Home Home Home Page ರಾಕಿ ಭಾಯ್ ಎಂಟ್ರಿಗೆ ಮುಹೂರ್ತ ಫಿಕ್ಸ್..!!

ರಾಕಿ ಭಾಯ್ ಎಂಟ್ರಿಗೆ ಮುಹೂರ್ತ ಫಿಕ್ಸ್..!!

137
0
SHARE

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ… ರಾಕಿ ಭಾಯ್ ಎಂಟ್ರಿಗೆ ಕೊನೆಗೂ ದಿನಾಂಕ ಫಿಕ್ಸ್ ಆಗೇ ಬಿಡ್ತು. ಹೌದು. ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾದು ಕುಳಿತಿದ್ದ ಕೆಜಿಎಫ್ ಚಾಪ್ಟರ್-2 ಸಿನಿಮಾ 2022 ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.ಈ ಬಗ್ಗೆ ಖುದ್ದು ರಾಕಿಂಗ್ ಸ್ಟಾರ್ ಯಶ್, ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಜೊತೆಗೆ ಹೊಸ ಪೋಸ್ಟರ್ ಒಂದನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ. ಈ ಹಿಂದೆ ಕೆಜಿಎಫ್ ಸಿನಿಮಾ ಟಾಲಿವುಡ್, ಬಾಲಿವುಡ್, ಕಾಲಿವುಡ್ ಸೇರಿದಂತೆ ಇಡೀ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿತ್ತು. ಅಷ್ಟೇ ಅಲ್ಲ, ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಅನ್ನ ನ್ಯಾಷನಲ್ ಸ್ಟಾರ್ ಆಗಿ ಮಾಡಿದ ಸಿನಿಮಾ ಕೆಜಿಎಫ್ಕನ್ನಡ ಚಿತ್ರರಂಗದ ಹೆಮ್ಮೆ. ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹೇಗೆ ಮೋಡಿ ಮಾಡಲಿದೆ ಅನ್ನೋದನ್ನ ಇನ್ನೂ ಸ್ಪಲ್ಪ ದಿನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here