ದೇಶದಲ್ಲಿ ಒಂದೇ ದಿನ 5,921 ಸೋಂಕಿತರು ಪತ್ತೆ..! ಕೊರೊನಾಗೆ 289 ಮಂದಿ ಬಲಿ

ಜಿಲ್ಲೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 5,921 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 289 ಮಂದಿ ಸೋಂ ಕಿತರು ಮೃತಪಟ್ಟಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಟ್ಟಾರೆ ಕೋವಿಡ್‌ ಪ್ರಕರಣಗಳ ಸಂಖ್ಯೆ 4,29,57 ,477ಕ್ಕೆ ತಲುಪಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 63,878 ಇದೆ. ವೈರಸ್‌ ತಗುವಿ ಮೃತಪಟ್ಟವರ ಸಂಖ್ಯೆ 5,14,878 ಕ್ಕೆ ಏರಿಕೆಯಾಗಿದೆ. ಸತತ 27 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ.

ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದೆ. ಇದರಿಂದ ವೈರಸ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 4,23,78,721ಕ್ಕೆ ಏರಿದೆ. ಆದರೆ, ಸಾವಿನ ಪ್ರಮಾಣವು ಶೇ.1.20 ರಷ್ಟಿದೆ ಎಂದು ಅಂಕಿ- ಅಂಶಗಳು ತೋರಿಸಿವೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿ ಇದುವರೆಗೆ ದೇಶದಲ್ಲಿ ನಿರ್ವಹಿಸಲಾದ ಡೋಸ್‌ಗಳ ಸಂಚಿತ ಸಂಖ್ಯೆ 178.55 ಕೋಟಿ ಮೀರಿದೆ.ಸೋಂಕಿನ ಸಂಖ್ಯೆ 2020ರ ಆಗಸ್ಟ್ 7ಕ್ಕೆ 20 ಲಕ್ಷ ಗಡಿ ದಾಟಿತ್ತು. ಆದರೆ, ರೀತಿ ಆಗಸ್ಟ್ 23ಕ್ಕೆ 30 ಲಕ್ಷ, ಸೆಪ್ಟೆಂಬರ್ 5ಕ್ಕೆ 40 ಲಕ್ಷ ಹಾಗೂ ಸೆಪ್ಟೆಂಬರ್ 16ಕ್ಕೆ 50 ಲಕ್ಷ ಪ್ರಕರಣಗಳು ದಾಖಲಾಗಿದ್ದವು.

Leave a Reply

Your email address will not be published.