Home Cinema ಶುರುವಾಯ್ತು ಜೋಗಿ ಪ್ರೇಮ್ ನಯಾ ಪಿಕ್ಚರ್..! ಕಾಲ್ ಎಳೆದು ಕೇಕೆ ಹಾಕಿದವ್ರಿಗೆ ಕೊಡ್ತಾರಾ “ಪ್ರೇಮ್” ಅನ್ಸರ್..?

ಶುರುವಾಯ್ತು ಜೋಗಿ ಪ್ರೇಮ್ ನಯಾ ಪಿಕ್ಚರ್..! ಕಾಲ್ ಎಳೆದು ಕೇಕೆ ಹಾಕಿದವ್ರಿಗೆ ಕೊಡ್ತಾರಾ “ಪ್ರೇಮ್” ಅನ್ಸರ್..?

2175
0
SHARE

ಜೋಗಿ ಪ್ರೇಮ್.. ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಸಿನಿಮಾಗಳ ಜೊತೆಗೆ ಗಿಮಿಕ್ ಸೂತ್ರವನ್ನು ಹೆಚ್ಚಾಗಿ ಬಳಸಿಕೊಂಡು ಸೆಂಟಿಮೆಂಟ್ ಚಿತ್ರಗಳನ್ನು ಕೊಡುವ ಕಲಾಕಾರ್ ನಿರ್ದೇಶಕ. ವಿಲನ್ ಚಿತ್ರದ ಬಳಿಕ ಸುದ್ದಿ ಅಂಗಳದಿಂದ ಮರೆಯಾಗಿದ್ದ ಪ್ರೇಮ್, ಸದ್ಯ ಸಣ್ಣ ಗ್ಯಾಪ್ ಬಳಿಕ ಹೊಸ ಸೂತ್ರ ಹಿಡಿದು ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಭಾರಿ ಡ್ರಿಫೆಂಟಾಗಿ ಎಂಟ್ರಿಕೊಟ್ಟಿರುವ ಪ್ರೇಮ್ಸ್, ಕೈಯಲ್ಲಿ ಕೆಮರಾ ಹಿಡಿದು ನಯಾ ಪಿಕ್ಚರ್ ಬಗ್ಗೆ ಅಚ್ಚರಿ ಮೂಡಿಸಿದ್ದಾರೆ.

ಯಸ್.. ಮಲ್ಟೀ ಸ್ಟಾರರ್ ಸಿನಿಮಾ ‘ದಿ ವಿಲನ್’ ಬಳಿಕ ಪ್ರೇಮ್ ಹೊಸ ಚಿತ್ರ ಮಾಡಲು ಸಜ್ಜಾಗಿದ್ದಾರೆ. ಅದಕ್ಕು ಮುನ್ನ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಚಿತ್ರದ ಬಗ್ಗೆ ಪೋಸ್ಟರ್‌ರನ್ನು ಪ್ರೇಮ್ ರಿಲೀಸ್ ಮಾಡಿದ್ದು. ಈ ಸಿನಿಮಾದ ಟೈಟಲ್ ಅನ್ನು ಇದೇ ತಿಂಗಳ ಅನೌನ್ಸ್ ಮಾಡುವ ಮಾಹಿತಿಯನ್ನು ಪೋಸ್ಟರ್‌ನ ಮೂಲಕ ತಿಳಿಸಿದ್ದಾರೆ.

ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್‌ನ್ನು ೩೧ ಮಾರ್ಚ್ ಭಾನುವಾರ ೭ ಗಂಟೆಗೆ ಸೋಷಿಯಲ್ ಪ್ಲಾಟ್ ಫಾಂ ನಲ್ಲಿ ಪ್ರೇಮ್ ಬಿಡುಗಡೆ ಮಾಡಲಿದ್ದಾರೆ. ಇನ್ನು ಈ ಚಿತ್ರದ ಮೂಲಕ ಪ್ರೇಮ್ ತಮ್ಮ ಬಾಮೈದ, ರಕ್ಷಿತಾ ಸಹೋದರನ್ನು ಅಭಿಷೇಕ್‌ರನ್ನು ಸ್ಯಾಂಡಲ್‌ವುಡ್‌ಗೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಈ ಮೂಲಕ ಅಭಿಷೇಕ್ ಮೊದಲ ಚಿತ್ರಕ್ಕೆ ಭಾವ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ. ಇನ್ನು ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಚಿತ್ರ ಸೆಟ್ಟೇರಲಿದೆ. ಈ ಹಿಂದೆ ಅಭಿಷೇಕ್ ಕೂಡ ಪ್ರೇಮ್‌ನ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದು.

ದಿ ವಿಲನ್ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ರು ಚಿತ್ರಕ್ಕಾಗಿ ನ್ಯೂಯಾರ್ಕ್ ‘ಫಿಲಂ ಇಸ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದುಕೊಂಡು ಬಂದಿರುವ ಅಭಿಷೇಕ್. ಮೊದಲ ಚಿತ್ರದಲ್ಲೇ ಡ್ಯಯೇಟ್ ಹಾಡೋದಕ್ಕೆ ಸನ್ನಧರಾಗಿದ್ದಾರೆ.ವಿಲನ್ ಸೆಟ್‌ನಲ್ಲಿ ತೊಡಗಿಕೊಂಡಿದ್ದ ಅಭಿಷೇಕ್ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರಿಂದ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಇವರಿಬ್ಬರ ಆಕ್ಟಿಂಗ್ ನಿಂದ ಅಭಿ ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದಾರಂತೆ.

ಮೂಲತಃ ಕಲಾವಿದರ ಕುಟುಂಬದಲ್ಲೇ ಹುಟ್ಟಿ ಬೆಳೆದಿರುವ ಅಭಿಷೇಕ್‌ಗೆ ಮೊದಲಿನಿಂದ್ಲೂ ಚಿತ್ರರಂಗದ ಮೇಲೆ ಎಲ್ಲಿಲ್ಲದ ಒಲವು. ಖ್ಯಾತ ಛಾಯಾಗ್ರಹಕ ಗೌರಿ ಶಂಕರ್ ಪುತ್ರ. ಈ ಹಿಂದೆ ರಕ್ಷಿತಾ ಪ್ರೇಮ್ ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ಆಗಿ ಚಿತ್ರರಂಗದಲ್ಲಿ ಖ್ಯಾತಿ ಪಡೆಸಿದ್ರು. ಇನ್ನು ರಕ್ಷಿತಾ ಅವರ ತಾಯಿ ಮಮತಾ ರಾವ್ ಕೂಡ ನಟಿಯಾಗಿದ್ದವರು. ಇದರ ಜೊತೆಗೆ ರಕ್ಷಿತಾ ಅವರ ಪತಿ ಪ್ರೇಮ್ ನಿರ್ದೇಶನದ ಜೊತೆಗೆ ನಟನೆಯ ಮೂಲಕ ಗುರುತಿಸಿಕೊಂಡವರು. ಇಷ್ಟೆಲ್ಲಾ ಸಿನಿಮಾ ಮಾತಾವರಣದಲ್ಲಿ ಬೆಳೆದ ಅಭಿಷೇಕ್ ಕೂಡ ಚಿತ್ರರಂಗ ಎಂಟ್ರಿಕೊಡ್ತಿರೋದು ರಕ್ಷಿತಾ ಪ್ರೇಮ್ ಮನೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ಇದೇವೇಳೆ, ಗಾಂಧಿನಗರದಲ್ಲಿ ಸಾಕಷ್ಟು ಗುಸುಗುಸುಗಳು ಕೇಳಿಬರ್ತಿದೆ. ಅದೇನಪ್ಪ ಅಂದ್ರೆ ಪ್ರೇಮ್ ಎಕ್ಸ್‌ಕ್ಯೂಸ್ ಮೀ ಚಿತ್ರದ ಪಾರ್ಟ್ ೨ ಮಾಡಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿಬರ್ತಿದೆ. ಹಾಗಾಗಿನೇ ನಯಾ ಪಿಕ್ಚರ್‌ಗೆ ಎಕ್ಸ್‌ಕ್ಯೂಸ್ ಮೀ -೨ ಎಂಬ ಟೈಟಲ್ ಫಿಕ್ಸ್ ಮಾಡಿದ್ದಾರೆನ್ನು ಮಾತುಗಳು ರಿಂಗಣಿಸುತ್ತಿದೆ. ಎಕ್ಸ್‌ಕ್ಯೂಸ್ ಮೀ.. ಒಂದು ರೀತಿಯಲ್ಲಿ ಪ್ರೇಮ್‌ಗೆ ಲಕ್ ಬದಲಿಸಿದ ಸಿನಿಮಾ. ರಮ್ಯಾ, ಅಜಯ್ ರಾವ್, ಸುನೀಲ್ ನಟನೆಯಲ್ಲಿ ಮೂಡಿಬಂದಿದ್ದ ಟ್ರಾಯಾಂಗಲ್ ಲವ್ ಸ್ಟೋರಿ. ಸೆಂಟಿಮೆಂಟ್ ಮತ್ತು ಲವ್ ಸ್ಟೋರಿ ಮೂಲಕ ಸಿನಿಪ್ರೇಕ್ಷಕರ ಮನಗೆದ್ದಿತ್ತು.

ಹಾಗಾಗಿನೇ ಅದೇ ಟೈಟಲ್ ಇಟ್ಟುಕೊಂಡು ಹೊಸ ಲವ್ ಸ್ಟೋರಿಯನ್ನು ಎಣೆದಿದ್ದಾರೆನ್ನಲಾಗ್ತಿದೆ. ಕಾಲ್ ಎಳೆದು ಕೇಕೆ ಹಾಕಿದವ್ರಿಗೆ ಕೊಡ್ತಾರಾ “ಪ್ರೇಮ್” ಅನ್ಸರ್..?ಹೌದು.. ದಿ ವಿಲನ್ ಚಿತ್ರದ ಸೋಲಿನ ಸುಳಿಯಿಂದ ಹೊರಬರಲು ಪ್ರೇಮ್ ಹೊಸ ಲವ್ ಸ್ಟೋರಿಯ ಮೂಲಕ ಬರಲು ಸಜ್ಜಾಗಿದ್ದಾರೆ. ಪ್ರೇಮ್ ದಿ ವಿಲನ್ ಚಿತ್ರಕ್ಕಾಗಿ ಮಾಡಿದ್ದ ಗಿಮಿಕ್ ಕಂಡು ಅಭಿಮಾನಿಗಳು ಗರಂ ಆಗಿದ್ರು. ಸಿನಿಮಾ ಅತಿಯಾದ ಗಿಮಿಕ್ ಪಬ್ಲಿಸಿಟಿ ಮಾಡಬೇಡಿ ಎಂದು ಪ್ರೇಮ್‌ಗೆ ಮನವಿ ಮಾಡಿದ್ರು.

ಇಷ್ಟೆಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅಭಿಷೇಕ್‌ಗೆ ಕಥೆ ಮಾಡಿರುವ ಪ್ರೇಮ್. ಯಾವ ಥಿಯರಿಯನ್ನು ಈ ಚಿತ್ರದಲ್ಲಿ ಮಾಡ್ತಾರೆ. ಕಥೆಗೆ ಹೆಚ್ಚು ಒತ್ತುಕೊಡ್ತಾರಾ. ಗಿಮಿಕ್ ತಂತ್ರವನ್ನು ಕೈ ಬಿಟ್ಟು ಕಥೆಗೆ ಪ್ರಾಮುಖ್ಯತೆ ಕೋಡ್ತಾರಾ ಎಂಬ ಕುತೂಹಲವನ್ನು ಹೆಚ್ಚಾಗುವಂತೆ ಮಾಡಿದ್ದಾರೆ. ಕೇಕೆ ಹಾಕಿ ಕಾಲೆಳೆದಿರುವವರಿಗೆ ಈ ಚಿತ್ರದ ಮೂಲಕ ಉತ್ತರ ನೀಡಲಿದ್ದಾರೆಂಬ ಕಾತುರತೆ ಹೆಚ್ಚಾಗುವಂತೆ ಮಾಡಿದ್ದಾರೆ. ಅದೇನೇ ಇದ್ರು..

ಸದ್ಯ ದಿ ವಿಲನ್ ಚಿತ್ರದ ದೊಡ್ಡ ಸೋಲಿನ ಬಳಿಕ, ಲವ್ ಸ್ಟೋರಿ ಕೈಗೆತ್ತುಕೊಂಡಿರುವ ಪ್ರೇಮ್. ಅಸಲಿ ಪಿಕ್ಚರ್ ಪುರಾಣ ಮಾರ್ಚ್ ೩೧ರಂದು ರಿವೀಲ್ ಆಗಲಿದೆ. ಅಂದ್ಹಾಗೆ ಹಳೇಯ ಗಿಮಿಕ್ ತಂತ್ರ ಬಿಟ್ಟು ಹೊಸ ಥಿಯರಿ ಜೊತೆಗೆ ಈ ಚಿತ್ರದ ಮೂಲಕ ಪ್ರೇಮ್ ಗೆದ್ದು ತೋರಿಸ್ತಾರಾ. ಚಿತ್ರಕ್ಕೆ ಯಾವ ಟೈಟಲ್ ಫಿಕ್ಸ್ ಮಾಡ್ತಾರೆ, ಅದ್ಯಾವ ಬಾಲಿವುಡ್ ಬ್ಯೂಟಿಯನ್ನು ಚಿತ್ರಕ್ಕೆ ಕರೆತರ‍್ತಾರೆ ಎಂಬ ಕುತೂಹಲವನ್ನು ಗಾಂಧಿನಗರದ ಮಂದಿಯಲ್ಲಿ ಪ್ರೇಮ್ ದುಪ್ಪಟ್ಟಾಗುವಂತೆ ಮಾಡಿರೋದು ಮಾತ್ರ ಸುಳಲ್ಲ..

LEAVE A REPLY

Please enter your comment!
Please enter your name here