Home Crime ಸಾಲ ಮನ್ನ ಆಗಬೇಕಾದ್ರೆ ಬೇಕು ಅಂದ “ಒನ್ ನೈಟ್ ವೈಫ್”..! ಸಾಲ ಪಡೆದವನ ದ್ವೇಷಕ್ಕೆ ಬಲಿಯಾದ...

ಸಾಲ ಮನ್ನ ಆಗಬೇಕಾದ್ರೆ ಬೇಕು ಅಂದ “ಒನ್ ನೈಟ್ ವೈಫ್”..! ಸಾಲ ಪಡೆದವನ ದ್ವೇಷಕ್ಕೆ ಬಲಿಯಾದ ಹ್ಯಾಂಡಿಕಾಪ್ಟ್..!

2750
0
SHARE

ಅವತ್ತು ಯಾದಗಿರಿಯ ಶಹಪುರ ತಾಲೂಕಿನ ಸಗರ ಗ್ರಾಮದಲ್ಲಿ ಜನರೆಲ್ಲಾ ಬಿಸಿಲಿಗೆ ಬಸವಳಿದು ಊರಿನ ಕಟ್ಟೆಯ ಮೇಲೆ ಕೂತಿದ್ರು. ಆ ಬಿಸಿಲಲ್ಲಿ ಸುಟ್ಟು ಹೋಗಿದ್ದ ಜನರಿಗೆ ತಂಪಾದ ಸಂಜೆಯ ಗಾಳಿ ಹಿತ ನೀಡ್ತಿತ್ತು. ಜನರೆಲ್ಲಾ ಗುಂಪು ಕಟ್ಟಿಕೊಂಡು ಮಾತನಾಡ್ತಿದ್ರು.

ಹೀಗೆ ಮಾತನಾಡ್ತಿದ್ದ ಜನಕ್ಕೆ ದೂರದಲ್ಲೆಲ್ಲೋ ದಟ್ಟವಾದ ಹೊಗೆ ಕಾಣಿಸಿತ್ತು. ಸ್ವಲ್ಪ ಹೊತ್ತಿಗೆ ಅಲ್ಲಿ ದೊಡ್ಡ ಬೆಂಕಿ ಕಾಣಿಸಿತ್ತು. ಊರ ಹೊರಗಿನ ಹೊಲದಲ್ಲಿ ಕಾಣಿಸಿದ್ದ ಬೆಂಕಿಯಾಗಿದ್ರಿಂದ ಅವರೆಲ್ಲಾ ಯಾರೋ ಹೊಲವನ್ನ ಉಳುಮೆ ಮಾಡೋದಕ್ಕಾಗಿ ಅಲ್ಲಿ ಬೆಂಕಿ ಹಾಕಿರಬೇಕು ಅಂತ ಅಂದುಕೊಂಡಿದ್ರು. ಅ0ದು ಹೊಲದಲ್ಲಿ ಕಿತ್ತು ಹಾಕಿದ್ದ ತೊಗರಿ ಕಟ್ಟಿಗೆಯ ಮೇಲೆ ಯಾರನ್ನೋ ಸುಟ್ಟು ಹಾಕಿದ್ದಾರೆ. ಕೊಲೆ ಮಾಡಿ ನಂತ್ರ ಇಲ್ಲೇ ಸುಟ್ಟು ಹಾಕಿದ್ದಾರೆ ಅನ್ನೋದು ಅವನಿಗೆ ಗೊತ್ತಾಗಿತ್ತು.ಪೊಲೀಸ್ರೆಗ ವಿಷಯ ತಿಳಿತಾ ಇದ್ದ ಹಾಗೆ ಅವ್ರು ಕೂಡಾ ಘಟನೆ ನಡೆದ ಸ್ಥಳಕ್ಕೆ ಬಂದಿದ್ರು. ಡಿವೈಎಸ್ಪಿ ಶಿವನಗೌಡ ನಾಯಕ ಅವ್ರು ಕೂಡಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಆದ್ರೆ ಹೆಣ ಪೂರ್ತಿಯಾಗಿ ಸುಟ್ಟು ಹೋಗಿದ್ರಿಂದ ಸತ್ತವನು ಯಾರು ಅನ್ನೋದು ಅವರಿಗೆ ಗೊತ್ತಾಗಲಿಲ್ಲ.

ಆದ್ರೆ ಅಲ್ಲಿ ಸಿಕ್ಕಿದ ಮೂರ್ನಾಕು ವಸ್ತುಗಳಿಂದ ಯಾರು ಅನ್ನೋದು ಪತ್ತೆಯಾಗುತ್ತ ಅಂತ ಪೊಲೀಸ್ರು ಗ್ರಾಮಸ್ಖರನ್ನ ಕೇಳಿದ್ರು. ಆದ್ರೆ  ಯಾರಿಗೂ ಅವನ್ಯಾರು ಅನ್ನೋದು ಪತ್ತೆ ಹಚ್ಚೋದಕ್ಕೆ ಆಗಲಿಲ್ಲ. ಆದ್ರೆ ಅಲ್ಲಿ ಸಿಕ್ಕಿದ ಕೀಯೊಂದು ಕೇಸ್ ನ ಇಂಟರೆಸ್ಟಿಂಗ್ ಡೋರ್ ಲಾಕ್ ಓಪನ್ ಮಾಡುತ್ತೆ ಅನ್ನೋದು ಪೊಲೀಸ್ರ ತಲೆಗೆ ಹೊಳೆದಿತ್ತು. ಹೀಗಾಗಿ ಊರಲ್ಲಿ ಯಾವ ಅಂಗಡಿ ಕ್ಲೋಸ್ ಆಗಿದೆ. ಆ ಅಂಗಡಿಯ ಬೀಗ ಈ ಕೀಯಿಂದ ಓಪನ್ ಆಗುತ್ತ ನೋಡಿ ಅಂತ ಹೇಳಿ ಅದನ್ನ ತಮ್ಮ ಸಿಬ್ಬಂದಿಗೆ ಕೊಟ್ಟು ಕಳುಹಿಸಿದ್ರು. ಪೊಲೀಸ್ರು ಕೂಡಾ ಸಗರ ಗ್ರಾಮದಲ್ಲಿ ಓಪನ್ ಆಗದೇ ಇರೋ ಅಂಗಡಿ ಯಾವುದಾದ್ರು ಇದೆಯಾ ಅಂತ ಹುಡುಕಾಡೋದಕ್ಕೆ ಶುರುಮಾಡಿದ್ರು, ತೀರಾ ಕಷ್ಟಪಟ್ಟು ಹುಡುಕಬೇಕಾದ ಅಗತ್ಯ ಆ ಊರಲ್ಲಿ ಇರಲಿಲ್ಲ. ಇರೋ ಕೆಲವೇ ಕೆಲವು ಅಂಗಡಿಗಳಲ್ಲಿ ಕ್ಲೋಸ್ ಆಗಿರೋದು ಗೊತ್ತಾಗೋದಕ್ಕೆ ಕೆಲವೇ ನಿಮಿಷಗಳು ಸಾಕಾಗಿತ್ತು.

 

ಪೊಲೀಸ್ರಿಗೆ ಸತ್ತವನು ಯಾರು ಅನ್ನೋದು ಗೊತ್ತಾಗಿ ಹೋಗಿತ್ತು. ಸತ್ತು ಹೋದವನು ಬೇರ್ಯಾರು ಆಗಿರಲಿಲ್ಲ. ಅದೇ ಊರಿನಲ್ಲಿ ಪಾನ್ ಶಾಪ್ ಇಟ್ಕೊಂಡಿದ್ದ  ಸೋಪಣ್ಣ ಮ್ಯಾಗೇರಿಯಾಗಿದ್ದ. ಅಷ್ಟೊತ್ತಿಗೆ ಆತನ ಪೋಷಕರು ಕೂಡಾ ಅಲ್ಲಿಗೆ ಬಂದಿದ್ರು. ಅವ್ರು ಕೂಡಾ ಇದು ನಮ್ಮ ಹುಡುಗನೇ ಅಂತ ಅವ್ರು ಕೂಡಾ ಗುರುತು ಪತ್ತೆ ಹಚ್ಚಿದ್ರು. ಅಲ್ಲಿಗೆ ಪೊಲೀಸ್ರಿಗೆ ಸತ್ತವನು ಯಾರು ಅನ್ನೋದು ಕನ್ಫರ್ಮ್ ಆಯ್ತು. ಆದ್ರೆ ಇಲ್ಲಿ ಪೋಸ್ಟ್ ಮಾರ್ಟಂ ಅಂತ ಮಾಡೋದಕ್ಕೂ ಯಾವುದೇ ಪೀಸ್ ಉಳಿದಿರಲಿಲ್ಲ. ಆದ್ರೂ ಕಾನೂನು ಪ್ರಕಾರವಾಗಿ ಸತ್ತವನು ಇವನೇ ಅನ್ನೋದನ್ನ ವೈಜ್ಞಾನಿಕವಾಗಿ ತಿಳಿದುಕೊಳ್ಳೋದಕ್ಕೆ ಫೋರೆನ್ಸಿಕ್ ಗೆ ಕಳುಹಿಸಿದ್ರು. ನಂತ್ರ ಪೊಲೀಸ್ರು ಆ ಫ್ಯಾಮಿಲಿಯವರು ಕೊಟ್ಟ ದೂರಿನ ಮೇರೆಗೆ ತನಿಖೆ ಶುರುಮಾಡಿದ್ರು.ಶಹಪುರ ಇನ್ಸ್ ಪೆಕ್ಟರ್ ನಾಗರಾಜ್ ಅವ್ರು ತನಿಖೆ ಶುರುಮಾಡಿದ್ರು, ಅವರಿಗೆ ಇವನ ಹಿನ್ನಲೆಯೇನು, ಯಾರು ಇವನನ್ನ ಕೊಲೆ ಮಾಡಿದ್ದಾರೆ ಅನ್ನೋ ನಾನಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿತ್ತು.

ಹೀಗಾಗಿ ಮತ್ತೆ ಆ ಊರಿಗೆ ಬಂದ್ರು. ಆಗ ಅವನ ಬಗ್ಗೆ ತಿಳಿದುಕೊಳ್ಳೋದಕ್ಕೆ ಶುರುಮಾಡಿದ್ರು. ಈ ಸೋಪಣ್ಣ ಮ್ಯಾಗೇರಿ ಹುಟ್ಟ ಅಂಗವಿಕಲ. ಅವನ ಅಪ್ಪ ಅಮ್ಮಂದಿರ 6 ಮಕ್ಕಳಲ್ಲಿ ಇವನು ಒಬ್ಬ. ಇನ್ನು ಮದುವೆಯಾಗಿರಲಿಲ್ಲ. ಅಂಗವಿಕಲ ಆಗಿದ್ರಿಂದ ಎರಡು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ. ಆದ್ರೆ ದುಡಿಮೆ ವಿಚಾರದಲ್ಲಿ ಆತ ಯಾರ ಸಹಾಯವನ್ನ ಕೂಡಾ ಪಡೆದಿರಲಿಲ್ಲ. ಅವನಿಗೆ ತಾನು ದೈಹಿಕವಾಗಿ ಮಾತ್ರ ವಿಕಲಚೇತನ ಅನ್ನೋದು ಗೊತ್ತಿತ್ತು. ಹೀಗಾಗಿ ಮಾನಸಿಕವಾಗಿ ಆತ ತುಂಬಾನೆ ಸ್ಟ್ರಾಂಗ್ ಆಗಿದ್ದ.ಸೋಪಣ್ಣ ಊರಲ್ಲೇ ಒಂದು ಪಾನ್ ಶಾಪ್ ಇಟ್ಕೊಂಡು ಜೀವನ ನಡೆಸ್ತಿದ್ದ. ಅಲ್ಲದೆ ಒಂದಿಷ್ಟು ಹಣವನ್ನ ಸಂಪಾದನೆ ಮಾಡಿದ್ದ. ಆ ಹಣದಲ್ಲಿ ಆತ ಊರಲ್ಲೇ ಒಂದಿಷ್ಟು ಫೈನಾನ್ಸ್ ವ್ಯವಹಾರ ನಡೆಸ್ತಿದ್ದ.

ಸುಮಾರು ಜನರಿಗೆ ಆತ ಬಡ್ಡಿಗೆ ಹಣವನ್ನ ನೀಡ್ತಿದ್ದ. ಎಷ್ಟು ಚೆನ್ನಾಗಿ ಹಣವನ್ನ ಕೊಡ್ತಿದ್ನೋ ಅಷ್ಟೇ ಅವಾಜ್ ಹಾಕಿ ಆತ ಹಣವನ್ನ ವಾಪಸ್ ಪಡೆಯುತ್ತಿದ್ದ. ಹೀಗೆ ಕೊಡೋದು ತಗೊಳ್ಳೋ ವ್ಯವಹಾರದಲ್ಲಿ ಒಂದಿಷ್ಟು ಹಣ ಸಂಪಾದನೆ ಮಾಡ್ಕೊಂಡಿದ್ದ. ಇದೆಲ್ಲಾ ವಿಷಯವನ್ನ ಪೊಲೀಸ್ರಿಗೆ ಆ ಊರಿನ ಜನ ಮತ್ತು ಮನೆಯವರು ಹೇಳಿದ್ದಾರೆ. ಅಲ್ಲಿಗೆ ಪೊಲೀಸ್ರಿಗೆ ಕನ್ಫರ್ಮ್ ಆಗಿ ಹೋಗಿತ್ತು. ಯಾಕಂದ್ರೆ ಹಣಕಾಸಿನ ವಿಚಾರವಾಗಿಯೇ ಈ ಕೊಲೆ ನಡೆದಿದೆ ಅನ್ನೋದು ಅವರಿಗೆ ಗೊತ್ತಾಗಿತ್ತು. ಆದ್ರೆ ಯಾರು ಕೊಲೆ ಮಾಡಿದ್ದು ಅನ್ನೋದು ಮಾತ್ರ ಅವರಿಗೆ ಗೊತ್ತಾಗಬೇಕಿತ್ತು. ಯಾಕಂದ್ರೆ ತುಂಬಾ ಜನಕ್ಕೆ ಆತ ಹಣ ನೀಡಿದ್ದ. ಅಲ್ಲದೆ ಅವನ ವ್ಯವಹಾರ ಪೂರ್ತಿ ಮನೆಯವರಿಗೆ ಗೊತ್ತಿರಲಿಲ್ಲ. ಹೀಗಾಗಿ ಯಾರು ಮಾಡಿರಬಹುದು ಅನ್ನೋದು ಪೊಲೀಸ್ರನ್ನ ಕೊರೆಯೋದಕ್ಕೆ ಶುರುಮಾಡಿತು.. ಏನೇನು ಕ್ಲೂ ಇಲ್ಲದ ಕೇಸ್ ನಲ್ಲಿ ಮೂರೇ ದಿನಕ್ಕೆ ಅವರಿಗೆ ಯಶಸ್ಸು ಸಿಕ್ಕಿತ್ತು.

ಹಣಕಾಸಿನ ವಿಚಾರದಲ್ಲಿ ಯಾವಾಗ್ಲೂ ಹಾಗೆ ಹಣ ಪಡೆಯುವಾಗ ಇರೋ ದೋಸ್ತಿ ಹಣ ಪಡೆದ ನಂತ್ರ ಇರೋದಿಲ್ಲ. ಸಾಲ ಕೇಳುವಾಗ ತೋರಿಸೋ ನಿಯತ್ತು ಅದನ್ನ ವಾಪಸ್ ಕೊಡುವಾಗ ಇರೋದಿಲ್ಲ. ಹೀಗೆ ಇಲ್ಲೂ ಆಗಿತ್ತು ಹಣ ಪಡೆದವನಿಗೆ ವಾಪಸ್ ಕೊಡುವ ಯೋಚನೆಯಿರಲಿಲ್ಲ. ಅಲ್ಲದೆ ಹಣ ಕೊಟ್ಟವನಿಗೆ ಅದೇ ವಾಪಸ್ ಸಿಗಬೇಕು ಅಂತ ಏನಿರಲಿಲ್ಲ. ಬದಲಿಗೆ ಇನ್ನೇನಾದ್ರು ಸಿಕ್ಕಿದ್ರು ಆಗ್ತಿತ್ತು. ಇಲ್ಲಿ ಇವರಿಬ್ಬರ ಜಗಳಕ್ಕೆ ಅದೇ ಕಾರಣವಾಗಿತ್ತು.ಸೋಪಣ್ಣನ ಮರ್ಡರ್ ಕೇಸ್ ನಲ್ಲಿ ಪೊಲೀಸ್ರು ಮಂಜುನಾಥ್ ಊರು ಕಾಯಿ ಅನ್ನೋ ಇಪ್ಪತ್ತಮೂರು ವರ್ಷದ  ಯುವಕನನ್ನ ಅರೆಸ್ಟ್ ಮಾಡಿದ್ರು. ವಯಸ್ಸು ಸಣ್ಣದು ಹುಡುಗನದ್ದು ಆದ್ರೆ ಸಂಸಾರದಲ್ಲಿ ಅನುಭವ ದೊಡ್ಡದು. ನಾವು ನಿಮಗೆ ಸ್ಟಾರ್ಟಿಂಗ್ ನಲ್ಲೇ ಹೇಳಿದ್ವಿ. ಇಲ್ಲಿ ಜನ ತಮ್ಮ ಅರ್ಧ ವರ್ಷವನ್ನ ಸಾಲ ಮಾಡಿಯೇ ಕಳೆಯುತ್ತಾರೆ ಅಂತ. ಹಾಗೆ ಸಾಲ ಮಾಡಿದ್ದ  ಈ ಮಂಜುನಾಥ್.

ಮಂಜುನಾಥ್ ಸೋಪಣ್ಣನ ಹತ್ತಿರ 20 ಸಾವಿರ ರೂಪಾಯಿ ಸಾಲ ಮಾಡಿದ್ದ. ಅದನ್ನ ಆತ ಬಡ್ಡಿಗೆ ಅಂತ ಕೊಟ್ಟಿದ್ದ. ಬಡ್ಡಿಗ ಅಂತ ಹಣ ಕೊಟ್ಟ ಮೇಲೆ ಪ್ರತಿ ತಿಂಗಳು ಸರಿಯಾಗಿ ಬಡ್ಡಿ ಹಣವನ್ನ ಕಟ್ಟಬೇಕು. ಆಗದೇ ಇದ್ರೆ ಸರಿಯಾದ ಟೈಂಗೆ ಅಸಲನ್ನಾದ್ರು ಕೊಡಬೇಕು.ಆದ್ರೆ ಇಲ್ಲಿ ಮಂಜುನಾಥ್ ಸೋಪಣ್ಣನಿಗೆ ಸರಿಯಾಗಿ ಬಡ್ಡಿಯನ್ನ ಕೊಟ್ಟಿರಲಿಲ್ಲ. ಅಲ್ಲದೆ ಅಸಲನ್ನ ಕೂಡಾ ಕೊಟ್ಟಿರಲಿಲ್ಲ.ಇದೇ ವಿಚಾರವಾಗ ಆತ ಮತ್ತೆ ಮತ್ತೆ ಇವನ ಹಿಂದೆ ಹಣಕ್ಕಾಗಿ ಹಿಂದೆ ಬಿದ್ದಿದ್ದ. ಅವನಿಗೂ ಕೂಡಾ ಎಲ್ಲೂ ಹಣ ಅಡ್ಜಸ್ಟ್ ಆಗಿಲ್ಲ ಅಂತ ಕಾಣಿಸುತ್ತೆ ಅದಕ್ಕೆ ಆತ ಇವತ್ತ ಕೊಡ್ತೀನಿ ನಾಳೆ ಕೊಡ್ತೀನಿ ಅಂತ ಕಥೆ ಹೇಳ್ತಿದ್ದ. ಹೀಗಾಗಿ ಅವನಿಗೂ ಇವನ ಕಥೆ ಕೇಳಿ ಸಾಕಾಗಿ ಹೋಗಿತ್ತು. ಅವತ್ತೊಂದು ದಿನ ಇಬ್ಬರು ಗಲಾಟೆ ಮಾಡಿಕೊಂಡಿದ್ರು. ಸೋಪಣ್ಣ ಇವತ್ತೇ ಹಣ ಕೊಡಬೇಕು ಅಂತ ಕೂತ್ಕೊಂಡಿದ್ದ. ಆದ್ರೆ ಅವನು ನನ್ನ ಹತ್ತಿರ ಈಗ ಹಣ ಇಲ್ಲ ಅಂತ ಹೇಳ್ತಿದ್ದ.

ಆಗ ಸೋಪಣ್ಣ ಸುಮ್ಮಿರಲಾರದೆ ನಿಮಗೆ ಹಣ ಕೊಡೋದಕ್ಕ ಆಗದೇ ಇದ್ರೆ ಒಂದು ರಾತ್ರಿಗೆ ನಿನ್ನ ಹೆಂಡ್ತಿನ ನನ್ನ ಹತ್ತಿರ ಕಳಿಸು ನಾನು ಅಷ್ಟು ದುಡ್ಡನ್ನ ಮಾಫಿ ಮಾಡ್ತೀನಿ ಅಂತ ಹೇಳಿದ್ದ.  ಈ ಮಾತು ಮಂಜುನಾಥನನ್ನ ಕೆರಳಿಸಿಬಿಟ್ಟಿತ್ತು. ಅದಕ್ಕೆ ನಾಳೆ ನಿನ್ನ ದುಡ್ಡು ಕೊಡ್ತೀನಿ ಅಂತ ಹೇಳಿ ಹೋಗಿದ್ದ.ಹಾಗೆ ಮಂಜುನಾಥ ಇವನಿಗೆ ಒಂದು ಗತಿ ಕಾಣಿಸದೇ ಇದ್ರೆ ಸರಿಯಿರೋದಿಲ್ಲ ಅಂತ ಅಂದುಕೊಂಡಿದ್ದ. ಅದಕ್ಕೆ ಮಾರನೇ ದಿನ ಸಂಜೆ ಅವನ ಅಂಗಡಿ ಹತ್ತಿರ ಹೋಗಿ ಬಾ ದುಡ್ಡು ಕೊಡ್ತೀನಿ. ಅದಕ್ಕಿಂತ ಮೊದಲು ಪಾರ್ಟಿ ಮಾಡೋಣ ಅಂತ ಹೇಳಿದ್ದಾನೆ. ಸೋಪಣ್ಣ ಕೂಡಾ ಇವತ್ತು ದುಡ್ಡು ಸಿಗುತ್ತೆ ಅಂತ ಹೇಳಿ ಅವನ ಜೊತೆ ಬೈಕ್ ಹತ್ತಿ ಕೂತಿದ್ದ. ಅಲ್ಲದೆ ಇಬ್ಬರು ಹೋಗಿ ಎಣ್ಣೆ ಮತ್ತು ಚಿಪ್ಸ್ ಅನ್ನ ತಗೊಂಡಿದ್ರು.

ನಂತ್ರ ಆತನನ್ನ ಹೊಲವೊಂದರ ಬಳಿ ಕರ್ಕೊಂಡು ಹೋಗಿ ಅಲ್ಲೆ ಇಬ್ಬರು ಕುಡಿದಿದ್ದಾರೆ. ಸ್ವಲ್ಪ ನಶೆ ಏರ್ತಿದ್ದ ಹಾಗೆ ಆತ ಎದ್ದು ಹೋಗಿ ತನ್ನ ಬೈಕ್ ನಲ್ಲಿ ಇಟ್ಟುಕೊಂಡಿದ್ದ ರಾಡ್ ಅನ್ನ ಎಳ್ಕೊಂಡು ಬಂದಿದ್ದಾನೆ. ನಂತ್ರ ಆ ರಾಡ್ ನಲ್ಲಿ ಹಿಂದಿನಿಂದ ಬಂದು ಆತನ ತಲೆಗೆ ಹೊಡೆದಿದ್ದಾನೆ. ಆತ ನೋವಿನಲ್ಲಿ ಕೂಗುತ್ತಾ ನೆಲದ ಮೇಲೆ ಬೀಳ್ತಿದ್ದ ಹಾಗೆ ಆವನನ್ನ ಎಳೆದು ತೊಗರಿ ಕಟ್ಟಿಗೆ ಮೇಲೆ ಎಳೆದು ಹಾಕಿದ್ದ.ನಂತ್ರ ಆತ ಜೀವಂತವಾಗಿರುವಾಗ್ಲೇ ಅವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಅಲ್ಲದೆ ಅವನು ಸುಟ್ಟು ಹೋಗೋವರೆಗೂ ಅಲ್ಲೇ ನಿಂತಿದ್ದ. ಕೊನೆಗೆ ಬೈಕ್ ಸ್ಟಾರ್ಟ್ ಮಾಡ್ಕೊಂಡು ಅಲ್ಲಿಂದ ಹೊರಟಿದ್ದ. ಸೀದಾ ಊರಿಗೆ ಹೋಗದೆ ತನ್ನ ಹೆಂಡ್ತಿ ಮನೆಗೆ ಹೋಗಿ ಬಚ್ಚಿಟ್ಟುಕೊಂಡಿದ್ದ. ಅಲ್ಲದೆ ಬೆಳಗಿನ ಜಾವ 4 ಗಂಟೆಯ ಹೊತ್ತಿಗೆ ಮತ್ತೆ ಬಂದು ಆತನ ಬಾಡಿ ಸ್ಥಿತಿ ಹೇಗಿದೆ ಅಂತ ನೋಡ್ಕೊಂಡು ಹೋಗಿದ್ದ.

ಪೂರ್ತಿಯಾಗಿ ಸುಟ್ಟು ಹೋಗದೆ ಇದ್ರೆ ಬಾಡಿಯನ್ನ ತಗೊಂಡು ಹೋಗೋಣ ಅಂತ ಅಂದುಕೊಂಡಿದ್ದ. ಆದ್ರೆ ಪೂರ್ತಿಯಾಗಿ ಸುಟ್ಟು ಹೋಗಿದ್ರಿಂದ ಆತ ಹಾಗೆ ಹೊರಟು ಹೋಗಿದ್ದ. ಮೂರು ದಿನ ಹೆಂಡ್ತಿ ಮನೆಯಿಂದ ಆಚೆಗೆ ಬಂದಿರಲಿಲ್ಲ. ನಂತ್ರ ಪೊಲೀಸ್ರು ಮಾವನ ಮನೆಯಲ್ಲಿ ಮಲಗಿದ್ದ ಮಂಜನನ್ನ ಎಳ್ಕೊಂಡು ಹೋಗಿ ಬೆಂಡೆತ್ತಿದಾಗ ಆತ ಸತ್ಯವನ್ನ ಬಾಯಿಬಿಟ್ಟಿದ್ದ.ಅಲ್ಲಿಗೆ ಪೊಲೀಸ್ರು ಈ ಕೇಸ್ ಅನ್ನ ಸಾಲ್ವ್ ಮಾಡಿದ್ರು. ಆದ್ರು ಕೆಲವೊಮ್ಮೆ ತೀರಾ ಅಂದ್ರೆ ತೀರ ಮಾತಿನಲ್ಲೇ ಬಗೆಹರಿದು ಹೋಗಬಹುದಾದ ಸಮಸ್ಯೆಗಳಿಗೆ ಕೊಲೆಯಾಗುತ್ತೆ ಅಂದ್ರೆ ಅದನ್ನ ನಂಬೋದಕ್ಕೆ ಆಗೋದಿಲ್ಲ. ಈಗ ಒಬ್ಬ ಜೀವನದಲ್ಲಿ ಯಾವುದೇ ಸುಖ ಕಾಣದೆ ಬರಿ ಮಾತನಾಡಿ ಸತ್ತು ಹೋಗಿದ್ದಾನೆ. ಇನ್ನೊಂದು ಕಡೆ ಹೆಂಡ್ತಿ ಮಕ್ಕಳು ಅಂತ ಖುಷಿಯಾಗಿರೋದನ್ನ ಬಿಟ್ಟು ಆತ ಲೈಫ್ ಟೈಂ ಜೈಲಲ್ಲಿ ಕೂರಬೇಕಿದೆ. ಇದಕ್ಕೆ ಅಲ್ವಾ ಹೇಳೋದು ತಾಳ್ಮೆ ಇರಬೇಕು ಅಂತ. ತಾಳ್ಮೆ ಇರದೇ ಇದ್ರೆ ಇಂತಹ ಅನಾಹುತಗಳೆಲ್ಲ ನಡೆದು ಹೋಗುತ್ತೆ. ಪಾಪ ಈಗ ಎರಡು ಸಂಸಾರಕ್ಕೆ ಯಾರು ದಿಕ್ಕು ಅಲ್ವಾ.

LEAVE A REPLY

Please enter your comment!
Please enter your name here