Home Health ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ,ಸಂಸತ್ ಸದಸ್ಯರಿಗೂ ಬಂತಾ ಕರೋನಾ ಭಯ ..!!!!

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ,ಸಂಸತ್ ಸದಸ್ಯರಿಗೂ ಬಂತಾ ಕರೋನಾ ಭಯ ..!!!!

3196
0
SHARE

ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಪ್ರಧಾನಿ ಮೋದಿ, ರಾಷ್ಟ್ರಪತಿ ಭವನ ,ಸಂಸತ್ ಭವನ ಎಲ್ಲೆಡೆಯಲ್ಲಿಯೂ ಈಗ ಆತಂಕ ಆತಂಕ ಆತಂಕ. ಸ್ವತಃ ಭಾರತದ ರಾಷ್ಟ್ರಪತಿ, ಪ್ರಧಾನಿ ಮೋದಿ .ಭಾರತದ ಸಂಸತ್ ಸದಸ್ಯರು ಈಗ ಎಲ್ಲರೂ ಕೂಡ ಕೋರನ ವೈರಸ್ ಪರೀಕ್ಷೆಗೆ ಒಳಪಡುವಂತಾಗಿದೆ. ಹಾಗಾದರೆ ಗಣ್ಯಾತಿಗಣ್ಯರಿಗೆ ಕೋರನ ವೈರಸ್ ಹಬ್ಬಿತು .ಅದ್ಹೇಗೆ ಅಭೇಧ್ಯ ಭದ್ರಕೋಟೆಯಲ್ಲಿ ಬದುಕುವ ಇವರಿಗೆ ಕೋರನ ಅಟ್ಯಾಕ್ ಮಾಡ್ತಾ ಎಂಬುದು ಈಗ ಯಕ್ಷ ಪ್ರಶ್ನೆ .

ಅದು ಅಭೇದ್ಯ ಕೋಟೆ, ಅಲ್ಲಿ ಒಂದು ಚಿಕ್ಕ ಸೊಳ್ಳೆಯೂ ಒಳ ನುಸುಳದ ಭದ್ರಕೋಟೆ .ರಾಷ್ಟ್ರಪತಿ ವಾಸಿಸುವ ರಾಷ್ಟ್ರಪತಿ ಭವನ,ಪ್ರಧಾನಿ ನಿವಾಸ ಹಾಗೂ ಸಂಸತ್ ಭವನ ಆದರೂ ಈಗ ಈ ಮೂವರಿಗೆ ಚಿಕ್ಕದೊಂದು ಆತಂಕ ಶುರುವಾಗಿದೆ .ಕರೋನಾ ವೈರಸ್ ಇಲ್ಲೂ ಬಂತ ಅಂತ ಆತಂಕಗೊಂಡಿದ್ದಾರೆ .ಈ ಭದ್ರಕೋಟೆಯನ್ನು ಛಿದ್ರಗೊಳಿಸಿ ಕರೋನ ಎಂಬ ಮಾರಣಾಂತಿಕ ವೈರಸ್ ಅದ್ಹೇಗೆ ಭಾರತದ ರಾಷ್ಟ್ರಪತಿ ಭವನ, ಪ್ರಧಾನಿ ನಿವಾಸ ,ಸಂಸತ್ ಭವನಕ್ಕೆ ನುಗ್ಗಿತ್ತು ಎಂಬ ಕಥೆಯೇ ತುಂಬಾ ರೋಚಕಕಾರಿ.

ಅದು ಬಾಲಿವುಡ್ ನ ಗಾಯಕಿಗೆ ಬಂದ ಕರೋನಾ ವೈರಸ್ .ಇಷ್ಟಕ್ಕೂ ಬಾಲಿವುಡ್ ಗಾಯಕಿಗೆ ಕರೋನಾ ವೈರಸ್ ಬಂದರೆ ನಮ್ಮ ರಾಷ್ಟ್ರಪತಿ, ಪ್ರಧಾನಿಗಳು ಏಕೆ ಹೆದರಬೇಕು ಎಂದು ಯೋಚಿಸುತ್ತಿದ್ದೀರಾ ಅದೇ ಇಂಟ್ರೆಸ್ಟಿಂಗ್ ವಿಚಾರ. ಕನಿಕಾ ಕಪೂರ್…! ಯಸ್… ಬೇಬಿ ಡಾಲ್ ಹಾಡು ಖ್ಯಾತಿಯ ಬಾಲಿವುಡ್ ಗಾಯಕಿ. ಇತ್ತೀಚೆಗೆ ಕಾರ್ಯ ನಿಮಿತ್ತ ಲಂಡನ್ಗೆ ತೆರಳಿದ ಕನಿಕಾ ಕಪೂರ್ ಇದೇ ಮಾರ್ಚ್ ಹದಿಮೂರು ರಂದು ಮುಂಬಯಿ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬಂದಿಳಿದರು .ಮುಂಬೈನ ನಿಲ್ದಾಣದಲ್ಲಿ ಕನಿಕಾ ಕಪೂರ್‍ ಗೆ ಕರೋನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಯಿತು .ಆಗ ಅಲ್ಲಿ ಯಾವುದೇ ವೈರಸ್ ನ ಲಕ್ಷಣಗಳು ಕಂಡು ಬಂದಿರಲಿಲ್ಲ .ಆದ್ದರಿಂದ ವೈದ್ಯರು ಕನಿಕಾ ಕಪೂರ್ 14 ದಿನಗಳ ಮನೆಯಲ್ಲೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿ ಕಳುಹಿಸಿಕೊಟ್ಟರು ಮುಂಬೈನಿಂದ ನೇರವಾಗಿ ಕನಿಕಾ ಬಂದಿದ್ದು ಲಕ್ನೋದ ತಮ್ಮ ಮನೆಗೆ .

ಮುಂಬಯಿಯಿಂದ ಲಕ್ನೋಗೆ ಬಂದಿಳಿದ ಕನಿಕಾ ಕಪೂರ್ ಎಂಬ ಸುಂದರಿ ವೈದ್ಯರ ಸಲಹೆಯಂತೆ 14 ದಿನಗಳ ಕಾಲ ಮನೆಯಲ್ಲಿ ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ ವೈರಸ್ ನ ಯಾವ ಲಕ್ಷಣಗಳು ತಮ್ಮಲ್ಲಿ ಇಲ್ಲವಲ್ಲ ಅಂತ ಪಾರ್ಟಿ ಮಾಡಲು ಹೊರಟೇ ಬಿಟ್ಟರು ಕನಿಕಾ ಕಪೂರ್ .ಅದು ಹೇಳಿ ಕೇಳಿ ಹೋಳಿ ಹಬ್ಬದ ಸಮಯ ಉತ್ತರ ಭಾರತದಲ್ಲಂತೂ ಹೋಳಿ ಬಹುದೊಡ್ಡ ಹಬ್ಬ ಈ ಬಾರಿಯ ಹೋಳಿ ಹಬ್ಬವನ್ನು ಆಚರಿಸಬೇಡಿ ಅಂತ ಸರ್ಕಾರ ಎಷ್ಟೇ ಮನವಿ ಮಾಡಿದರೂ ಮಾಡಿದರೂ ಕೂಡ ಜನ ಒಪ್ಪಬೇಕಲ್ಲ ಹೂೊo ಜಪ್ಪಯ್ಯ ಅಂದರೂ ನಾರ್ತ್ ಇಂಡಿಯಾದಲ್ಲಿ ಹೋಳಿ ಹುಚ್ಚು ಕರೋನಾ, ಪ್ಲೇಗು ,ಕಾಲರಾ ,ಅಂದ್ರು ಜನ ಬಿಡಲಿಲ್ಲ ಇಂಥದ್ದೊಂದು ದೊಡ್ಡ ಹೋಳಿ ಪಾರ್ಟಿಯೊಂದಕ್ಕೆ ಮಾರ್ಚ್ 15 ರಂದು ಲಕ್ನೋದಲ್ಲಿ ಕನಿಕಾ ಕಪೂರ್ ಅಟೆಂಡ್ ಮಾಡಿಯೇ ಬಿಟ್ಟರು .

ಹೋಳಿ ಹಬ್ಬದ ಪ್ರಯುಕ್ತ ಲಕ್ನೋದಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಕನಿಕಾ ಕಪೂರ್ ಅಟೆಂಡ್ ಮಾಡಿದ್ದರು ಇದೇ ಪಾರ್ಟಿಯಲ್ಲಿ ಹಲವಾರು ಖ್ಯಾತ ಚಿತ್ರನಟರು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದರು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ ಅವರ ಪುತ್ರ ದುಷ್ಯಂತ್ ಸಿಂಗ್ ಉತ್ತರ ಪ್ರದೇಶದ ಸಚಿವ ಜೈ ಪ್ರತಾಪ್ ಸಿಂಗ್ ಕಾಂಗ್ರೆಸ್ ಮುಕಂಡ ನಿತಿನ್ ಪ್ರಸಾದ್ ಸೇರಿದಂತೆ ಸರಿ ಸುಮಾರು ಇನ್ನೂರು ಗಣ್ಯಾತಿ ಗಣ್ಯರು ಲಕ್ನೋದಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಆ ಪಾರ್ಟಿಯ ಪ್ರಮುಖ ಆಕರ್ಷಣೆಯೇ ಈ ಬೇಬಿ ಡಾಲ್ ಕನಿಕಾ ಕಪೂರ್ .ಪಾರ್ಟಿಯಲ್ಲಿ ಮೋಜು ಮಸ್ತಿ ಎಲ್ಲವೂ ಇತ್ತು ಕನಿಕಾ ಕಪೂರ್ ಗಳೊಂದಿಗೆ ಹಲವು ಜನರು ಕೂತು ಸೆಲ್ಫಿ ಫೋಟೋ ಕೂಡ ತೆಗೆದುಕೊಂಡರು. ಇಡೀ ರಾತ್ರಿ ಪಾರ್ಟಿ ಮಾಡಿ ಬಂದು ಮಲಗಿದ ಕನಿಕಾ ಕಪೂರ್ಗೆ ಬೆಳಗ್ಗೆ ಎದ್ದೊಡನೆ ನೆಗಡಿ ,ಕೆಮ್ಮು, ಜ್ವರ, ಕಾಣಿಸಿಕೊಂಡಿದೆ ಕೂಡಲೇ ಡಾಕ್ಟರನ್ನು ಸಂಪರ್ಕಿಸಿದ ಕನಿಕಾ ಪರೀಕ್ಷೆಗೆ ಒಳಪಟ್ಟಿದ್ದಾರೆ ಆಗಲೇ ಆಕೆಗೆ ಗೊತ್ತಾಗಿದ್ದು ಕಾರಣ ವೈರಸ್…!

ನಂತರ ಕನಿಕಾ ಕಪೂರ್ ರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು. ಇತ್ತ ಕನಿಕಾ ಕಪೂರ್ಗೆ ಕೋರನ ವೈರಸ್ ಪತ್ತೆ ಆದೊಡನೆ ಇಡೀ ಸಂಸತ್ ಭವನ, ರಾಷ್ಟ್ರಪತಿ ಭವನ, ಪ್ರಧಾನಿ ಬೆಚ್ಚಿ ಬಿದ್ದಿದ್ದಾರೆ .ಇಷ್ಟಕ್ಕೂ ಗಾಯಕಿ ಕನಿಕಾ ಕಪೂರ್ಗೆ ಕರೋನಾ ವೈರಸ್ ಶಂಕೆ ಪತ್ತೆಯಾದರೆ ನಮ್ಮ ರಾಷ್ಟ್ರಪತಿ ಹಾಗೂ ಪ್ರಧಾನಿ ಮತ್ತು ಸಂಸದರು ಆತಂಕಗೊಂಡಿದಕ್ಕೆ . ಕನಿಕಾ ಕಪೂರ್ ಹಾಗೂ ನಮ್ಮ ಸಂಸದರಿಗೂ ಇರುವ ಸಂಬಂಧವಾದರೂ ಏನು ?ಇಲ್ಲೇ ಇರುವುದು ಇಂಪಾರ್ಟೆಂಟ್ ವಿಚಾರ ಲಕ್ನೋದಲ್ಲಿ ನಡೆದ ಹೋಳಿ ಪಾರ್ಟಿಯಲ್ಲಿ ಕನಿಕಾ ಕಪೂರ್ ಜೊತೆ ಭಾಗಿಯಾಗಿ ಫೋಟೊ ತೆಗೆಸಿಕೊಂಡಿದ್ದ ಸಂಸತ್ ಸದಸ್ಯ ದುಶ್ಯಂತ್ ಸಿಂಗ್ ಅವತ್ತಿನ ಪಾರ್ಟಿ ಮುಗಿಸಿ ನೇರವಾಗಿ ಹೋಗಿದ್ದು ಸಂಸತ್.ಮಾರ್ಚ್ ಹದಿನೈದರ ಭಾನುವಾರ ಲಕ್ನೋದಲ್ಲಿ ನಡೆದ ಹೋಳಿ ಪಾರ್ಟಿಯಲ್ಲಿ ತಾಯಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ,ಅವರೊಂದಿಗೆ ದುಶ್ಯಂತ್ ಸಿಂಗ್ ಕನಿಕಾ ಕಪೂರ್ ಜೊತೆ ಫೋಟೋ ಪೋಸ್ ನೀಡಿ ಪಾರ್ಟಿ ಮುಗಿಸಿ ಸೋಮವಾರ ಮಾರ್ಚ್ ಅದರ ಹದಿನಾರು ರಂದು ದುಶ್ಯಂತ್ ಸಿಂಗ್ ಲೋಕಸಭೆಗೆ ಹೋಗಿದ್ದಾರೆ.

ಕನಿಕಾ ಕಪೂರ್ ಇತ್ತ ಆಸ್ಪತ್ರೆಯಲ್ಲಿ ಕಾರ್ನ ವೈರಸ್ಗೆ ಚಿಕಿತ್ಸೆ ಪಡೆಯುತ್ತಿದ್ದರೆ ದುಶ್ಯಂತ್ ಸಿಂಗ್ ಲೋಕಸಭೆಯಲ್ಲಿ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಲ್ಲಿ ಹಲವಾರು ಸಂಸದರು ಸಚಿವರನ್ನು ಭೇಟಿ ಮಾಡಿದ್ದಾರೆ ಸಂಸತ್ ನಲ್ಲಿ ಲೋಕಸಭಾ ಟಿಎಂಸಿ ಪಕ್ಷದ ಡೆರಿಕ್ ಓಬ್ರಿಯಾನ್, ಕಾಂಗ್ರೆಸ್ನ ದೀಪೇಂದ್ರ ಹೂಡಾ, ಅಪ್ನಾ ದಳದ ಅನುಪ್ರಿಯಾ ಪಟೇಲ್ ,ಅವರ ಅಕ್ಕ ಪಕ್ಕ ಸರಿಸುಮಾರು ಎರಡೂವರೆ ಗಂಟೆಗಳ ಕಾಲ ಕುಳಿತುಕೊಂಡಿದ್ದಾರೆ.ಲೋಕಸಭಾ ಕಲಾಪದಲ್ಲಿ ಪಾಲ್ಗೊಂಡಿದ್ದ ದುಷ್ಯಂತ್ ಸಿಂಗ್ ಅದೇ ದಿನ ಸಂಜೆ ರಾಷ್ಟ್ರಪತಿ ಭವನದಲ್ಲಿ ಸಂಸದರ ನಿಯೋಗದಲ್ಲಿ ತೆರಳಿ ರಾಷ್ಟ್ರಪತಿಗಳನ್ನು ಕೂಡ ಭೇಟಿಯಾಗಿದ್ದಾರೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಂಸದರ ಭೋಜನ ಕೂಟದಲ್ಲೂ ಭಾಗವಹಿಸಿದ್ದಾರೆ .

ಕನಿಕಾ ಕಪೂರ್ಗೆ ಕರೋನಾ ವೈರಸ್ ಸೋಂಕು ಪತ್ತೆಯಾದ ನಂತರ ಕನಿಕಾ ಜೊತೆ ಪಾರ್ಟಿ ಮಾಡಿ ಸಂಸತ್ ಪ್ರವೇಶಿಸಿದ ದುಶ್ಯಂತ್ ಹಲವು ಸಂಸದರು ಪ್ರಧಾನಿ ರಾಷ್ಟ್ರಪತಿ ಭೇಟಿಯಾಗಿರುವುದು ಈಗ ಎಲ್ಲರೂ ಇದು ಆತಂಕಕ್ಕೆ ಕಾರಣವಾಗಿದೆ .ಈಗ ಸಂಸದ ದುಶ್ಯಂತ್ ಸಿಂಗರನ್ನು ವೈದ್ಯಾಧಿಕಾರಿಗಳು ಕರೋನಾ ವೈರಸ್ ಇದೆಯೇ ಎಂಬ ಪತ್ತೆಗಾಗಿ ಚಿಕಿತ್ಸೆಗೆ ಒಳಪಡಿಸಿದ್ದಾರೆ ದುಷ್ಯಂತನನ್ನು ಏಕಾಂತ ವಾಸದಲ್ಲಿ ಇರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಅಕಸ್ಮಾತ್ ದುಶ್ಯಂತ ರಕ್ತದ ಸ್ಯಾಂಪಲ್ ಪರೀಕ್ಷೆಯಲ್ಲಿ ರೋಗ ಪತ್ತೆಯಾದರೆ ಅಲ್ಲಿಗೆ ಮುಗಿಯಿತು .ಈಗ ಎಲ್ಲರ ಕಣ್ಣು ದುಶ್ಯಂತ ವೈದ್ಯಕೀಯ ರಿಪೋರ್ಟ್ ಮೇಲೆ ನೆಟ್ಟಿದೆ ಎಲ್ಲರೂ ಕುತೂಹಲದಿಂದ ದುಶ್ಯಂತ ಹೆಲ್ತ್ ರಿಪೋರ್ಟ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ .ದುಶ್ಯಂತ್ ಸಂಸತ್ತಿನಲ್ಲಿ ಅಕ್ಕಪಕ್ಕ ಕುಳಿತ್ತಿದ್ದ ಸಂಸದರಿಗೂ ಈಗ ಫಜೀತಿ ಶುರುವಾಗಿದೆ ಸರಿ ಸುಮಾರು ಎರಡೂವರೆ ತಾಸುಗಳ ಕಾಲ ದುಶ್ಯಂತ ಪಕ್ಕದಲ್ಲೇ ಕೊಡುತ್ತಿದ್ದ ಸಂಸತ್ ಸದಸ್ಯ ಡೆರಿಕ್ ಓಬ್ರಿಯಾನ್ ಸ್ವಯಂ ಗೃಹ ವಾಸದಲ್ಲಿ ಕಾಲ ಕಳೆಯುತ್ತಿದ್ದಾರೆ.

ಇನ್ನು ದಿಶಾಂತರ ತಾಯಿ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ ತಾವು ಕೂಡ ಎಚ್ಚರಿಕೆಯಿಂದ ಮನೆಯಲ್ಲಿ ಏಕಾಂತ ವಾಸ ಮಾಡುತ್ತ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.ಲಂಡನ್ ನಿಂದ ಲಕ್ನೋ ಹೋಳಿ ಪಾರ್ಟಿಯವರೆಗೆ ಕರೋನಾ ವೈರಸ್ಸನ್ನು ಹೊತ್ತು ತಂದದ್ದಲ್ಲದೆ ನಿರ್ಲಕ್ಷ್ಯ ವಹಿಸಿ ಪಾರ್ಟಿಯಲ್ಲಿ ಭಾಗವಹಿಸಿ ಇದರಿಂದ ಹಲವಾರು ಜನರ ಆತಂಕಕ್ಕೆ ಕಾರಣವಾಗಿರುವ ಗಾಯಕಿ ಕನಿಕಾ ಕಪೂರ್ ವಿರುದ್ಧ ಲಖ್ನೋದ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಈಗ ಎಫ್ಐಆರ್ ದಾಖಲಾಗಿದೆ ಇತ್ತ ಸಂಸದರು ರಾಷ್ಟ್ರಪತಿ ಭವನದಲ್ಲಿ ಆತಂಕ ಮನೆ ಮಾಡಿದೆ.

LEAVE A REPLY

Please enter your comment!
Please enter your name here