Home Cinema ರಜನೀಕಾಂತ್ ಅಭಿನಯದ “ಕಾಲ” ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ವಿಘ್ನ..!! ಚಿತ್ರ ರಾಜ್ಯದಲ್ಲಿ ಬಿಡುಗಡೆಯಾದ್ರೆ ಚಿತ್ರಮಂದಿರಕ್ಕೆ ಬೆಂಕಿ...

ರಜನೀಕಾಂತ್ ಅಭಿನಯದ “ಕಾಲ” ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ವಿಘ್ನ..!! ಚಿತ್ರ ರಾಜ್ಯದಲ್ಲಿ ಬಿಡುಗಡೆಯಾದ್ರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಕನ್ನಡ ಪರ ವೇದಿಕೆಗಳು ಎಚ್ಚರಿಕೆ …

4436
0
SHARE

ರಜನೀಕಾಂತ್ ಅಭಿನಯದ ಕಾಲ ಚಿತ್ರ ಜೂನ್ ಏಳಕ್ಕೆ ವಿಶ್ವಾದ್ಯಂತ ತೆರೆಕಾಣುತ್ತಿದೆ..ಆದ್ರೆ ಕಾಲ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ವಿಘ್ನ ಉಂಟಾಗಿದೆ. ರಜನೀಕಾಂತ್ ಚಿತ್ರ ಕಾಲ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದು,..

ಕರ್ನಾಟಕ ರಕ್ಷಣಾ ವೇಧಿಕೆ ಹಾಗು ಕನ್ನಡ ಜನಪರ ವೇಧಿಕೆ ಸಿನಿಮಾ ಬಿಡುಗಡೆ ವಿರೋಧಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದೆ. ಒಂದು ವೇಳೆ ಚಿತ್ರ ರಾಜ್ಯದಲ್ಲಿ ಬಿಡುಗಡೆಯಾದ್ರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆಯನ್ನು ಕನ್ನಡ ಪರ ವೇಧಿಕೆಗಳು ನೀಡಿವೆ…

ಮನವಿ ಸ್ವೀಕರಿಸಿ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ ಗೋವಿಂದ್ ಕಾವೇರಿ ವಿಷಯದಲ್ಲಿ ರಜನೀಕಾಂತ್ ಪ್ರತಿಕ್ರಿಯೆ ನಮಗೆ ನೋವು ತಂದಿದೆ. ಚಿತ್ರ ವಿರೋಧಕ್ಕೆ ನನ್ನ ಬೆಂಬಲ ಇದೆ…

ವಿರೋಧದ ನಡುವೆಯೂ ಚಿತ್ರ ರಿಲೀಸ್ ಆದ್ರೆ ಅದ್ರ ಸಂಪೂರ್ಣ ಜವಾಬ್ದಾರಿಯನ್ನು ಚಿತ್ರದ ವಿತರಕರೇ ಹೊರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ…

LEAVE A REPLY

Please enter your comment!
Please enter your name here