Home Crime 2 ವರ್ಷ ಆಕೆಯ ಮೈ ಮುಟ್ಟಿ ಅನುಭವಿಸಿದ್ದ ಥ್ರಿಲ್..! ಮೂರನೇ ವರ್ಷಕ್ಕೆ ಹಾಸಿಗೆಗೆ ಕರೆಸಿ ಮಾಡಿದ್ದ...

2 ವರ್ಷ ಆಕೆಯ ಮೈ ಮುಟ್ಟಿ ಅನುಭವಿಸಿದ್ದ ಥ್ರಿಲ್..! ಮೂರನೇ ವರ್ಷಕ್ಕೆ ಹಾಸಿಗೆಗೆ ಕರೆಸಿ ಮಾಡಿದ್ದ ಸೆಕ್ಸ್..! ಕಿಲ್ಲರ್ ಬ್ಯೂಟಿ..!

10248
0
SHARE

ಬೆಂಗಳೂರಿನ ಕುಖ್ಯಾತ ರೌಡಿ ಲಕ್ಷ್ಮಣ ಸತ್ತು ಅದಾಗ್ಲೇ ಮಣ್ಣಾಗಿ ಹೋದ. ಆದ್ರೆ ಆತನ ಸಾವಿಗಾಗಿ ಕಾದು ಕೂತಿದ್ದವರ ತಳಮಳ ಇನ್ನು ಕಡಿಮೆಯಾಗಿಲ್ಲ. ಅವನ ಸಾವಿನ ಹಿಂದಿನ ಕಥೆಗಳ ಸರಣಿಯು ಮುಗಿಯುತ್ತಿಲ್ಲ. ಸಿನಿಮಾಗಳಲ್ಲಿ ಪಾರ್ಟ್ 1 ಪಾರ್ಟ್ 2 ಅನ್ನೋ ಹಾಗೆ ಲಕ್ಷ್ಮಣ ಸಾವಿನ ಕಥೆಯೇ ಸರಣಿಯಾಗಿ ಬೆಳೆದುಕೊಂಡು ಹೋಗ್ತಿದೆ. ಒಬ್ಬ ರೌಡಿ ನೆಮ್ಮದಿಯಾಗಿ ಬದುಕಲಿ ಅಂತ ಯಾರು ಹಾರೈಸೋದಿಲ್ಲ ಅನ್ನೋದು ಇಲ್ಲಿ ಮತ್ತೆ ಪ್ರೂವ್ ಆಗಿದೆ.

ರಾಜಕೀಯವಾಗಿಯು ಆತ ಮದ್ದೂರಿನಲ್ಲಿ ಬೆಳಿಬೇಕು ಅಂತ ತೀರ್ಮಾನಿಸಿದ್ದ. ಹೀಗಾಗಿ ಅಲ್ಲಿ ಎಲೆಕ್ಷನ್ ಗೆ ನಿಂತು ಸೋತಿದ್ದ. ಒಂದು ಸಾರಿ ಎಲೆಕ್ಷನ್ ಗೆ ಅಂತ ರಾಜಕೀಯಕ್ಕೆ ಕಾಲಿಟ್ಟ ಮೇಲೆ ಆತನಿಗೆ ವೈರಿಗಳು ಹುಟ್ಟಿಕೊಳ್ಳೋದು ಸಹಜ. ಆತ ಅದ್ಯಾವಾಗ ಮದ್ದೂರಿನಲ್ಲಿ ಬಂದು ವೋಟು ಕೇಳ್ತೀನಿ ಅಂತ ಅಂದನೋ ಆಗ ಅಲ್ಲಿದ್ದ ಹಳೆ ಬೇರುಗಳೆಲ್ಲಾ ಶೇಕ್ ಆಗಿ ಹೋಗಿದ್ವು. ಯಾಕಂದ್ರೆ ಲಕ್ಷ್ಮಣ ರೌಡಿಸಂನಲ್ಲಿ, ಲ್ಯಾಂಡ್ ಲಿಟಿಗೇಷನ್ ನಲ್ಲಿ ಚೆನ್ನಾಗಿಯೇ ಕಾಸು ಮಾಡಿದ್ದ. ಅದನ್ನೆಲ್ಲಾ ತಂದು ಇಲ್ಲಿ ಸುರಿತಾನೆ ವೋಟ್ ಗಳನ್ನ ಪರ್ಚೇಸ್ ಮಾಡ್ತಾನೆ ಅನ್ನೋ ಭಯ ಅಲ್ಲಿನ ರಾಜಕೀಯ ಮುಖಂಡರಿಗೆ ಕಾಡಿತ್ತು. ಇವನು ಇಲ್ಲಿ ರಾಜಕೀಯಕ್ಕೆ ಬಂದ್ರೆ ನಮ್ಮ ಕಥೆ ಅಷ್ಟೇ ಅಂತ ಹಳೆ ಹುಲಿಗಳಿಗೆಲ್ಲ ಅನಿಸಿತ್ತು. ಇದೇ ಕಾರಣಕ್ಕೆ ಅವನು ಇಲ್ಲಿ ಇನ್ನೊಂದು ಸಾರಿ ಎಲೆಕ್ಷನ್, ರಾಜಕೀಯ ಅಂತ ಬರಬಾರದು ಅಂತ ತೀರ್ಮಾನಿಸಿದ್ರು.

ಲಕ್ಷ್ಮಣನ ಪೊಲಿಟಿಕಲ್ ಎಂಟ್ರಿ ಕೂಡಾ ಅವನ ಶತೃಗಳ ಸಂಖ್ಯೆಯನ್ನ ಹೆಚ್ಚಿಸಿತ್ತು. ಅಲ್ಲದೇ ಇದೇ ವರ್ಷಿಣಿ ತಾಯಿ ಪದ್ಮಾ ಅಲ್ಲಿನ ಲೋಕಲ್ ಲೀಡರ್ ಆಗಿದ್ಲು. ತಾಯಿಗೆ ಪೊಲಿಟಿಕಲ್ ಟಚ್ ಇದೆ ಅಂದ ಮೇಲೆ ಅಲ್ಲಿನ ರಾಜಕೀಯ ನಾಯಕರ ಮಕ್ಕಳನ್ನ ಬಲೆಗೆ ಹಾಕಿಕೊಳ್ಳೋದು ಈ ವರ್ಷಿಣಿಗೆ ಎಷ್ಟು ಹೊತ್ತು ಅಲ್ವಾ. ಹೀಗಾಗಿ ಅಲ್ಲಿನ ಎಂಎಲ್ ಎ ಒಬ್ಬರ ಮಗನ ಜೊತೆ ವರ್ಷಿಣಿ ಕ್ಲೋಸ್ ಆಗಿ ಮೂವ್ ಆಗಿದ್ಲು. ಆತನ ಜೊತೆ ಆಕೆ ಸ್ವಲ್ಪ ಜಾಸ್ತಿಯೇ ಅನ್ನುವಷ್ಟು ಫ್ರೆಂಡ್ ಶಿಪ್ ಹೊಂದಿದ್ಲು. ಯಾಕಂದ್ರೆ ಅವಳಿಗೆ ಯಾರನ್ನ ಎಲ್ಲಿ ಟಚ್ ಮಾಡಿದ್ರೆ, ಮತ್ತು ಯಾರ ಹತ್ತಿರ ಟಚ್ ಮಾಡಿಸಿಕೊಂಡ್ರೆ ಕೆಲಸ ಆಗುತ್ತೆ ಅನ್ನೋದು ಗೊತ್ತಿತ್ತು. ಇಲ್ಲಿ ಲಕ್ಷ್ಮಣ ಇನ್ನೊಂದು ಸಾರಿ ಎಲೆಕ್ಷನ್ ಅಂತ ವೈಟ್ ಶರ್ಟ್ ಹಾಕ್ಕೊಂಡು ಬರದೇ ಇರೋ ಹಾಗೆ ಮಾಡ್ತೀನಿ ನೀವು ನನಗೆ ಸಪೋರ್ಟ್ ಮಾಡಿ ಅಂತ ಆಕೆ ಎಂಎಲ್ ಎ ಮಗನ ಬಳಿ ಕೇಳಿದ್ಲು.

ಅವನು ಬೇರೆ ಎಳೆ ಹುಡುಗಿಯ ರುಚಿ ನೋಡಿದ್ದ. ಆಗಾಗ ಕಂಪನಿಗೆ ಇರಲಿ ಅನ್ನೋ ಕಾರಣಕ್ಕೆ ನೀನು ಹೇಳಿದ ಮೇಲೆ ಮುಗಿತು ನಿನಗೆ ಅದೇನು ಸಪೋರ್ಟ್ ಬೇಕು ಕೇಳು ನಾನು ಮಾಡಿಕೊಡ್ತೀನಿ ಅಂತ ಹೇಳಿದ್ದ. ಆಕೆ ತನ್ನ ಕಾರ್ಯಸಾಧನೆಗೆ ಪೊಲಿಟಿಕಲ್ ಪವರ್ ಅನ್ನ ಹ್ಯಾಗೆ ಯೂಸ್ ಮಾಡ್ಕೊಬೇಕು ಅನ್ನೋದನ್ನ ತಿಳ್ಕೊಂಡಿದ್ಲು. ಅದಕ್ಕೆ ಆತನಿಗೆ ಸಮಯ ಬಂದಾಗ ಹೇಳ್ತೀನಿ ಅವತ್ತು ನನಗೆ ಹೆಲ್ಪ್ ಮಾಡು ಅಂತ ಹೇಳಿದ್ಲು. ಸಿಸಿಬಿ ಪೊಲೀಸ್ರ ಮುಂದ ಇದೇ ಕಥೆಯನ್ನ ವರ್ಷಿಣಿ ಹೇಳಿದ್ದಾಳೆ. ಹೀಗಾಗಿ ಈ ಕೇಸ್ ನಲ್ಲಿ ವೈಟ್ ಕಾಲರ್ ನಿಂದಲು ಫಂಡಿಂಗ್ ಆಗಿರಬಹುದು ಅನ್ನೋ ಅನುಮಾನವಿದೆ. ಯಾವುದಕ್ಕೂ ಆಕೆ ಹೇಳಿರೋದು ಎಷ್ಟು ನಿಜ ಅನ್ನೋದನ್ನ ತಿಳ್ಕೊಂಡ ಮೇಲೆ ಅವಳ ಆಶಿಕಿಯನ್ನ ಸಿಸಿಬಿ ಇನ್ವಿಟೇಷನ್ ಕೊಟ್ಟು ಕರೆಸಿದ್ರೆ ಆಯ್ತು ಅಂತ ಪೊಲೀಸ್ರು ಸುಮ್ಮನಿದ್ದಾರೆ.

ಈ ಕೇಸ್ ನಲ್ಲಿ ರೂಪೇಶ್ ಕೇವಲ ಪ್ಲಾನರ್ ಅಷ್ಟೇ. ಆದ್ರೆ ಇಲ್ಲಿ ಲಕ್ಷ್ಮಣನನ್ನ ಎತ್ತಿದ ಬ್ಯಾಟ್ಸ್ ಮನ್ ಗಳಲ್ಲಿ ಫ್ರಂಟ್ ಲೈನ್ ನಲ್ಲಿರೋದು ಇದೇ ಹೇಮಂತ್ ಅಲಿಯಾಸ್ ಹೇಮಿ. ಹೇಮಿ ನಟೋರಿಯಸ್ ಕಿಲ್ಲರ್. ಸುಪಾರಿ ತಗೊಂಡು ಕೊಲೆ ಮಾಡ್ತಾನೆ. ದ್ವೇಷಕ್ಕೂ ಕೊಲೆ ಮಾಡ್ತಾನೆ. ಇವನು ಮಂಡ್ಯದ ಜಡೇಜ ರವಿ ಕೇಸ್ ನಲ್ಲೂ ಆರೋಪಿಯಾಗಿದ್ದ. ಚನ್ನಪಟ್ಟಣದ ಆಂಬಡೆ ಪ್ರಕಾಶ್ ಕೇಸ್ ನಲ್ಲೂ ಪ್ರಮುಖ ಆರೋಪಿಯಾಗಿದ್ದ. ಪ್ರಕಾಶ್ ಗೆ ಆಂಬಡೆ ಕೇಸ್ ನಲ್ಲಿ ಕೆಲವೇ ದಿನಗಳಲ್ಲಿ ಶಿಕ್ಷೆ ಪ್ರಕಟವಾಗ್ತಿತ್ತು. ಆ ಕೇಸ್ ನಲ್ಲಿ ಅವನು ಜೈಲಿಗೆ ಹೋಗಿ ಕೂತ್ರೆ ವಾಪಸ್ ಬರೋ ಸಾಧ್ಯತೆ ಕಡಿಮೆಯಿತ್ತು. ಇನ್ನು ಸುಮ್ಮನೆ ಹೋಗಿ ಜೈಲಲ್ಲಿ ಕೂರೋದಕ್ಕಿಂತ ತನಗಿರೋ ರಿವೇಂಜ್ ಅನ್ನ ತೀರಿಸಿಕೊಳ್ಳಬೇಕು ಅಂತ ಅಂದುಕೊಂಡಿದ್ದ. ಅದ್ರಲ್ಲೂ ತನ್ನ ಗುರುವನ್ನ ಕೊಂದಿದ್ದ ಲಕ್ಷ್ಮಣನನ್ನ ಕೊಂದು ಜೈಲು ಸೇರಬೇಕು ಅಂತ ಅಂದುಕೊಂಡಿದ್ದ.

ಅಲ್ಲದೆ ಈ ಕೇಸ್ ಮಾಡೋದಕ್ಕೂ ಮೊದಲು ಎಲ್ಲಾ ಆರೋಪಿಗಳು ಮುತ್ತತ್ತಿಗೆ ತೆರಳಿದ್ರು. ಅಲ್ಲಿ ಎಲ್ಲಾ ಸೇರಿ ಒಂದು ಭರ್ಜರಿ ಪಾರ್ಟಿ ಮಾಡಿದ್ರು. ಆ ಪಾರ್ಟಿಗೆ ವರ್ಷಿಣಿ ಫಾರಿನ್ ನಿಂದ ಸ್ಕಾಚ್ ಕಳುಹಿಸಿದ್ಲು. ಅವತ್ತು ಲಂಡನ್ ನಲ್ಲಿ ಕೂತ್ಕೊಂಡೆ ಆಕೆ ಇವರಿಗೆ ಚಿಯರ್ಸ್ ಅಂತ ಹೇಳಿದ್ಲು. ಅಲ್ಲದೆ ಬೆಳಗ್ಗೆ ಹೊಡೆಯೇ ಭೇಟೆಗೆ ಆಲ್ ದಿ ಬೆಸ್ಟ್ ಹೇಳಿದ್ಲು.ಇನ್ನು ಹೇಮಂತ್ ಜೈಲು ಸೇರಿ ಶಿಕ್ಷೆ ಅನುಭವಿಸೋದಕ್ಕೆ ಶುರುಮಾಡ್ತಾನೆ. ಆದ್ರೆ ಮಾರ್ಕೆಟ್ ನಲ್ಲಿ ಮಾತ್ರ ಅವನ ಹೆಸರಿಗೆ ಭರ್ಜರಿ ಬೇಡಿಕೆ ಶುರುವಾಗುತ್ತೆ. ಯಾಕಂದ್ರೆ ಅವನ ಹೆಸರು ಹೇಳಿದ್ರೆ ಹಫ್ತಾ ವಸೂಲಿ ಆಗುತ್ತೆ. ಯಾವ ಕಾನೂನಿನಿಂದಲು ಇತ್ಯರ್ಥವಾಗದ ಲ್ಯಾಂಡ್ ಲಿಟಿಗೇಷನ್ ಇವನ  ಹೆಸರಿನಿಂದ ಡೀಲ್ ಆಗುತ್ತೆ. ಯಾಕಂದ್ರೆ ಲಕ್ಷ್ಮಣನನ್ನ ಎತ್ತಿರೋ ಗಂಡು ಇವನು ಅನ್ನೋ ನೇಮ್ ಪ್ಲೇಟ್ ಸಾಕು ಭಯ ಹುಟ್ಟಿಸೋದಕ್ಕೆ.

ಹೀಗಾಗಿ ಹೇಮಿ ಕಾದು ಕಾದು ಲಕ್ಷ್ಮಣನನ್ನೇ ಹೊಡೆದುರುಳಿಸಿದ್ದ. ಆದ್ರೆ ಅಂಡರ್ ವರ್ಲ್ಡ್ ನ ಹುಡುಗರು ಮಾತನಾಡಿಕೊಳ್ತಿರೋದನ್ನ ನೋಡಿದ್ರೆ ಅದ್ಯಾಕೋ ಹೇಮಿಗೆ ಜೈಲಲ್ಲೇ ದೊಂಬಿ ಗಲಾಟೆ ಹೆಸರಲ್ಲಿ ಮುಹೂರ್ತ ಫಿಕ್ಸ್ ಮಾಡ್ತಾರಾ ಅನ್ನೋ ಅನುಮಾನವಿದೆ. ರೂಪಿ ಮತ್ತು ವರ್ಷಿಣಿ ಪ್ಲಾನ್ ಮಾಡಿ ಮರ್ಡರ್ ಮಾಡಿಸಿದ್ರು ಇಲ್ಲಿ ಮೇನ್ ಟಾರ್ಗೆಟ್ ಹೇಮಿ ಮತ್ತು ಕ್ಯಾಟ್ ರಾಜು.ಲಕ್ಷ್ಮಣನನ್ನ ಕೊಲೆ ಮಾಡೋದಕ್ಕೆ ಯಾರು ಎಷ್ಟೇ ವರ್ಷ ಕಾದು ಕೂತಿದ್ರು ಅದು ಸಾಧ್ಯವಾಗಿರಲಿಲ್ಲ. ಆದ್ರೆ ವರ್ಷಿಣಿ ಮಾಡಿದ ಪ್ಲಾನ್ ಗೆ  ಆ ಕೆಲಸ ಮುಗಿದು ಹೋಗಿತ್ತು. ಈಗ ಸದ್ಯಕ್ಕೆ ಏನೇ ಆತಂಕಗಳಿದ್ರು ರೂಪೇಶ್ ಮತ್ತು ವರ್ಷಿಣಿ ಮದುವೆಯಾಗಿ ಈ ಕೊಲೆ ಕೇಸ್ ನಲ್ಲಿ ಶಿಕ್ಷೆ ಪ್ರಕಟ ಆಗೋವರೆಗೂ ಸಂಸಾರ ನಡೆಸಬಹುದು.

ತಾವು ಅಂದುಕೊಂಡಂತೆ ಕೆಲಸ ಮುಗಿಸಿರೋದ್ರಿಂದ ಅವರ ಲೈನ್ ಕ್ಲಿಯರ್ ಆಗಿದೆ. ಇನ್ನು ಫಿಲ್ಡ್ ನಲ್ಲಿ ಇರೋರು ಯಾರು ಕೂಡಾ ಇವರಿಬ್ಬರ ಮೇಲೆ ದ್ವೇಷ ಹೊಂದಿಲ್ಲ. ಯಾರು ಇವರನ್ನ ಟಾರ್ಗೆಟ್ ಮಾಡೋದಿಲ್ಲ. ಹೀಗಾಗಿ ಇವರಿಬ್ಬರು ಒಂದಿಷ್ಟು ದಿನ ನೆಮ್ಮದಿಯಾಗಿಯೇ ಬದುಕಬಹುದು.ಲಕ್ಷ್ಮಣ ಸತ್ತ ಮೇಲೆ ಫಿಲ್ಡ್ ನಲ್ಲಿ ನಮ್ಮದು ಒಂದು ಹವಾ ಕ್ರಿಯೆಟ್ ಆಗುತ್ತೆ ಅಂತ ಹೇಮಿ ಮತ್ತು ಕ್ಯಾಟ್ ಲೆಕ್ಕಾಚಾರ ಹಾಕ್ಕೊಂಡು ಕೂತಿದ್ರು. ಆದ್ರೆ ಲಕ್ಷ್ಮಣ ಒಬ್ಬನೇ ಇದ್ದಿದ್ರೆ ಅದು ಸಾಧ್ಯವಾಗ್ತಿತ್ತು ಅನ್ಸುತ್ತೆ. ಆದ್ರೆ ಈಗ ಹಾಗೆ ಆಗೋದಿಲ್ಲ ಯಾಕಂದ್ರೆ ಆತನ ಅಣ್ಣ ರಾಮ ಇದ್ದಾನೆ. ಜೊತೆಗೆ ಬಂಟ ಹನುಮಂತನು ಇದ್ದಾನೆ. ಹೀಗಾಗಿ ಇವರು ಅಂದುಕೊಂಡಷ್ಟು ಸುಲಭಕ್ಕೆ ಫಿಲ್ಡ್ ನಲ್ಲಿ ಜಾಗ ಸಿಕ್ಕೋದಿಲ್ಲ. ಅಲ್ಲದೆ ಲಕ್ಷ್ಮಣನ ಹುಡುಗರು ಈಗಾಗ್ಲೇ ಇವರಿಬ್ಬನ್ನ ಮುಗಿಸಿಬಿಡಬೇಕು ಅಂತ ಪ್ಲಾನ್ ಮಾಡ್ಕೊಂಡಿದ್ದಾರೆ.

ಬಾಸ್ ನ ಹೊಡೆದವರನ್ನ ನಾವು ಬಿಡೋದಿಲ್ಲ ಅಂತ ಈಗಾಗ್ಲೇ ಶಪಥ ಮಾಡಿದ್ದಾರೆ. ಅಲ್ಲದೆ ಇವರಿಬ್ಬರು ಪೊಲೀಸ್ ಕಸ್ಟಡಿಯಿಂದ ಜೈಲಿಗೆ ಹೋಗ್ತಿದ್ದ ಹಾಗೆ ದೊಂಬಿ ಗಲಾಟೆ ಮಾಡಿ ಅಲ್ಲಿಯೇ ಹೊಗೆ ಹಾಕಿಸೋದಕ್ಕೂ ಪ್ಲಾನ್ ಮಾಡಿದ್ದಾರೆ.ಹೇಮಿ ಮತ್ತು ಕ್ಯಾಟ್ ಗೆ ಜೈಲು ಹೊಸದಲ್ಲ, ಅಲ್ಲಿ ನಡೆಯೋ ಗಲಾಟೆಗಳು ಹೊಸದಲ್ಲ. ಅಲ್ಲದೆ ಜೈಲಲ್ಲಿ ಯಾರನ್ನ ಹ್ಯಾಗೆ ಮೆಂಟೇನ್ ಮಾಡಬೇಕು ಅನ್ನೋದನ್ನ ಚೆನ್ನಾಗಿಯೇ ಕಲಿತ್ತಿದ್ದಾರೆ. ಹೀಗಾಗಿ ಅದೇನು ಆಗುತ್ತೋ ಆಗಲಿ ಅನ್ನೋ ಮೊಂಡ ಧೈರ್ಯದಲ್ಲಿದ್ದಾರೆ, ಲಕ್ಷ್ಮಣ ಸತ್ತಿರೋದ್ರಿಂದ ತಕ್ಷಣಕ್ಕೆ ಎರಡು ಸಮಸ್ಯೆ ಅಂತು ಅವರು ಅಂದುಕೊಂಡ ಹಾಗ ಕ್ಲಿಯರ್ ಆಗಿದೆ. ಮದ್ದೂರಿನಲ್ಲಿ ಲೀಡರ್ ಆಗೋದಕ್ಕೆ ಹೊರಟವನು ಇನ್ನು ಅಲ್ಲಿಗೆ ಕಾಲಿಡೋದಿಲ್ಲ. ಇನ್ನೊಂದು ಕಡೆ ಲವರ್ಸ್ ಮದುವೆ ಆಗೋದು. ಈ ಎರಡು ರೀಸನ್ ಜೊತೆಗೆ ಲಕ್ಷ್ಮಣನಿಂದ ಕೊಲೆಯಾದ ಎಲ್ಲಾ ರೌಡಿಗಳ ಆತ್ಮಕ್ಕೂ ಈಗ ಶಾಂತಿ ಸಿಕ್ಕಿದೆ.ದುಷ್ಮನಿ ಇದ್ದೋ ಇಲ್ಲದೆಯೋ ಅವರೆಲ್ಲಾ ಲಕ್ಷ್ಮಣನ ಮಚ್ಚಿನೇಟಿಗೆ ಮರ್ಡರ್ ಆಗಿ ಹೋಗಿದ್ರು. ಈಗ ಲಕ್ಷ್ಮಣನನ್ನ ಸಾವು ಅವರ ಆತ್ಮಕ್ಕೆಲ್ಲಾ ಶಾಂತಿ ದೊರಕಿಸಿರಬಹುದು.

ಇನ್ನೊಂದು ಕಡೆ ಸಿಸಿಬಿ ಪೊಲೀಸ್ರು ಅರೆಸ್ಟ್ ಆಗಿರೋ ಆರೋಪಿಗಳನ್ನ ಹಾಕ್ಕೊಂಡು ಚೆನ್ನಾಗಿ ಖಾರ ರುಬ್ಬುತ್ತಿದ್ದಾರೆ. ಯಾಕಂದ್ರೆ ಈ ಮರ್ಡರ್ ಕೇಸ್ ನಲ್ಲಿ ಅವ್ರು ಅಂದುಕೊಂಡ ಹಾಗೆ ದ್ವೇಷ ಮತ್ತು ಪ್ರೀತಿ ಎರಡೇ ವಿಷಯಗಳು ಇಲ್ಲ. ಇಲ್ಲಿ ಅವನೊಬ್ಬ ಸಾವಿಗಾಗಿ ಯಾರ್ಯಾರೋ ಕೈ ಜೋಡಿಸಿದ್ದಾರೆ. ಅಲ್ಲದೆ ಲಕ್ಷ್ಮಣನ ಜೊತೆಗಿದ್ದವರೆ ಆತನ ಕೊಲೆಗೆ ಪ್ರೇರೇಪಿಸಿದ್ದಾರೆ ಅನ್ನೋ ಬಗ್ಗೆ ಖಾಕಿಗೆ ಅನುಮಾನವಿದೆ ಅದಕ್ಕಾಗಿ ಪೊಲೀಸ್ರು ಅವರನ್ನ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.ಈ ಕೇಸ್ ನಲ್ಲಿ ನಡೆಯಬೇಕಾಗಿದ್ದೇ ಬೇರೆ ಆದ್ರೆ ನಡೆದಿರೋದೆ ಬೇರೆ. ಅವತ್ತು ಕೊಲೆಯಾದ ದಿನವೇ ಹೇಮಿ ಮತ್ತು ರೂಪೇಶ್ ಸೆರೆಂಡರ್ ಆಗಿದ್ರೆ ವರ್ಷಿಣಿ ಮತ್ತು ಉಳಿದವರ ಹೆಸರು ಥಳಕು ಹಾಕಿಕೊಳ್ತಿರಲಿಲ್ಲ. ಅವತ್ತು ಹೇಮಿ ಮತ್ತು ರೂಪಿ ಅದ್ಯಾಕೋ ಮರ್ಡರ್ ಆದ ಮೇಲೆ ತಮ್ಮ ರೂಟ್ ಚೇಂಜ್ ಮಾಡಿದ್ರು. ಅವತ್ತು ಅವ್ರು ಅಂದುಕೊಂಡು ಹಾಗೆ ಸೆರೆಂಡರ್ ಆಗಿದ್ರೆ, ವರ್ಷಿಣಿ ಲಕ್ಷ್ಮಣ ಬಾಡಿ ಮುಂದೆ ನಾಲ್ಕು ಕಣ್ಣೀರು ಹರಿಸಿ ವಾಟ್ಸಾಪ್ ಸ್ಟೇಟಸ್ ನಲ್ಲಿ ಮಿಸ್ ಯು ಅಂಕಲ್ ಅಂತ ಹಾಕೊಂಡು ಫುಲ್ ಫೀಲ್ ನಲ್ಲಿ ಇರೋ ರೀತಿ ಆಕ್ಟ್ ಮಾಡ್ಕೊಂಡು ಪರಾರಿಯಾಗ್ತಿದ್ಲು.

ಅವ್ರಿಗೆ ಮರ್ಡರ್ ಮಾಡೋದು ಹ್ಯಾಗೆ ಅನ್ನೋ ಪ್ಲಾನ್ ಇತ್ತು. ಆದ್ರೆ ಅದಾದ ಮೇಲೆ ಏನು ಮಾಡಬೇಕು ಅನ್ನೋದು ಗೊತ್ತಾಗಲಿಲ್ಲ. ಹೀಗಾಗಿ ಅವರಿಬ್ಬರು ಮುಟ್ಟಾಳತನದಿಂದ ಎಲ್ಲರೂ ತಗಲಾಕ್ಕಿಕೊಳ್ಳೋ ಹಾಗೆ ಆಯ್ತು.ಮಗಳು ಮಾಡಿದ್ದಕ್ಕೆಲ್ಲಾ ಜೈ ಜೈ ಅಂತಿದ್ದ ಅಪ್ಪ ಅಮ್ಮ ಕೂಡಾ ಅವತ್ತು ಇನ್ನೆಲ್ಲೋ ಬಡ್ಕೊಂಡು ನಮ್ಮ ಮಗಳು ಅಮಾಯಕಿ ಅಂತ ಕಣ್ಣೀರು ಹಾಕಿದ್ರು. ಯಾಕಂದ್ರೆ ಮಾಡಿದ ತಪ್ಪು ಜಗತ್ತಿಗೆ ಗೊತ್ತಾದ ಮೇಲೆ ಕಣ್ಣೀರು ಹಾಕಿ ಕನಿಕರ ಗಿಟ್ಟಿಸಿಕೊಳ್ಳೋದು ಮಾತ್ರವೇ ಉಳಿದಿತ್ತು. ಈ ಕೇಸ್ ನಲ್ಲಿ ಪೊಲೀಸ್ರಿಗೆ ಮತ್ತು ಹೊರ ಜಗತ್ತಿಗೆ ಗೊತ್ತಿಲ್ಲದ ವಿಷಯ  ತುಂಬಾನೇ ಇದೆ.

ಈ ಪ್ಲಾನ್ ಅನ್ನ ಯಾರು ಪುಡಿ ರೌಡಿಗಳಾಗ್ಲಿ ಅಥವಾ ಹೆಸರು ಮಾಡೋ ಉದ್ದೇಶಕ್ಕಾಗ್ಲಿ ಮಾಡಿದ್ದ ಕೆಲಸದ ರೀತಿ ಕಾಣಿಸ್ತಿಲ್ಲ. ಇಲ್ಲಿ ಬೇರೆಯದ್ದೇ ಕಾರಣವಿದೆ. ಅದರ ಹಿಂದೆ ಇದೇ ಫಿಲ್ಡ್ ನ ದೊಡ್ಡವರೆಲ್ಲಾ ಇದ್ದಾರೆ. ವೈಟ್ ಕಾಲರ್ ಮಂದಿಯು ಇದ್ದಾರೆ. ರೌಡಿಗಳು ಮತ್ತು ರಾಜಕೀಯ ನೇತಾರರು ಸೇರಿ ಮಾಡಿದ ಪ್ರೀ ಪ್ಲಾನ್ ಮರ್ಡರ್ ಇದು ಅನ್ನೋದ್ರಲ್ಲಿ ಡೌಟೇ ಇಲ್ಲ.ಪೊಲಿಟಿಕಲ್ ಮತ್ತು ರೌಡಿಸಂ ಎರಡು ಫಿಲ್ಡ್ ಕೂಡಾ ಇಪ್ಪತ್ತೊಂದು ವರ್ಷದ ಹುಡುಗಿಯ ಆಣತಿಯಂತೆ ಕೆಲಸ ಮುಗಿಸಿತ್ತು. ಪೊಲೀಸ್ರು ಇಲ್ಲಿವರೆಗೂ ಮಾಡಿರೋದು ಕೇವಲ ಪ್ರೈಮರಿ ಇನ್ವೆಸ್ಟಿಗೇಷನ್ ಅಷ್ಟೆ. ಇನ್ನು ಅಸಲಿ ಗಾಬರಿ ಹುಟ್ಟಿಸೋ ವಿಷಯಗಳು ತನಿಖೆ ಪೂರ್ಣಗೊಂಡ ನಂತರ ಗೊತ್ತಾಗುತ್ತೆ. ಅಲ್ಲದೆ ಈ ಕೇಸ್ ನಲ್ಲಿ ಇನ್ನು ಯಾರ್ಯಾರೋ ಥಳಕು ಹಾಕ್ಕೊಂಡು ಮರ್ಯಾದೆಯನ್ನ ಕೂಡಾ ಕಳ್ಕೊತ್ತಾರೆ.

LEAVE A REPLY

Please enter your comment!
Please enter your name here