Home District ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಕತ್ತಿ ಬ್ರದರ್ಸ್ ಅಸಮಾಧಾನ..! ಮನವೊಲಿಕೆಗೆಗಾಗಿ B.S.ಯಡಿಯೂರಪ್ಪ ಪ್ರಯತ್ನ..! ಡೈರಿ ವಿಚಾರ ಕೆದಕಿದ...

ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಕತ್ತಿ ಬ್ರದರ್ಸ್ ಅಸಮಾಧಾನ..! ಮನವೊಲಿಕೆಗೆಗಾಗಿ B.S.ಯಡಿಯೂರಪ್ಪ ಪ್ರಯತ್ನ..! ಡೈರಿ ವಿಚಾರ ಕೆದಕಿದ ರಾಹುಲ್ ಗಾಂಧಿ ವಿರುದ್ಧ ಬಿಎಸ್ವೈ ಕಿಡಿ…!

3073
0
SHARE

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಕತ್ತಿ ಬ್ರದರ್ಸ್ ತೀವ್ರ ಅಸಮಾಧಾನ ಗೊಂಡಿದ್ದಾರೆ. ಇಂದು ಹುಕ್ಕೇರಿ ಪಟ್ಟಣದಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದು ತಮ್ಮ ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸಿಲಿದ್ದಾರೆ.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪತಿ ಅಣ್ಣಾಸಾಬ್ ಜೊಲ್ಲೆಗೆ ಟಿಕೆಟ್ ನೀಡಿರುವುದಕ್ಕೆ ಕತ್ತಿ ಬ್ರದರ್ಸ್ ತೀವ್ರ ಮುನಿಸಿಕೊಂಡಿದ್ದಾರೆ. ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಚಿಕ್ಕೋಡಿ ಟಿಕೆಟ್ ಸಿಗುತ್ತೆ ಎಂದು ಹೇಳಲಾಗಿತ್ತು.

ಆದ್ರೆ ಕೊನೆ ಕ್ಷಣದಲ್ಲಿ ಟಿಕೆಟ್ ರಮೇಶ್ ಕತ್ತಿ ಕೈ ತಪ್ಪಿದ್ದು ಅಣ್ಣಾ ಸಾಹೇಬ್ ಜೊಲ್ಲೆಗೆ ಸಿಕ್ಕಿದೆ. ಈ ಹಿನ್ನೆಲೆ ಕತ್ತಿ ಸಹೋದರರು ಟಿಕೆಟ್ ಬಗ್ಗೆ ಮರುಪರಿಶೀಲನೆಗೆ ಯಡಿಯೂರಪ್ಪಗೆ ಏಪ್ರಿಲ್ 4ರವರೆಗೆ ಕಾಲಾವಕಾಶ ಕೊಟ್ಟಿದ್ರು. ಅಲ್ಲದೆ ಇಂದು ಕಾರ್ಯಕರ್ತರ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ರು.

ಬೆಳಗಾವಿ ರಾಜಕಣದಲ್ಲಿ ಕತ್ತಿ ಬ್ರದರ್ಸ್ ಬಹಳಷ್ಟು ಪ್ರಭಾವಿಗಳಾಗಿದ್ದು ಅವರು ಬಿಜೆಪಿ ತೊರೆದ್ರು ಪಕ್ಷಕ್ಕೆ ಭಾರೀ ಹೊಡೆತ ಬೀಳುತ್ತೆ ಈ ಹಿನ್ನೆಲೆ ಯಡಿಯೂರಪ್ಪ ಖುದ್ದಾಗಿ ತಾವೇ ಸಂಧಾನಕ್ಕೆ ನಿರ್ಧರಿಸಿದ್ದು ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಯ ಕೆ.ಎಲ್.ಇ ಗೆಸ್ಟ್ ಹೌಸನಲ್ಲಿ ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಜೊತೆ ಸಭೆ ಕೂಡ ಫಿಕ್ಸ್ ಆಗಿದೆ.

ಇನ್ನು ಕತ್ತಿ ಬ್ರದರ್ಸ್ ಅಸಮಾಧಾನದ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕತ್ತಿ ಸಹೋದರರು ಪಕ್ಷ ತೊರೆಯಲ್ಲ. ಅವರು ಪಕ್ಷದಲ್ಲೇ ಇದ್ದು ಗೆಲುವಿಗೆ ಸಹಕರಿಸುತ್ತಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here