Home Cinema ಬ್ಯಾಡ್ ಮ್ಯಾನರ್ಸ್ ಜೊತೆಯಲ್ಲಿ ಡಿ ಬಾಸ್..ಅಮ್ಮನ ಜೊತೆಯಲ್ಲಿ ದೊಡ್ಡಮಗ ದರ್ಶನ್ ತೂಗುದೀಪ್..!

ಬ್ಯಾಡ್ ಮ್ಯಾನರ್ಸ್ ಜೊತೆಯಲ್ಲಿ ಡಿ ಬಾಸ್..ಅಮ್ಮನ ಜೊತೆಯಲ್ಲಿ ದೊಡ್ಡಮಗ ದರ್ಶನ್ ತೂಗುದೀಪ್..!

575
0

ದುನಿಯಾ ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ನಾಯಕನಟನಾಗಿ ನಟಿಸುತ್ತಿರುವ ಎರಡನೇ ಚಿತ್ರ ಬ್ಯಾಡ್ ಮ್ಯಾನರ್ಸ್…! ಅಮರ್ ಚಿತ್ರದ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳಿರುವ ಅಭಿಷೇಕ್ ಅಂಬರೀಶ್ ಈಗ ಬ್ಯಾಡ್ ಮ್ಯಾನರ್ಸ್ ಆಗಿ ಅಭಿಮಾನಿಗಳ ಮುಂದೆ ಬರಲು ತಯಾರಾಗಿ ನಿಂತಿದ್ದಾರೆ..ಸಂಸದೆ ಸುಮಲತಾ ಅಂಬರೀಶ್ ಅವರ ದೊಡ್ಡ ಮಗ ಎಂದೇ ಗುರುತಿಸಿಕೊಂಡಿರುವ ತೂಗುದೀಪ್ ದರ್ಶನ್ ಇಂದು ಮಂಡ್ಯದಲ್ಲಿ ನಡೆಯುತ್ತಿರುವ ಬ್ಯಾಡ್ ಮ್ಯಾನರ್ಸ್ ಚಿತ್ರಗ್ರಹಣ ದ ಸ್ಥಳಕ್ಕೆ ಸುಮಲತಾ ಅಂಬರೀಶ್ ರವರ ಜೊತೆ ಭೇಟಿಕೊಟ್ಟು ಅಭಿಷೇಕ್ ಅಂಬರೀಶ್ ಹಾಗು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಮಂಡ್ಯದ ಸುತ್ತಮುತ್ತ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಸ್ಥಳಕ್ಕೆ ಸುಮಲತಾ ಅಂಬರೀಶ್ ಅವರ ಜೊತೆಗೂಡಿ ದರ್ಶನ್ ಸರ್ಪ್ರೈಸ್ ಆಗಿ ಬೇಟಿಕೊಟ್ಟು ಚಿತ್ರತಂಡಕ್ಕೆ ಹಲವು ಸಲಹೆಗಳನ್ನು ನೀಡಿದರು. ಅಂಬರೀಶ್ ಅವರ ಕುಟುಂಬದ ಜೊತೆ ನಿಕಟವಾಗಿ ಸಂಪರ್ಕವನ್ನು ಹೊಂದಿರುವ ಡಿಬಾಸ್ ಅಭಿಷೇಕ್ ಅಂಬರೀಶ್ ಅವರ ಚಿತ್ರಕ್ಕೆ ಹಲವು ಸಲಹೆಗಳನ್ನು ನೀಡಿ ಚಿತ್ರ ಮೂಡಿಬರಲೆಂದು ಪೂರ್ತಿಯಾಗಿ ಹಾರೈಸಿದರು.

ಕನ್ನಡದ ಸ್ಟಾರ್ ನಿರ್ದೇಶಕ ಕ್ರಿಯೇಟಿವ್ ಡೈರೆಕ್ಟರ್ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ವಿಭಿನ್ನ ಕಥೆಯುಳ್ಳ ಚಿತ್ರ ಎಂದು ಕೊಂಡಾಡಿದ ದರ್ಶನ್ ಅನುಭವಿ ನಿರ್ದೇಶಕ ಸೂರಿ ಅವರ ನಾಯಕತ್ವದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿ ಅಭಿಷೇಕ್ ಅಂಬರೀಶ್ ಹಾರೈಸಿದರು. ಅಮ್ಮ ಸುಮಲತಾರವರ ಜೊತೆ ಮೂರುಗಂಟೆಗಳ ಕಾಲ ನಲ್ಲಿ ಎಲ್ಲರೊಂದಿಗೂ ಬೆರೆತು ಮಾತನಾಡಿದ ಡಿಬಾಸ್ ನಗುನಗುತ್ತಲೇ ಚಿತ್ರತಂಡದೊಂದಿಗೆ ಕಾಲಕಳೆದರು.

Previous articleಶವ ಸಂಸ್ಕಾರವನ್ನೂ ಬಿಡದ ಆನ್ಲೈನ್ ಬುಕಿಂಗ್!
Next articleಅನಾಥವಾದ 5 ದಿನದ ಹಸುಗೂಸು; ಹೃದಯ ವಿದ್ರಾವಕ ಘಟನೆ!

LEAVE A REPLY

Please enter your comment!
Please enter your name here