Home Cinema ಮುನಿರತ್ನ ತಲೆಗೇರಿದ್ಯಾ ರಾಜಕೀಯ ಅಮಲು..! ಗಾಂಧಿನಗರದ ತಲೆಕೆಡಿಸಿದ ಬೆಟ್ಟಿಂಗ್ ಸವಾಲು..!

ಮುನಿರತ್ನ ತಲೆಗೇರಿದ್ಯಾ ರಾಜಕೀಯ ಅಮಲು..! ಗಾಂಧಿನಗರದ ತಲೆಕೆಡಿಸಿದ ಬೆಟ್ಟಿಂಗ್ ಸವಾಲು..!

2296
0
SHARE

ಕುರುಕ್ಷೇತ್ರ ಸಿನಿಮಾ ಈಗ ಮಾರಾಟಕ್ಕಿದಿಯಂತೆ. ಸ್ಯಾಂಡಲ್‌ವುಡ್‌ನ ಮೋಸ್ಟ್ ಆವ್ಯೆಟೆಡ್ ಸಿನಿಮಾಗೆ ಎಂತಹ ಪರಿಸ್ಥಿತಿ ಬಂದಿದೆ ಗೊತ್ತಾ? ಕುರುಕ್ಷೇತ್ರದ ಬಗ್ಗೆ ನಿರ್ಮಾಪಕ ಮುನಿರತ್ನ ಬಿಚ್ಚಿಟ್ಟ ಆ ಭಯಾನಕ ಸತ್ಯವೇನು? ಮುನಿರತ್ನ ಹೊಸ ಸವಾಲಿಗೆ ತತ್ತರಿಸಿ ಹೋಗಿದೆಯಂತೆ ಗಾಂಧಿನಗರ.

ಅಬ್ಬಬ್ಬಾ ಈ ರಾಜಕೀಯ ಚದುರಂಗದ ಆಟವನ್ನ ಗೆಲ್ಲುವ ಉದ್ದೇಶದಿಂದ ಮನುಷ್ಯ ಯಾವ ಸವಾಲಿಗಿಸ್ಕೋರವಾದ್ರೂ ರೆಡಿಯಾಗ್ತಾನೆ ಎನ್ನುವುದಕ್ಕೆ ನಮ್ಮ ಕನ್ನಡ ಚಿತ್ರರಂಗದ ಟಾಪ್ ನಿರ್ಮಾಪಕರಲ್ಲಿ ಒಬ್ಬರಾದ ಮುನಿರತ್ನ ಒಂದು ಫೈನ್ ಎಕ್ಸಾಂಪಲ್. ಮಹಾಭಾರತ ಯುದ್ಧದಲ್ಲಿ ಜೀವಗಳನ್ನೇ ಪಣಕ್ಕಿಡುವ ಪಾತ್ರಗಳನ್ನ ಹೊತ್ತು ತರ‍್ತೀರೊ ಕುರುಕ್ಷೇತ್ರ ಸಿನಿಮಾವನ್ನೇ ಈಗ ಮುನಿರತ್ನ ಜೂಜಾಟದಲ್ಲಿ ಪಣಕ್ಕಿಟ್ಟಿದ್ದಾರೆ.

ಇಷ್ಟುದಿನಗಳ ಕಾಲ ಕುರುಕ್ಷೇತ್ರ ಯಾವಾಗ ರಿಲೀಸ್ ಆಗುತ್ತೆ ಎಂಬ ಎಲ್ಲರ ಕಾಮನ್ ಪ್ರಶ್ನೆಗೆ ಉತ್ತರ ಕೊಡದೇ ಬಾಯಿಮೇಲೆ ಬೆರಳಿಟ್ಟುಕೊಂಡಿದ್ದ ನಿರ್ಮಾಪಕ ಈಗ ಯಾರ ಮೇಲೊ ಬೆಟ್ಟಿಂಗ್ ಕಟ್ಟುವ ಗಡಿಬಿಡಿಯಲ್ಲಿ ಅಚಾನಕ್ ಆಗಿ ಕುರುಕ್ಷೇತ್ರದ ಬಿಡುಗಡೆಯ ದಿನಾಂಕವನ್ನ ಘಂಟಘೋಷವಾಗಿ ಬಿಚ್ಚಿಟ್ಟಿದಾರೆ.ಆಫ್‌ಕೊರ್ಸ್ ಮುನಿರತ್ನ ಸಿನಿಮಾ ನಿರ್ಮಾಣದ ಜೊತೆಗೆ ರಾಜಕೀಯದಲ್ಲೂ ಆಕ್ಟಿವ್ ಆಗಿ ಗುರುತಿಸಿಕೊಂಡ ದಿಟ್ಟ ರಾಜಕಾರಣಿ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಬಹುಮತಗಳ ಅಂತರದಲ್ಲಿ ಗೆದ್ದ ಮುನಿರತ್ನ ನಂತರ ತಿರುಗಿನೋಡಲೇ ಇಲ್ಲ.

ಪಾಲಿಟಿಕ್ಸ್ ಹಾಗೂ ಸಿನಿಮಾವನ್ನ ಇಕ್ವಾಲಿ ಬ್ಯಾಲೆನ್ಸ್ ಮಾಡಿದ ಮುನಿರತ್ನ ಕುರುಕ್ಷೇತ್ರ ಸಿನಿಮಾ ಶುರು ಮಾಡಿದಾಗ ಇಡೀ ಸ್ಯಾಂಡಲ್‌ವುಡ್ ಆ ಸಿನಿಮಾದ ಬಜೆಟ್ ನೋಡಿ ಸುಸ್ತಾಗಿಬಿಡ್ತು. ಕುರುಕ್ಷೇತ್ರ ಕನ್ನಡದ ಮಾರ್ಕೆಟ್‌ನ ಎಲ್ಲೊ ಕರ‍್ಕೊಂಡು ಹೋಗುತ್ತೆ ಅಂತ ಸಿನಿಮಾ ಪಂಡಿತರು ಲೆಕ್ಕಚಾರ ಹಾಕೋಕೆ ಶುರು ಮಾಡಿದ್ರು. ದಚ್ಚು ಫ್ಯಾನ್ಸ್ ಚಾಲೆಂಜಿಂಗ್ ಸ್ಟಾರ್‌ನ ದುರ್ಯೋಧನನ ಕ್ಯಾರೆಕ್ಟರ್‌ನಲ್ಲಿ ನೆನೆಸಿಕೊಂಡು ಹಿರಿಹಿರಿ ಹಿಗ್ಗಿದ್ರು. ಆದರೆ ಈಗ ಮುನಿರತ್ನ ಕೊಟ್ಟರೋ ಶಾಕ್‌ನಿಂದ ಎಲ್ಲರೂ ಸಂಭಾಳಿಸಿಕೊಂಡು ಕುರುಕ್ಷೇತ್ರ ರಿಲೀಸ್ ಆದ್ರೆ ಸಾಕಪ್ಪ ಅಂತ ನಿಟ್ಟುಸಿರು ಬಿಟ್ಟಿದಾರೆ.

ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರು ಏನೇ ತಿಪ್ಪರ್‌ಲಾಗ ಹಾಕಿದ್ರೂ ಮುನಿರತ್ನ ಕುರುಕ್ಷೇತ್ರ ರಿಲೀಸ್ ಡೇಟ್ ಬಗ್ಗೆ ತುಟಿಕ್‌ಪಿಟಕ್ ಎಂದಿರಲಿಲ್ಲ .ಬದಲಾಗಿ ಕುರುಕ್ಷೇತ್ರ ಸದ್ಯಕ್ಕೆ ನಾಲ್ಕು ಭಾಷೆಗಳಲ್ಲಿ ಡಬ್ಬಿಂಗ್ ಆಗ್ತಿದೆ. ೨ ಡಿಯಲ್ಲಿ ಆಲ್‌ರೆಡಿ ತಯಾರಾಗಿದೆ. ನಾನು ಮನಸ್ಸು ಮಾಡಿದ್ರೆ ಈಗಲೇ ಕುರುಕ್ಷೇತ್ರ ಸಿನಿಮಾವನ್ನ ರಿಲೀಸ್ ಮಾಡಬಹುದು. ಆದರೆ ೩ಡಿಯಲ್ಲಿ ಚಿತ್ರ ರೆಡಿಯಾಗ್ತೀರೊ ಕಾರಣ ಸ್ವಲ್ಪ ವೈಟ್ ಮಾಡ್ರಪ್ಪ ಅಂತ ಬುದ್ಧಿವಂತಿಕೆಯ ಆನ್ಸರ್ ಕೊಟ್ಟಿದ್ರು.ಅಕಸ್ಮಾತ್ ನನ್ನ ನಿರೀಕ್ಷೆಯಂತೆ ಬರದೇ ಹೋದ್ರೆ ಕುರುಕ್ಷೇತ್ರ ಶಾಶ್ವತವಾಗಿ ರಿಲೀಸೇ ಆಗೋದಿಲ್ಲ ಅಂತ ದಚ್ಚು ಫ್ಯಾನ್ಸ್ ಚೊಕ್ ಕೊಟ್ಟಿದ್ರು.

ಆದರೆ ಈಗ ತಮ್ಮ ರಾಜಕೀಯ ವರ್ಚಸ್ಸಿನ ಉಳಿವಿನ ಆಟದ ಮುಂದೆ ಕುರುಕ್ಷೇತ್ರದ ರಿಲೀಸ್ ಡೇಟನ್ನ ಅನ್ವಾನ್ಸ್ ಮಾಡಿ ಎಲ್ಲರಿಗೂ ಕೊಂಚ ರಿಲೀಫ್ ಕೊಟ್ಟಿದಾರೆ. ಅದರಲ್ಲೂ ಈ ಸಲ ಕುಮಾರಣ್ಣ ಫೆಬ್ರವರಿ ಎಂಟನೇ ತಾರೀಖು ಬಜೆಟ್ ಮಂಡನೆ ಮಾಡೇಮಾಡ್ತಾರೆ. ಹಾಗೇನಾದ್ರೂ ಬಜೆಟ್ ಮಂಡನೆಯಾಗದೇ ಹೋದ್ರೆ ನಾನು ಸುಮಾರು ೫೦ ಕೋಟಿ ಬಜೆಟ್‌ನಲ್ಲಿ ತಯಾರಿಸಿರೋ ಕುರುಕ್ಷೇತ್ರ ಸಿನಿಮಾವನ್ನ ಬಿಜೆಪಿಯವರಿಗೆ ಕೇವಲ ಐದು ಕೋಟಿಗೆ ಸೇಲ್ ಮಾಡಿಬಿಡ್ತೀನಿ ಎನ್ನುವ ದೊಡ್ಡ ಬೆಟ್ಟಿಂಗ್ ಬಾಂಬ್ ಸಿಡಿಸಿದ್ದಾರೆ.

ಇದುವರೆಗೂ ಕುರುಕ್ಷೇತ್ರ ಸಿನಿಮಾ ರಿಲೀಸ್ ವಿಚಾರವಾಗಿ ಯಾವ ಸಣ್ಣ ಹಿಂಟ್ ಕೊಡದ ಮುನಿರತ್ನ ಈಗ ಈ ರೀತಿಯ ಓಪನ್ ಚಾಲೆಂಜ್ ಮಾಡಿರೋದು ಎಲ್ಲರಿಗೂ ಜೋರ್ ಕಾ ಜಟಕಾ ಕೊಟ್ಟಿದೆ ಎಂದ್ರೆ ತಪ್ಪಾಗಲ್ಲ ನೋಡಿ. ಬರೀ ಬಾಯಿ ಮಾತಿಗೆ ಮಾತ್ರ ಸೀಮಿತವಾಗದ ಈ ಬಿಗ್ ಚಾಲೆಂಜ್‌ಗೋಸ್ಕರ ಮುನಿರತ್ನ ಬರವಣಿಗೆಯಲ್ಲೂ ಬರೆದುಕೊಡೋಕೆ ತುದಿಗಾಲಲ್ಲಿ ನಿಂತಿದಾರೆ. ಸದ್ಯಕ್ಕೆ ಮುನಿರತ್ನ ಧೈರ್ಯ ನೋಡಿ ಗಾಂಧಿನಗರದ ಮಂದಿಗೆ ಏನು ಹೇಳ್‌ಬೇಕು ಹೊಳಿತಿಲ್ಲ. ಅಂತೂ ಬಿಜೆಪಿಯವರನ್ನ ಜೂಜಿನಾಟಕ್ಕೆ ಇನ್‌ವೈಟ್ ಮಾಡುವ ಭರದಲ್ಲಿ ಮುನಿರತ್ನ ದರ್ಶನ್ ಅಭಿಮಾನಿಗಳಿಗೆ ಸ್ವೀಟ್‌ನ್ಯೂಸ್ ಕೊಟ್ಟಿರೋದಂತೂ ಸುಳ್ಳಲ್ಲ.

ಒಟ್ಟಾರೆಯಾಗಿ ಬಿಜೆಪಿಯವರು ಮುನಿರತ್ನ ಚಾಲೆಂಜ್‌ಅನ್ನ ಸೀರಿಯಸ್ಸಾಗಿ ರಿಸೀವ್ ಮಾಡ್ತಾರಾ ಅಥವಾ ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಬಜೆಟ್ ಮಂಡಿಸುವ ಮೂಲಕ ಮುನರತ್ನ ಹೆಮ್ಮೆಯಿಂದ ಮೀಸೆ ತಿರುವೋ ಹಾಗೇ ಮಾಡ್ತಾರಾ ಕಾದುನೋಡಬೇಕಾಗಿದೆ. ಆದ್ರೆ ನೀವ್ ಮಾತ್ರ ಕ್ಯಾಲೆಂಡರ್‌ನಲ್ಲಿ ಕುರುಕ್ಷೇತ್ರ ರಿಲೀಸ್ ಡೇಟ್ ಏಪ್ರಿಲ್ ೫ ತಾರೀಖನ್ನ ಮಾರ್ಕ್ ಮಾಡಿಕೊಳ್ಳೊಕೆ ಮರಿಬೇಡಿ ಮತ್ತೆ.

LEAVE A REPLY

Please enter your comment!
Please enter your name here