Home Crime ಪ್ರೀತಿಗಾಗಿ ಸ್ನೇಹಿತನನ್ನೆ ಚಾಕುವಿನಿಂದ ಇರಿದು ಕಗ್ಗೊಲೆ..! ಹುಡುಗಿ ವಿಚಾರಕ್ಕೆ ದಯಾಸಾಗರ್ ನನ್ನ ಕೊಂದ ವಿದ್ಯಾರ್ಥಿ ರಕ್ಷಿತ್..!

ಪ್ರೀತಿಗಾಗಿ ಸ್ನೇಹಿತನನ್ನೆ ಚಾಕುವಿನಿಂದ ಇರಿದು ಕಗ್ಗೊಲೆ..! ಹುಡುಗಿ ವಿಚಾರಕ್ಕೆ ದಯಾಸಾಗರ್ ನನ್ನ ಕೊಂದ ವಿದ್ಯಾರ್ಥಿ ರಕ್ಷಿತ್..!

3372
0
SHARE

ತ್ರಿಕೋನ ಪ್ರೇಮ ಕಥೆಯಿಂದಾಗಿ ಸ್ನೇಹಿತರ ನಡುವಿನ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ನೆಲಮಂಗಲ ಬಳಿ ಇರುವ ಸೌಂದರ್ಯ ಪಿಯು ಕಾಲೇಜಿನಲ್ಲಿ ಘಟನೆ ನಡೆದಿದೆ. ದ್ವೀತಿಯ ಪಿಯು ವ್ಯಾಸಾಂಗ ಮಾಡ್ತಿದ್ದ ದಯಾಸಾಗರ್ ಹಾಗೂ ರಕ್ಷಿತ್ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ರು.

ಈ ಹಿಂದೆ ಕೂಡ ಇದೇ ವಿಚಾರಕ್ಕೆ ಹಲವು ಬಾರಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಆದ್ರೆ ಇಂದು ಕಾಲೇಜು ಆರಂಭಕ್ಕೂ ಮುನ್ನ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸೌಂದರ್ಯ ಕಾಲೇಜಿನ 4ನೇ ಮಹಡಿಯಲ್ಲಿರುವ ಶೌಚಾಲದಲ್ಲಿ ಇಬ್ಬರು ಮಾರಾಮಾರಿ ನಡೆಸಿಕೊಂಡಿದ್ದಾರೆ. ಈ ವೇಳೆ ದಯಾಸಾಗರ್ ಕುತ್ತಿಗೆಗೆ ರಕ್ಷಿತ್ ಚಾಕುವಿನಿಂದ ಇರಿದಿದ್ದಾನೆ.

ಸದ್ಯ ಪೊಲೀಸರು ರಕ್ಷಿತ್ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮೃತ ದಯಾಸಾಗರ್ ಕಾಲೇಜು ಬಸ್ ಡ್ರೈವರ್ ಪುತ್ರ ಎಂಬ ಮಾಹಿತಿ ಲಭ್ಯವಾಗಿದ್ದು, ಮೃತ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಯುವತಿ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಸೌಂದರ್ಯ ಕಾಲೇಜಿನಲ್ಲಿ ನಡೆದಿದೆ. ದಯಾಸಾಗರ್‌ಗೆ ಮೃತ ಪಿಯು ವಿದ್ಯಾರ್ಥಿ. ಕಾಲೇಜು ಆರಂಭವಾಗುವದಕ್ಕೂ ಮುನ್ನ ಕಾಲೇಜಿನ 4 ಮಹಡಿಯಲ್ಲಿ ದಯಾಸಾಗರ್, ರಕ್ಷಿತ್ ಎಂಬ ವಿದ್ಯಾರ್ಥಿಗಳ ಗಲಾಟೆ ನಡೆದಿದೆ.

ಈ ವೇಳೆ 4ನೇ ಮಹಡಿಯ ಶೌಚಾಲಯದಲ್ಲಿ ವಿದ್ಯಾರ್ಥಿ ದಯಾಸಾಗರ್‌ಗೆ ರಕ್ಷಿತ್ ಚಾಕು ಇರಿದ್ದಾನೆ. ಹತ್ಯೆಯಾದ ದಯಾ ಸಾಗರ್ ಕಾಲೇಜು ಬಸ್ ಡ್ರೈವರ್‌ನ ಪುತ್ರ. ಇನ್ನು ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here