Home District ಶ್ರೀರಾಮುಲುಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ..!? “ಅವರಿಗ್ಯಾಕೆ ಓಟಾಗ್ತೀರಾ..ಗಡ್ಡ ಬಿಟ್ಟಿದ್ದಾರೆ ಅಂತಾನಾ”..??

ಶ್ರೀರಾಮುಲುಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ..!? “ಅವರಿಗ್ಯಾಕೆ ಓಟಾಗ್ತೀರಾ..ಗಡ್ಡ ಬಿಟ್ಟಿದ್ದಾರೆ ಅಂತಾನಾ”..??

2058
0
SHARE

ಶಾಸಕ ಶ್ರೀರಾಮುಲು ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಉಗ್ರಪ್ಪ ಪರ ಪ್ರಚಾರ ನಡೆಸಿದ ಅವರು,ಶ್ರೀರಾಮುಲುಗೆ ಸಂವಿದಾನ ಅಂದ್ರೆ ಗೊತ್ತಿಲ್ಲ.ಮಂತ್ರಿ ಅಂದ್ರೆ ಗೊತ್ತಿಲ್ಲ.ಪ್ರಜಾಪ್ರಭುತ್ವ ಅಂದ್ರೇನು ಅಂತ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಶ್ರೀರಾಮುಲು ಸಂದರಾಗಿದ್ದಾಗ ಒಮ್ಮೆಯಾದರೂ ಲೋಕಸಭೆಯಲ್ಲಿ ಮಾತನಾಡಿದ್ರಾ. ಜೆ.ಶಾಂತಾ ಮಾತನಾಡಿದ್ದಾರಾ, ಹಾಗಾದ್ರೆ ಯಾಕೆ ಲೊಕಸಭೆಗೆ ಹೋಗಬೇಕು.ಇವರೇನು ಅಲಂಕಾರಿಕ ವಸ್ತುಗಳಾ ಎಂದು ಪ್ರಶ್ನಿಸಿದ್ದಾರೆ.ಒಂದೇ ಒಂದು ಯೋಜನೆಯನ್ನ ಬಳ್ಳಾರಿ ಗೆ ತಂದಿಲ್ಲ. ಹಾಗಾದ್ಮೇಲೆ ಯಾಕೆ ಓಟು ಹಾಕ್ತೀರಾ…

ಉದ್ದ ಕೂದಲು ಬಿಟ್ಟಿದ್ದಾರೆ ವೋಟ್ ಹಾಕಬೇಕಾ ಇಲ್ಲ ಗಡ್ಡ ಬಿಟ್ಟಿದ್ದಾರೆ ಅಂತ ವೋಟ್ ಹಾಕಬೇಕಾ ಎಂದು ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನು ಹೆದರಿಸಿಬೆದರಿಸಿ ರಾಜಕಿಯ ಮಾಡಲು ಸಾದ್ಯವಿಲ್ಲ. ಇದು ರಾಜರ ಅಡಳಿತವಿಲ್ಲ. ಇಂತಾ ನಾಟಕಗಳು ನಿಲ್ಲಬೇಕು ಎಂದಿದ್ದಾರೆ.

LEAVE A REPLY

Please enter your comment!
Please enter your name here