟ್ ಮೂವ್ಮೆಂಟ್ ಮತ್ತೊಮ್ಮೆ ಒರು ಅಡಾಲ್ ಲವ್‌ನ, ಪ್ರಿಯಾಳ ಸನ್ನಿವೇಶವನ್ನ ಎಲ್ಲರಿಗೂ ನೆನಪು ಮಾಡಿಕೊಡ್ತಿದೆ. ಒಟ್ನಲ್ಲಿ, ಇಂಟರ್‌ನೆಟ್ ಸೆನ್ಸೇಶನ್ ಆಗಿರುವ ಪ್ರಿಯಾ ವಾರಿಯರ್, ಬಹಳ ದಿನಗಳ ಬಳಿಕ ಮತ್ತೆ ಸುದ್ದಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ಯಾವ ವಿಚಾರಕ್ಕೆ ಪ್ರಿಯಾ ಸುದ್ದಿಯಾಗಿ ಸದ್ದು ಮಾಡ್ತಾರೋ ಕಾದು ನೋಡಬೇಕು

LEAVE A REPLY

Please enter your comment!
Please enter your name here