Home Cinema  ಸುಮಲತಾ ಗೆಲುವಿಗೆ ಟೊಂಕ ಕಟ್ಟಿ ನಿಂತ ದರ್ಶನ್, ಯಶ್! ಸುಮಲತಾ ಪರ ಮಂಡ್ಯದಲ್ಲಿ ಜೋಡೆತ್ತುಗಳ ಪ್ರಚಾರ!

 ಸುಮಲತಾ ಗೆಲುವಿಗೆ ಟೊಂಕ ಕಟ್ಟಿ ನಿಂತ ದರ್ಶನ್, ಯಶ್! ಸುಮಲತಾ ಪರ ಮಂಡ್ಯದಲ್ಲಿ ಜೋಡೆತ್ತುಗಳ ಪ್ರಚಾರ!

4687
0
SHARE

ಬೇಸಿಗೆಯ ಬಿರು ಬಿಸಿಲಿಗೂ ಸವಾಲು ಹಾಕುತ್ತಿದೆ ಚುನಾವಣಾ ಕಾವು… ಅದರಲ್ಲೂ ಸಕ್ಕರೆ ನಾಡಿನಲ್ಲಿ ಪ್ರಚಾರದ ಭರಾಟೆಗೆ ತಾರಾ ಮೆರಗು ಸಿಕ್ಕಿ ರಂಗೇರಿದೆ.. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಗಾಂಧಿನಗರದ ಜೋಡೆತ್ತುಗಳಾದ ಐರವಾತ ದರ್ಶನ್ ಮತ್ತು ಯಶ್ ಅಖಾಡಕ್ಕೆ ಧುಮುಕಿದ್ದಾರೆ..

ಸೋಮವಾರ ಕೆಆರ್ಎಸ್ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ದರ್ಶನ್, ಇಂದು ಮಂಡ್ಯ ನಗರದಲ್ಲಿ ಸುಮಲತಾ ಪರ ಮತ ಯಾಚಿಸಿದ್ರು… ತೆರೆದ ವಾಹನದಲ್ಲಿ ನಗರದ ಪೇಟೆ ಬೀದಿ, ಕಾಮನ್ ಸರ್ಕಲ್, ಹೊಳಲು ಸರ್ಕಲ್, ಬೀಡಿ ಕಾಲೋನಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸುಮಲತಾ ಪರ ದರ್ಶನ್ ಪ್ರಚಾರ ನಡೆಸಿದ್ರು..

ಮತಯಾಚನೆ ವೇಳೆ ಮಾತನಾಡಿದ ದರ್ಶನ್, ಜೆಡಿಎಸ್ ನಾಯಕರ ಆರೋಪಗಳಿಗೆ ಮತದಾನದ ದಿನ ಉತ್ತರ ಕೊಡಿ ಎಂದು ಮನವಿ ಮಾಡಿದ್ರು.. ದರ್ಶನ್ ಗೆ ನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ರು…ಇನ್ನೂ ಸುಮಲತಾ ಪರ ನಟ ಯಶ್ ಅಖಾಡಕ್ಕಿಳಿದಿದ್ದಾರೆ.. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಯಶ್ ಪ್ರಚಾರ ನಡೆಸಿದ್ರು..

ಅಂಬರೀಶ್ ಮಂಡ್ಯದ ಮಗ, ಸುಮಲತಾ ಮಂಡ್ಯ ಸೊಸೆ, ಭಾರತದಲ್ಲಿ ಮಂಡ್ಯ ಎಂದು ಬಂದರೆ ಅಲ್ಲಿ ಅಂಬರೀಶ್ ಹೆಸರು ಬಂದೇ ಬರುತ್ತದೆ. ಮಂಡ್ಯ ಜನತೆಯ ಮೇಲೆ ಅವರು ತುಂಬಾ ಪ್ರೀತಿ ಇಟ್ಟುಕೊಂಡಿದ್ದರು.. ನಂಬರ್ 20 ಕಹಳೆ ಊದುತ್ತಿರುವ ರೈತನ ಗುರುತಿಗೆ ವೋಟ್ ಹಾಕಿ ಎಂದು ಕೈ ಮುಗಿದು ಮತದಾರರ ಬಳಿ ಯಶ್ ಮನವಿ ಮಾಡಿಕೊಂಡರು.ಮತ್ತೊಂದೆಡೆ ಸುಮಲತಾ ಮದ್ದೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ರು..

ಪ್ರಚಾರದ ವೇಳೆ, ಸುಮಲತಾ ಅವರಿಗೆ ಮತದಾರರು ಆತ್ಮೀಯ ಸ್ವಾಗತ ಕೋರಿದ್ರು… ಈ ವೇಳೆ ಮಾತನಾಡಿದ ಸುಮಲತಾ ಅಂಬಿ ಸಾವಿನಲ್ಲೂ ರಾಜಕಾರಣ ಮಾಡುತ್ತಿರೋ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.ಒಟ್ಟಾರೆ ಹೀರೋಗಳ ಎಂಟ್ರಿಯಿಂದ ಮಂಡ್ಯ ಅಖಾಡ ಎಲ್ಲರ ಗಮನ ಸೆಳೆಯುತ್ತಿದೆ.. ದೇವೇಗೌಡ್ರ ಕುಟುಂಬ ವರ್ಸಸ್ ಸುಮಲತಾ ಅಂಬರೀಷ್ ಜಿದ್ದಾಜಿದ್ದಿ ಯಾವುದೇ ಟಿಟ್ವೆಂಟಿ ಮ್ಯಾಚ್ ಗಿಂತ ಕಮ್ಮಿ ಇಲ್ಲ…

LEAVE A REPLY

Please enter your comment!
Please enter your name here