Home District ಸುಮಲತಾ,ದರ್ಶನ್,ರಾಕ್‌ಲೈನ್ ಎಲ್ರೂ ನಾಯ್ಡುಗಳೇ. ಮಂಡ್ಯ ನಾಯ್ಡುಗಳ ಮಯ ಆಗಲು ಬಿಡಲ್ಲ. ಗೌಡರನ್ನು ಮದುವೆಯಾದ ಸುಮಲತಾ ಗೌಡ್ತಿ...

ಸುಮಲತಾ,ದರ್ಶನ್,ರಾಕ್‌ಲೈನ್ ಎಲ್ರೂ ನಾಯ್ಡುಗಳೇ. ಮಂಡ್ಯ ನಾಯ್ಡುಗಳ ಮಯ ಆಗಲು ಬಿಡಲ್ಲ. ಗೌಡರನ್ನು ಮದುವೆಯಾದ ಸುಮಲತಾ ಗೌಡ್ತಿ ಹೇಗೆ ಆಗುತ್ತಾರೆ! ನಾಲಗೆ ಹರಿಬಿಟ್ಟ ಶಿವರಾಮೇಗೌಡ.!

3443
0
SHARE

ಜಾತ್ಯಾತೀತ ಎಂದು ಇಟ್ಟುಕೊಂಡು, ಜೆಡಿಎಸ್ ಜಾತಿ ರಾಜಕಾರಣ ಮಾಡುತ್ತಿದೆ… ಬಹುಷಃ ಚುನಾವಣೆಯಲ್ಲಿ ಸಿಎಂ ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತ್ರೆ ಅದಕ್ಕೆ ಕಾರಣ ಮಂಡ್ಯದ ಕೆಲವು ಜೆಡಿಎಸ್ ನಾಯಕರೇ ಕಾರಣ…

ಜೆಡಿಎಸ್ ನಾಯಕರ ನುಡಿಮುತ್ತಗಳು ಪ್ರಜ್ಞಾವಂತ ಮತದಾರರಲ್ಲಿ ವಾಕರಿಕೆ ತರುತ್ತಿದೆ.ಸಿಎಂ ಪುತ್ರ ನಿಖಿಲ್ ವಿರುದ್ಧ ಯಾರು ಸ್ಪರ್ಧಿಸಬಾರದೆಂಬ ಹಿಟ್ಲರ್ ಧೋರಣೆ ಹೊಂದಿರೋ ಜೆಡಿಎಸ್ ನಾಯಕರು ಅಖಾಡದಲ್ಲಿರೋ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ವೈಯುಕ್ತಿಕವಾಗಿ ವಾಕ್ಸಮರ ನಡೆಸುತ್ತಾ ತೀರ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ…,

ಹಾಲಿ ಸಂಸದ ಶಿವರಾಮೇಗೌಡ ಮಂಡ್ಯ ಜಿಲ್ಲೆ ಕೊಪ್ಪದಲ್ಲಿ ಮಾತನಾಡಿ ಸುಮಲತಾರ ಜಾತಿ ಕೆದಕಿ ಅಸಹ್ಯ ಹುಟ್ಟಿಸಿದ್ದಾರೆ… ಸುಮಲತಾ ನಾಯ್ಡು ಜಾತಿಗೆ ಸೇರಿದವರು. ಅವರು ಅಂತರ್ಜಾತಿ ವಿವಾಹವಾಗಿದ್ದರು. ಅಂಬರೀಷ್ ಅವರನ್ನು ಮದುವೆಯಾದ ಮಾತ್ರಕ್ಕೆ ನಾಯ್ಡು ಜನಾಂಗಕ್ಕೆ ಸೇರಿದ ಸುಮಲತಾ ಗೌಡ್ತಿ ಆಗುವುದಿಲ್ಲ.

ಅವರ ಜಾತಿ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದಿದ್ದಾರೆ. ಈಗ ಮಂಡ್ಯವನ್ನೂ ನಾಯ್ಡುಮಯವನ್ನಾಗಿಸಲು ಹೊರಟಿದ್ದಾರೆ. ನಟ ದರ್ಶನ್, ರಾಕ್‌ಲೈನ್ ವೆಂಕಟೇಶ್ ಕೂಡ ನಾಯ್ಡು ಜನಾಂಗದವರು ಎಂದು ಶಿವರಾಮೇಗೌಡ ನಾಲಗೆ ಹರಿಬಿಟ್ಟಿದ್ದಾರೆ.ಏಪ್ರಿಲ್ 18ಕ್ಕೆ ಸುಮಲತಾ ಅವರ ಟೂರಿಂಗ್ ಟಾಕೀಸ್ ಸಿನಿಮಾ ಶೂಟಿಂಗ್ ಪ್ಯಾಕಪ್ ಆಗಲಿದೆ, ಆಮೇಲೆ ಯಾವ ಸುಮಕ್ಕನೂ ಇಲ್ಲ, ಪಮಕ್ಕನೂ ಇಲ್ಲ, ಅವರನ್ನು ಹುಡುಕಿಕೊಂಡು ಗಾಂಧಿನಗರಕ್ಕೆ ಹೋಗಬೇಕು, ಶೂಟಿಂಗ್ ಮುಗಿಸಿದ ಎಲ್ಲಾ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ,

ಇದು ಕೂಡ ಹಾಗೆಯೇ ಎಂದು ಸಂಸದ ಎಲ್, ಆರ್ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.ಇನ್ನೂ ಜಾತಿ ರಾಜಕಾರಣ ಶುರು ಮಾಡಿದ ಶಿವರಾಮೇಗೌಡಗೆ ಸುಮಲತಾ ಮತ್ತು ದರ್ಶನ್ ತಿರುಗೇಟು ನೀಡಿದ್ದಾರೆ.. ಜಾತಿ ಬಿಟ್ಟು ಮಾತನಾಡಲು ಜೆಡಿಎಸ್ ನಾಯಕರಿಗೆ ಇನ್ನೇನಿದೆ ಎಂದು ಸುಮಲತಾ ಪ್ರಶ್ನಿಸಿದ್ದಾರೆ..

ಸುಮಲತಾ ಪರ ಪ್ರಚಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್‌, ಹೌದು ನಾನು ನಾಯ್ಡು, ಅದರಲ್ಲಿ ತಪ್ಪೇನು, ನಾಯ್ಡು ಆಗಿಬಿಟ್ಟರೆ ಅಪರಾಧನಾ ಎಂದು ಪ್ರಶ್ನಿಸಿದ್ದಾರೆ. ನಾನೊಂದು ರೀತಿ ಕಾಡು ಮನುಷ್ಯ ಇದ್ದ ಹಾಗೆ. ಯಾವುದಕ್ಕೂ ಕೇರ್‌ ಮಾಡಲ್ಲ. ಅವರು ಈ ರೀತಿಯ ಹೇಳಿಕೆ ಕೊಟ್ಟರೆ ನಾನೇನೂ ಹೇಳಲ್ಲ, ಅವರನ್ನೇ ಕೇಳಿ ಎಂದು ದರ್ಶನ್‌ ತಿರುಗೇಟು ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here