Home KARNATAKA ವಿರಾಟ್ ಅನುಪಸ್ಥಿತಿಯಲ್ಲಿ ನಾಳೆ ಇಂಡೋ ಪಾಕ್ ಕದನಕ್ಕೆ ಎದುರು ನೋಡ್ತಿದೆ ಇಡೀ ವಿಶ್ವ..!! ಬದ್ಧವೈರಿಗಳ ಹೈವೋಲ್ಟೇಜ್...

ವಿರಾಟ್ ಅನುಪಸ್ಥಿತಿಯಲ್ಲಿ ನಾಳೆ ಇಂಡೋ ಪಾಕ್ ಕದನಕ್ಕೆ ಎದುರು ನೋಡ್ತಿದೆ ಇಡೀ ವಿಶ್ವ..!! ಬದ್ಧವೈರಿಗಳ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್..!!

6732
0
SHARE

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಏಷ್ಯಾಕಪ್ ಟೂರ್ನಿಯಲ್ಲಿ ನಡೆಯಲಿರುವ ಮಹಾಕಾಳಗ ನೋಡಲು ಅಭಿಮಾನಿಗಳ ಗಣ ಕೂಡ ಉಸಿರು ಬಿಗಿ ಹಿಡಿದು ಕಾಯ್ತಿದೆ. 2 ವರ್ಷಗಳ ನಂತ್ರ ಬದ್ಧವೈರಿಗಳ ಬಿಗ್ ಫೈಟ್ ನಡೆಯುತ್ತಿದ್ದು, ವಿಶ್ವ ಕ್ರಿಕೆಟ್ ನ ದೃಷ್ಠಿ ಪಂದ್ಯದತ್ತ ನೆಟ್ಟಿದೆ.

ಉಭಯ ತಂಡದ ಆಟಗಾರರು ಕೂಡ ಪ್ರತಿಷ್ಠೆಯನ್ನ ಪಣಕ್ಕಿಟ್ಟು ಹೋರಾಟಕ್ಕಿಳಿಯಲು ಸಜ್ಜಾಗಿದ್ದಾರೆ.ಕ್ರಿಕೆಟ್ ಜಗತ್ತಿನ ಸಂಪ್ರದಾಯಿಕ ಬದ್ಧ ವೈರಿಗಳಾದ ಇಂಡೋ-ಪಾಕ್ ನಡುವಿನ ಏಷ್ಯಾ ಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕಾಳಗಕ್ಕೆ ಆಟಗಾರರು ಕೂಡ ಭರ್ಜರಿಯಾಗಿ ಸಜ್ಜಾಗಿದ್ದು, ಪ್ರತಿಷ್ಠೆಯನ್ನ ಪಣಕ್ಕಿಟ್ಟು ಹೋರಾಟ ನಡೆಸಲಿದ್ದಾರೆ.

ಕ್ರಿಕೆಟ್ ದುನಿಯಾದ ಎರಡು ಬಲಿಷ್ಠ ತಂಡಗಳಾದ ಇಂಡೋ-ಪಾಕ್ ತಂಡಗಳ ಮಹಾಯುದ್ಧ ಅಭಿಮಾನಿಗಳಲ್ಲೂ ರೋಚಕ ಹಾಗೂ ಕುತೂಹಲ ಕೆರಳುವಂತೆ ಮಾಡಿದೆ. ಈಗಾಗ್ಲೆ ಜಿದ್ದಾಜಿದ್ದಿನ ಪೈಪೋಟಿಗೆ ದುಬೈನ ಅಂತಾರಾಷ್ಟ್ರೀಯ ಮೈದಾನ ಕೂಡ ರಣಾಂಗಣವಾಗಿ ಪರಿವರ್ತನೆಗೊಂಡಿದೆ. ಬದ್ಧವೈರಿಗಳ ಹೋರಾಟ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿದೆ.

ಹೀಗಾಗಿಯೇ 2016ರ ನಂತ್ರ ಇಂಡೋ-ಪಾಕ್ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳ ಆಯೋಜನೆಗೆ ಭಾರತ ಸರ್ಕಾರ ಅನುಮತಿ ನೀಡಿಲ್ಲ. ಕೇವಲ ಐಸಿಸಿ ಇವೆಂಟ್ ಗಳಲ್ಲಿ ಬದ್ಧವೈರಿಗಳ ಮುಖಾಮುಖಿಯಾಗುತ್ತಿದ್ದಾರೆ. ಅಲ್ದೇ 2017ರ ಚಾಂಪಿಯನ್ ಟ್ರೋಫಿ ಬಳಿಕ ಭಾರತ ಹಾಗೂ ಪಾಕ್ ಏಷ್ಯಾಕಪ್ ನಲ್ಲಿ ಸೆಣಸಾಟಕ್ಕೆ ಇಳಿಯಲಿವೆ.

ಟೀಂ ಇಂಡಿಯಾದ ಡೇಂಜರಸ್ ಬ್ಯಾಟ್ಸ್ ಮನ್, ರನ್ ಮಷಿನ್ ವಿರಾಟ್ ಕೊಹ್ಲಿ ಈ ಬಾರಿಯ ಏಷ್ಯಾಕಪ್ ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಕೊಹ್ಲಿ ಅನುಪಸ್ಥಿತಿ ಕಾಡ್ತಿದ್ದು, ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದಾರೆ. ಅಲ್ಲದೇ ಪಾಕಿಸ್ತಾನ್ ವಿರುದ್ಧ ಆಡಲು ರೋಹಿತ್ ಕೂಡ ರಣತಂತ್ರ ರೂಪಿಸಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಹೌದು. ಇಡೀ ವಿಶ್ವ ಕ್ರಿಕೆಟ್ ನಲ್ಲಿ ಯಾವುದೇ ಪಂದ್ಯಕ್ಕಿಲ್ಲದ ಕ್ರೇಜ್ ಇಂಡೋ-ಪಾಕ್ ಕ್ರಿಕೆಟ್ ಯುದ್ದಕ್ಕಿದೆ. ಹೀಗಾಗಿ ನಾಳಿನ ಪಂದ್ಯದ ಎಲ್ಲ ಕ್ರಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಅಲ್ಲದೇ ಹೈವೋಲ್ಟೇಜ್ ಪಂದ್ಯ ನೋಡಲು ಅಭಿಮಾನಿ ಗಣ ಕೂಡ ಕುತೂಹಲದಿಂದ ಕಾಯ್ತಿದ್ದಾರೆ.

LEAVE A REPLY

Please enter your comment!
Please enter your name here