Home Latest ಸಾವಿರದ ಟೆಸ್ಟ್ ಪಂದ್ಯ ಆಡುವ ಹುಮ್ಮಸ್ಸಿನಲ್ಲಿ ಆಂಗ್ಲರು..! ಗೆಲುವಿನ ಮೂಲಕ ಸರಣಿ ಶುಭಾರಂಭ ಮಾಡಲು ಕೊಹ್ಲಿ...

ಸಾವಿರದ ಟೆಸ್ಟ್ ಪಂದ್ಯ ಆಡುವ ಹುಮ್ಮಸ್ಸಿನಲ್ಲಿ ಆಂಗ್ಲರು..! ಗೆಲುವಿನ ಮೂಲಕ ಸರಣಿ ಶುಭಾರಂಭ ಮಾಡಲು ಕೊಹ್ಲಿ ತಂಡ ಕಾತರ…

2923
0
SHARE

ಭಾರತ ಹಾಗೂ ಇಂಗ್ಲೆಂಡ್ ನಡುವಣ ಬಹುನಿರೀಕ್ಷಿತ ಟೆಸ್ಟ್ ಸರಣಿ ಇಂದಿನಿಂದ ಪ್ರಾರಂಭವಾಗಲಿದೆ ಎಡ್ಜ್ ಬಾಸ್ಟನ್ ಮೈದಾನದಲ್ಲಿ ನಡೆಯಲಿರೋ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗೆ ಸೆಣಸಲಿವೆ. ಟಿ-20 ಸರಣಿ ಗೆದ್ದು , ಏಕದಿನ ಸರಣಿಯಲ್ಲಿ ಮುಗ್ಗರಿಸಿದ್ದ ಕೊಹ್ಲಿಪಡೆ, ಮಹತ್ವದ ಟೆಸ್ಟ್ ಸರಣಿಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡುವ ಪ್ಲಾನ್ ನಲ್ಲಿದೆ…

ಇದಕ್ಕಾಗಿ ಕ್ಯಾಪ್ಟನ್ ಕೊಹ್ಲಿ ಕೂಡ ರಣತಂತ್ರವನ್ನ ಹೆಣೆದಿದ್ದಾರೆ. ಇನ್ನು ತವರಿನಲ್ಲಿ ಬಲಾಢ್ಯವಾಗಿರೋ ಇಂಗ್ಲೆಂಡ್ ಕೂಡ ತನ್ನ ಶಕ್ತಿ ಸಾಮರ್ಥ್ಯವನ್ನ ಪ್ರದರ್ಶಿಸಲು ಸಜ್ಜಾಗಿದೆ. ವಿಶ್ವ ಕ್ರಿಕೆಟ್ ನ ನಂಬರ್ 1 ತಂಡವಾಗಿರೋ ಟೀಂ ಇಂಡಿಯಾಗೆ ಈ ಸರಣಿ ಪ್ರತಿಷ್ಠೆಯ ಕಣವಾಗಿದೆ. ಆಂಗ್ಲರ ನಾಡಲ್ಲಿ ಭಾರತ ತಂಡ ಈ ಹಿಂದೆ ಅತ್ಯಂತ ಕಳಪೆ ಸಾಧನೆಯನ್ನ ನೀಡಿದೆ…

ಇದೀಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹೊಸ ಇತಿಹಾಸವನ್ನ ಬರೆಯುವ ಅವಕಾಶವನ್ನ ತಂಡ ಹೊಂದಿದೆ. ಹೀಗಾಗಿ ಕೊಹ್ಲಿ ಆಂಡ್ ಕಂಪನಿ ಕ್ರಿಕೆಟ್ ಮಹಾಯುದ್ಧಕ್ಕೆ ಭರ್ಜರಿ ತಾಲೀಮು ನಡೆಸಿಕೊಂಡು ಸನ್ನದ್ಧರಾಗಿದ್ದಾರೆ. ಈ ಮೂಲಕ ಇಂಗ್ಲೀಷರಿಗೆ ಅವರದ್ದೆ ನೆಲದಲ್ಲಿ ಮಣ್ಣು ಮುಕ್ಕಿಸುವ ಲೆಕ್ಕಾಚಾರದಲ್ಲಿ ಯಂಗ್ ಇಂಡಿಯಾ ಇದೆ…

ಇನ್ನು ಇಂಗ್ಲೆಂಡ್ ತಂಡಕ್ಕೆ ಇದು ಸಾವಿರನೇ ಟೆಸ್ಟ್ ಪಂದ್ಯವಾಗಿದ್ದು, ಈ ಅವಿಸ್ಮರಣೀಯ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನ ನೀಡಿ ಭಾರತ ತಂಡಕ್ಕೆ ಶಾಕ್ ಕೊಡುವ ಕನಸಿನಲ್ಲಿದೆ…

LEAVE A REPLY

Please enter your comment!
Please enter your name here