Home District ಮಂಡ್ಯದಲ್ಲಿ ರಾಜಕೀಯವಾಗಿ ಅಂಬರೀಷ್ ಗೆ ಪುನರ್ಜನ್ಮ ನೀಡಿದ್ದೇ ನಾನು-ಸಚಿವ ಪುಟ್ಟರಾಜು | ಪುಟ್ಟರಾಜು ಅಂಬರೀಷ್ ಅವ್ರ...

ಮಂಡ್ಯದಲ್ಲಿ ರಾಜಕೀಯವಾಗಿ ಅಂಬರೀಷ್ ಗೆ ಪುನರ್ಜನ್ಮ ನೀಡಿದ್ದೇ ನಾನು-ಸಚಿವ ಪುಟ್ಟರಾಜು | ಪುಟ್ಟರಾಜು ಅಂಬರೀಷ್ ಅವ್ರ ಕಾಲಿಗೆ ಬಿದ್ದಿದ್ರು-ಸುಮಲತಾ…

2660
0
SHARE

ಅಂಬಿ ವಿಚಾರಕ್ಕೆ ಸಚಿವ ಪುಟ್ಟರಾಜು ಹಾಗೂ ಸುಮಲತಾ ನಡುವೆ ವಾಕ್ಸಮರ ತಾರಕ್ಕೇರಿದೆ. ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು. ಅಂಬಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ಅಂಬರೀಷ್ ಸಮಾಧಿ ಮುಂದೆ ನಿಂತು ಕೇಳಲಿ ಎಂದು ಸುಮಲತಾಗೆ ಪುಟ್ಟರಾಜು ಸವಾಲು ಹಾಕಿದ್ದಾರೆ.

ಪುಟ್ಟರಾಜು ಆರೋಪಕ್ಕೆ ಸುಮಲತಾ ತಿರುಗೇಟು ನೀಡಿದ್ದಾರೆ.ಪುಟ್ಟರಾಜು ಅಂಬರೀಷ್ ಅವ್ರ ಕಾಲಿಗೆ ಬಿದ್ದಿದ್ರು. ಇವಗ ಅಂಬರೀಷ್ ಇಲ್ಲ ಅಂತ ಬಾಯಿಗೆ ಬಂದಂತೆ ಮಾತಾಡ್ತಾರೆ. ಸಕ್ಸಸ್ ಆಸ್ ಮೆನಿ ಫಾದರ್ಸ್, ಫೇಲೂರ್ ಈಸ್ ಆರ್ಫನ್ ಎಂಬ ಇಂಗ್ಲೀಷ್ ಗಾದೆ ಉಲ್ಲೇಖಿಸಿದ ಸುಮಲತಾ ಟೀಕಾ ಪ್ರಹಾರ ನಡೆಸಿದರು.ಲೋಕಸಭೆ ಚುನಾವಣೆ ಸಮೀಪಿವಾಗುತ್ತಿದ್ದಂತೆ ಮಂಡ್ಯ ರಣಕಣ ಮತ್ತಷ್ಟು ರಂಗೇರುತ್ತಿದೆ…

ಪಕ್ಷೇತರ ಅಭ್ಯರ್ಥಿ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರುತ್ತಿದೆ.. ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಅದರಲ್ಲೂ ಸಿಎಂ ಕುಮಾರಸ್ವಾಮಿ ಆಪ್ತರ ಮನೆ ಮೇಲೆ ಆದಾಯ ತೆರಿಗೆ ದಾಳಿ ವಿಚಾರವಾಗಿ ಮುಖಂಡರುಗಳ ಕೆಸರೆರಚಾಟ ಹೆಚ್ಚಾಗಿದೆ.ಮಂಡ್ಯದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಸಚಿವ ಸಿ.ಎಸ್. ಪುಟ್ಟರಾಜು, ತಮ್ಮ ಆಪ್ತರ ಮೇಲೆ ಐಟಿ ದಾಳಿ ನಡೆಯಲು ಸುಮಲತಾ ಕಾರಣ ಎಂದು ಗುಡುಗಿದ್ದಾರೆ…

ಸುಮಲತಾ ಅಕ್ಕ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ರಾಮನಗರದಲ್ಲಿ ಅಂಬರೀಷ್ ಸೋತಾಗ ಅವರಿಗೆ ಮಂಡ್ಯದಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದೇ ನಾನು ಎಂದು ತಿರುಗೇಟು ನೀಡಿದ್ದಾರೆ.. ಅಂಬಿ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸುವ ಮುನ್ನ ಸುಮಲತಾ ಕಣ್ಣು ಮುಚ್ಚಿಕೊಂಡು ಒಮ್ಮೆ ನಮ್ಮ ಬಗ್ಗೆ ನೆನಪಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಪುಟ್ಟರಾಜು ಆರೋಪಕ್ಕೆ ಸುಮಲತಾ ತಿರುಗೇಟು ನೀಡಿದ್ದಾರೆ. ಪುಟ್ಟರಾಜು ಅಂಬರೀಷ್ ಅವ್ರ ಕಾಲಿಗೆ ಬಿದ್ದಿದ್ರು.

ಇವಗ ಅಂಬರೀಷ್ ಇಲ್ಲ ಅಂತ ಬಾಯಿಗೆ ಬಂದಂತೆ ಮಾತಾಡ್ತಾರೆ. ಮನಸಾಕ್ಷಿ ಇರೋರು ಈತರ ಮಾತಾಡಲ್ಲ. ಅಂಬರೀಷ್ ಯಾರಿಂದಲೂ ಸಹಾಯ ಪಡೆದಿಲ್ಲ, ಬದಲಿಗೆ ಅನೇಕರಿಗೆ ಹೆಲ್ಪ್ ಮಾಡಿದ್ದಾರೆ.. ಸಕ್ಸಸ್ ಆಸ್ ಮೆನಿ ಫಾದರ್ಸ್, ಫೇಲೂರ್ ಈಸ್ ಆರ್ಫನ್ ಎಂಬ ಇಂಗ್ಲೀಷ್ ಗಾಧೆ ಉಲ್ಲೇಖಿಸಿದ ಸುಮಲತಾ ಟೀಕಾ ಪ್ರಹಾರ ನಡೆಸಿದರು.ಇನ್ನೊಂದೆಡೆ ಐಟಿ ದಾಳಿ ವಿಚಾರವಾಗಿ ಜೆಡಿಎಸ್ ನಾಯಕರು ಮಾಡುತ್ತಿರೋ ಆರೋಪಗಳನ್ನು ಸುಮಲತಾ ಅಂಬರೀಷ್ ತಳ್ಳಿ ಹಾಕಿದ್ದಾರೆ.

ನಿಖಿಲ್ ನಾಮಪತ್ರ ಗೊಂದಲ ಬಗ್ಗೆ ಮಾತನಾಡಿದ ಸುಮಲತಾ, ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಖಿಲ್ ನಾಮಪತ್ರ ಕಾನೂನು ಬದ್ದವಾಗಿಲ್ಲ. ಅದನ್ನ ಸರಿಪಡಿಸಲು ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನ ನಡೆದಿದೆ ಎಂದು ದೂರಿದ್ರು.ಇನ್ನೂ ಬೆಳ್ಳಂಬೆಳಗ್ಗೆ ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್‌ ಮಾಡಿದ್ದಾರೆ.

ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ ನಿಖಿಲ್ ಗೆ ಜನಬೆಂಬಲ ವ್ಯಕ್ತವಾಗಿದೆ.. ಕೆಲವಡೆ ಜನರೆ ಹಣ ನೀಡಿ ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಜನರು ಹರಿಸಿದ್ದಾರೆ..

LEAVE A REPLY

Please enter your comment!
Please enter your name here