Home Cinema ಸದ್ಯ ಕನ್ನಡಿಗರ ಹಾಟ್ ಫೇವ್‌ರೇಟ್ ಆಗಿರುವ “ದಿವ್ಯಾ ಉರುಡುಗ”, ಕ್ಲಾಸಿ ಫೋಟೋಶೂಟ್ ಫೋಟೋಗಳಿಂದ ನಿದ್ದೆಗೆಡಿಸುತ್ತಿರುವ ದಿವ್ಯಾ…

ಸದ್ಯ ಕನ್ನಡಿಗರ ಹಾಟ್ ಫೇವ್‌ರೇಟ್ ಆಗಿರುವ “ದಿವ್ಯಾ ಉರುಡುಗ”, ಕ್ಲಾಸಿ ಫೋಟೋಶೂಟ್ ಫೋಟೋಗಳಿಂದ ನಿದ್ದೆಗೆಡಿಸುತ್ತಿರುವ ದಿವ್ಯಾ…

3058
0
SHARE

ದಿವ್ಯ ಉರುಡುಗ, ಅನ್ನೋ ಮುದ್ದು ಮುದ್ದಾಗಿರೊ ಈ ಬೆಡಗಿ ಸ್ಯಾಂಡಲ್‌ವುಡ್‌ನ ಉದಯೋನ್ಮಕ ನಟಿ…ಹುಲಿರಾಯನ ಜಿಂಕೆಯಾಗಿ, ಫೇಸ್ ಟು ಫೇಸ್ ಹೋರಾಡಿ, ಗಾಂಧಿನಗರದಲ್ಲಿ ದ್ವಜ ಹಾರಿಸಿ ಬೀಗುತಿರುವ ದಿವ್ಯ ಸದ್ಯ ಚಿತ್ರಾಭಿಮಾನಿಗಳ ಹಾಟ್ ಫೇವರಿಟ್..ಚಿತ್ರರಂಗದಲ್ಲಿ ಒಂದೊಂದೆ ಮಟ್ಟಿಗಳನ್ನು ಏರುತ್ತ ಉತ್ತಮ ಅವಕಾಶಗಳನ್ನು ಗಿಟ್ಟಿಕೊಳ್ಳುತ್ತಿರುವ ದಿವ್ಯ ಸದ್ಯ ಚಂದನವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಕಿರುತೆರೆಯಲ್ಲಿ ಮಿಂಚಿ ಮನೆಮಾತಾಗಿದ್ದ ಈ ಸುಂದರಿ ಈಗ ಬಿಗ್ ಸ್ಕ್ರೀನ್ ನಲ್ಲೂ ಸಖತ್ ಫೇಮಸ್..ಹುಲಿರಾಯನ ಜಿಂಕೆಯಾಗಿ ಚಿತ್ರಾಭಿಮಾನಿಗಳ ದಿಲ್ ಕದ್ದಿರೊ ಈ ಚಂದುಳ್ಳಿ ಚೆಲುವೆಯ ಕ್ಲಾಸಿ ಫೊಟೊ ಶೂಟ್‌ಗೆ ಅಭಿಮಾನಿಗಳು ಸಖತ್ ಫಿದಾ ಆಗಿದ್ದಾರೆ..ವೆರೈಟಿ ವೆರೈಟಿ ಕಾಸ್ಟೂಮ್‌ನಲ್ಲಿ ಥರಹೇವಾರಿ ಪೋಸ್‌ಗಳಲ್ಲಿ ಮುದ್ದು ಮುದ್ದಾದ ಈ ಮುದ್ದು ಚೆಲುವೆ ಕ್ಯಾಮರ ಕಣ್ಣಿಲ್ಲಿ ಸೆರೆಯಾಗಿದ್ದು ನೋಡಿ ಪಡ್ಡೆಯುವಕರ ನಿದ್ದೆ ಭಂಗವಾಗಿದೆ.

ಹೀಗೆ ಕ್ಯಾಮರ ಮುಂದೆ ನಿಂತು ಭಿನ್ನ ವಿಭಿನ್ನ ಶೈಲಿಯಲ್ಲಿ ಪೋಸ್ ಕೊಡ್ತಿರೊದನ್ನ ನೋಡ್ತಿದ್ರೆ ಯುವಕರ ಹಾರ್ಟ್‌ಗೆ ಚಿಟ್ಟೆ ಬಿಟ್ಟಂಗೆ ಆಗ್ತಿರೋದ್ರಲ್ಲಿ ನೋ ಡೌಟ್..ಬ್ಲ್ಯಾಕ್ ಕಾಸ್ಟೂಮ್‌ನಲ್ಲಿ ಬುಲೆಟ್ ಏರಿ ಕಿರುನಗೆ ಬೀರುತ್ತಾ ಮಾದಕ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್ ನೀಡ್ತಿದ್ರೆ ಪಡ್ಡೆಯುವಕರು ಕಿಕ್ ಏರಿಸಿಕೊಂಡು ದಿವ್ಯಾರತ್ತ ಲುಕ್ ಕೊಡ್ತಿದ್ದಾರೆ.ಹಚ್ಚಹಸಿರಿನ ಸುಂದರ ಪ್ರಕೃತಿ ತಾಣದಲ್ಲಿ ಸೆರೆಯಾಗಿರೊ ದಿವ್ಯಫೋಟೊಗಳು ಒಂದಕ್ಕಿಂತ ಒಂದು ಸುಂದರವಾಗಿವೆ..

ಪಿಂಕ್ ಅಂಡ ಗ್ರೀನ್ ಕಾಂಬಿನೇಶನ್‌ನ ಸೀರೆ ತೊಟ್ಟು ಕುದುರೆ ಏರ್ತಿರೊ ಪೋಸ್ ಒಂದೆಡೆ ಆದ್ರೆ ಮತ್ತೊಮ್ಮೆ ಗೌನ್ ತೊಟ್ಟು ಪ್ರಿನ್ಸೆಸ್ ಆಗಿ ಕಂಗೊಳಿಸುತಿದ್ದಾರೆ.ಚಂದನವನದ ಈ ಮುದ್ದು ಮುಖದ ಚಂದದ ಬೆಡಗಿಯನ್ನು ಹೀಗೆ ಮತ್ತಷ್ಟು ಸುಂದರಗೊಳಿಸಿದ್ದು ಲಕ್ಷ್ಮೀ ಶೆಟ್ಟಿ…ಅದ್ಭುತವಾದ ಮೇಕಪ್ ಮೂಲಕ ದಿವ್ಯ ಫೋಟೊ ಶೂಟ್‌ಗೆ ಮತ್ತಷ್ಟು ಮೆರಗು ತಂದ್ರೆ..

ಥರಹೇವಾರಿ ಕಾಸ್ಟೂಮ್‌ಗಳನ್ನು ಡಿಸೈನ್ ಮಾಡಿದ್ದು ಅರುಲ್ಲಾ ರಶ್ಮೀ ಅನೂಪ್ ರೈ..ದಂತದ ಬೊಂಬೆಯಂತಿರೊ ಈ ಚೆಲುವೆಯನ್ನು ಮತ್ತಷ್ಟು ಅದ್ಭುತವಾಗಿ ಸೆರೆಹಿಡಿದಿರೊ ಕ್ರೆಡಿಟ್ ಪವನ್ ಶರ್ಮಾಗೆ ಸೇರುತ್ತೆ…ಇಷ್ಟು ಸುಂದರವಾಗಿ ಮೂಡಿಬಂದಿರೊ ಈ ಫೋಟೊ ಶೂಟ್‌ನ ಹಿಂದೆ ಇಡೀ ತಂಡದ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ..

ಚಂದನವನದ ಬರವಸೆಯ ನಟಿಯಾಗಿ ಹೊರಹೊಮ್ಮುತ್ತಿರುವ ದಿವ್ಯ ಸದ್ಯ ಫೇಸ್ ಟು ಫೇಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.ಜೊತೆಗೆ ಜೋರು ಅನ್ನೋ ಮತ್ತೊಂದು ಸಿನಿಮಾದಲ್ಲೂ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ…ಸಾಲು ಸಾಲು ಸಿನಿಮಾಗಳೊಂದಿಗೆ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿರುವ ದಿವ್ಯ ಸಿನಿ ಪಯಣ ಮತ್ತಷ್ಟು ಉಜ್ವಲವಾಗಿರಲಿ ಅನ್ನೋದೆ ಎಲ್ಲರ ಆಶಯಾ…

LEAVE A REPLY

Please enter your comment!
Please enter your name here