Home KARNATAKA ಸಿಲಿಕಾನ್ ಸಿಟಿಯಲ್ಲಿ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಶಾಕಿಂಗ್ ನ್ಯೂಸ್..!? 15 ವರ್ಷಕ್ಕಿಂತ ಹಳೆಯ ವಾಹನಗಳು...

ಸಿಲಿಕಾನ್ ಸಿಟಿಯಲ್ಲಿ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಶಾಕಿಂಗ್ ನ್ಯೂಸ್..!? 15 ವರ್ಷಕ್ಕಿಂತ ಹಳೆಯ ವಾಹನಗಳು ಬ್ಯಾನ್..!?

2706
0
SHARE

ಸಿಲಿಕಾನ್ ಸಿಟಿಯಲ್ಲಿ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಶಾಕಿಂಗ್ ನ್ಯೂಸ್ ಕಾದಿದೆ.. 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನ ನಿಷೇಧಿಸುವಂತೆ ಸರ್ಕಾರಕ್ಕೆ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ನೀಡಿದೆ. ರಾಜಧಾನಿಯಲ್ಲಿ ಹೆಚ್ಚುತ್ತಿರೋ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ಒಂದು ವೇಳೆ, ಹೊಸ ನಿಯಮ ಜಾರಿಗೆ ಬಂದರೆ ಸುಮಾರು 16 ಲಕ್ಷ ವಾಹನಗಳು ಗುಜರಿ ಸೇರಲಿವೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ. ವಾಹನಗಳು ಕೂಡ ವಾಯು ಮಾಲಿನ್ಯಕ್ಕೆ ತಮ್ಮ ಕೊಡುಗೆ ನೀಡುತ್ತಿವೆ. ಹೀಗಾಗಿ ರಾಜಧಾನಿಯಲ್ಲಿ 15 ವರ್ಷಗಳ ಹಳೆಯ ವಾಹನ ನಿಷೇಧಿಸಲು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈಗಾಗಲೇ 16 ವಾಹನಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ನಿಷೇಧಿಸುವಂತೆ ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. 70 ಲಕ್ಷ ವಾಹನಗಳ ಪೈಕಿ 32 ಸಾವಿರ ವಾಹನಗಳು ವಾಯುಮಾಲಿನ್ಯ ತಪಾಸಣೆ ಮಾಡಲಾಗಿದೆ. ಶೇಕಡ 14ರಷ್ಟು ಪೆಟ್ರೋಲ್ ಹಾಗೂ ಶೇಕಡ 25 ರಷ್ಟು ಡೀಸೆಲ್ ವಾಹನಗಳಲ್ಲಿ ವಿಷಕಾರಿ ಹೊಗೆ ಬರುತ್ತಿದೆ. ಇದು ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ವಾಯುಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.

15 ವರ್ಷಗಳ ಹಿಂದಿನ 16ಲಕ್ಷ ವಾಹನ ನಿಷೇಧಿಸುವಂತೆ ಎರಡು ವರ್ಷಗಳ ಹಿಂದೆಯೇ ನೋಟಿಸ್ ಜಾರಿ ಮಾಡಿದರೂ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.ಆದ್ರೆ, ಏಕಾಏಕಿ 16 ಲಕ್ಷ ವಾಹನ ನಿಷೇಧ ಮಾಡೋದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹಳೇ ವಾಹನಗಳ ನಿಷೇಧದಿಂದ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗೋ ಸಾಧ್ಯತೆಗಳೂ ಇದೆ.

ಹೀಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ, ಕೇಂದ್ರ ಸರ್ಕಾರದ ಕೆಲ ಮಸೂದೆಯಲ್ಲೇ ತಿದ್ದುಪಡಿ ತರುವಂತೆ ಸಲಹೆ ಕೂಡ ನೀಡಲಾಗಿದೆ.. ಇದಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಟಾಸ್ಕ್ ಫೋರ್ಸ್ ರಚನೆ ಮಾಡಿ, ಎಷ್ಟು ವರ್ಷದ ಹಿಂದಿನ ವಾಹನಗಳನ್ನ ಹಾಗೂ ಯಾವ ಮಾದರಿಯ ವಾಹನಗಳನ್ನ ನಿಷೇಧಿಸಬೇಕೆನ್ನೋ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.

ಯಾವೆಲ್ಲಾ ವಾಹನಗಳು ಹೊಗೆ ಸೂಸುತ್ತಿವೆ.ಯಾವ ವಾಹನಗಳಿಂದ ಬರ್ತಿರೋ ಹೊಗೆ ಹಾನಿಕಾರಕವಾಗಿವೆ ಅನ್ನೋ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ವಾಯುಮಾಲಿನ್ಯದಿಂದ ತತ್ತರಿಸಿರೋ ದೆಹಲಿಯಂತೆ ಬೆಂಗಳೂರು ಆಗಬಾರದೆಂಬ ಮುನ್ನೆಚ್ಚರಿಕೆಯಾಗಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಹಳೇ ವಾಹನಗಳ ನಿಷೇಧಕ್ಕೆ ಶಿಫಾರಸು ಮಾಡಿದೆ.. ಆದ್ರೆ, ಸರ್ಕಾರ ಈ ಶಿಫಾರಸ್ಸನ್ನು ಜಾರಿಗೆ ತರುತ್ತಾ ಇಲ್ವಾ ಅನ್ನೋದನ್ನ ಕಾದು ನೋಡಬೇಕು.

LEAVE A REPLY

Please enter your comment!
Please enter your name here