Home KARNATAKA 70 ವರ್ಷಗಳ ಕಾಂಗರೂಗಳ ಪ್ರಾಬಲ್ಯಕ್ಕೆ ಕೊಹ್ಲಿ ಪಡೆ ಬ್ರೇಕ್..! ಆಸೀಸ್ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಟೆಸ್ಟ್...

70 ವರ್ಷಗಳ ಕಾಂಗರೂಗಳ ಪ್ರಾಬಲ್ಯಕ್ಕೆ ಕೊಹ್ಲಿ ಪಡೆ ಬ್ರೇಕ್..! ಆಸೀಸ್ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಸರಣಿ ಜಯ…! ಟೆಸ್ಟ್ ಸರಣಿಯನ್ನ 2-1ರಲ್ಲಿ ಗೆದ್ದು ದಾಖಲೆ ಬರೆದ ಟೀಂ ಇಂಡಿಯಾ..!

6627
0
SHARE

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಮಳೆಯ ಕಾರಣದಿಂದ ಸಿಡ್ನಿ ಟೆಸ್ಟ್ ನೀರಸ ಡ್ರಾ ಆಗುತ್ತಿದಂತೆ ಕೊಹ್ಲಿಪಡೆ ಸ್ಮರಣೀಯ ಟೆಸ್ಟ್ ಪಂದ್ಯವನ್ನ 2-1ರಲ್ಲಿ ಗೆದ್ದು ದಾಖಲೆ ಬರೆಯಿತು. ಇದರೊಂದಿಗೆ 71 ವರ್ಷಗಳ ಕಾಲ ಕನಸಾಗಿ ಉಳಿದಿದ್ದ ಪ್ರತಿಷ್ಠಿತ ಸಿರೀಸ್ ಗೆದ್ದು ಸಂಭ್ರಮಾಚರಣೆ ಮಾಡಿಕೊಂಡಿತು.

ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಗೆಲ್ಲುವ ಏಳು ದಶಕಗಳ ಕನಸನ್ನು ಟೀಂ ಇಂಡಿಯಾ ನನಸು ಮಾಡಿದೆ…ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನ 2-1ರ ಅಂತರದಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ದಾಖಲೆ ಬರೆದಿದೆ. ಇದರೊಂದಿಗೆ 71 ವರ್ಷಗಳ ಮಹದಾಸೆಯನ್ನ ಕೊನೆಗೂ ಈಡೇರಿಸಿಕೊಳ್ಳುವಲ್ಲಿ ಭಾರತೀಯರು ಯಶಸ್ವಿಯಾಗಿದ್ದಾರೆ.

ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯ ಮಳೆಗೆ ಆಹುತಿಯಾಗಿ ನೀರಸ ಡ್ರಾನಲ್ಲಿ ಅಂತ್ಯವಾಯ್ತು. ಹೀಗಾಗಿ ಆಡಿಲೇಡ್ ಹಾಗೂ ಮೆಲ್ಬೋರ್ನ್ ಟೆಸ್ಟ್ ಗೆದ್ದಿದ್ದ ಟೀಂ ಇಂಡಿಯಾ ಪ್ರತಿಷ್ಠಿತ ಸರಣಿಯನ್ನ ಮುಡಿಗೇರಿಸಿಕೊಂಡಿತು. ಈ ಮೂಲಕ ತವರಿನಲ್ಲಿ 31 ವರ್ಷಗಳಿಂದ ಪ್ರಾಬಲ್ಯ ಮೆರೆದಿದ್ದ ಕಾಂಗರೂಪಡೆಯ ಆರ್ಭಟಕ್ಕೆ ಬ್ರೇಕ್ ಹಾಕಿತು.ಆಸೀಸ್ ವಿರುದ್ಧದ ಸರಣಿ ಗೆಲುವು ಕ್ಯಾಪ್ಟನ್ ಕೊಹ್ಲಿಯ ವೃತ್ತಿ ಜೀವನದ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯ್ತು. ಭಾರತದ ಘಟಾನುಘಟಿ ನಾಯಕರಾದ ಕಪೀಲ್ ದೇವ್, ಸೌರವ್ ಗಂಗೂಲಿ, ಎಂ.ಎಸ್.ಧೋನಿಯನ್ನ ಹಿಂದಿಕ್ಕಿ ಸ್ಮರಣೀಯ ಟೆಸ್ಟ್ ಗೆಲ್ಲಿಸಿಕೊಟ್ಟ ಏಕೈಕ ನಾಯಕ ಅನ್ನೋ ಕೀರ್ತಿಗೆ ವಿರಾಟ್ ಪಾತ್ರರಾದ್ರು.

ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ಜಯ ಶ್ರೇಯಸ್ಸು ಇಡೀ ತಂಡದ ಎಲ್ಲ ಸದಸ್ಯರಿಗೂ ಸಲ್ಲುತ್ತದೆ ಎಂದರು. ನನ್ನ ಪ್ರಕಾರ ವಿಶ್ವಕಪ್ ಗೆಲುವಿಗಿಂತಲೂ ಈ ಟೆಸ್ಟ್ ಸರಣಿ ಜಯದ ಖುಷಿ ದೊಡ್ಡದು . ನನ್ನ ಕ್ರಿಕೆಟ್ ಜೀವನದಲ್ಲೇ ಇದು ಅತ್ಯಂತ ಗೌರವದ ಕ್ಷಣವಾಗಿದೆ ಎಂದು ತಮ್ಮ ಅನುಭವ ಹಂಚಿಕೊಡರು…ಇನ್ನು ಈ ಗೆಲುವಿಗೆ ಟೀಂ ಇಂಡಿಯಾದ ಸಂಘಟಿತ ಪ್ರದರ್ಶನವೇ ಕಾರಣ. ತಂಡದ ಪ್ರತಿಯೊಬ್ಬ ಆಟಗಾರರು ಕೂಡ ಜವಾಬ್ದಾರಿಯನ್ನ ಅರಿತು ಅತ್ಯದ್ಭುತ ಪ್ರದರ್ಶನವನ್ನ ನೀಡಿದ್ರು.

ಚೇತೇಶ್ವರ್ ಪೂಜಾರ ಸರಣಿಯಲ್ಲಿ ಒಟ್ಟು 521 ರನ್ ಗಳಿಸಿ ಸರಣಿ ಶ್ರೇಷ್ಠರಾದ್ರೆ, ರಿಶಬ್ ಪಂತ್ ಒಟ್ಟು 20 ಕ್ಯಾಚ್ ಹಿಡಿದು ದಾಖಲೆ ಬರೆದ್ರು.. ಜಸ್ಪ್ರಿತ್ ಬೂಮ್ರಾ 21 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ರು.ಹಲವು ವಿಶೇಷತೆಗಳಿಂದ ಕೂಡಿದ್ದ ಟೆಸ್ಟ್ ಸರಣಿಯಲ್ಲಿ ಭಾರತೀಯರ ಪಾರುಪತ್ಯವೇ ಹೆಚ್ಚಾಗಿತ್ತು. ಸಿಕ್ಕ ಅವಕಾಶವನ್ನ ಮಿಸ್ ಮಾಡಿಕೊಳ್ಳದ ಕೊಹ್ಲಿ ಬಾಯ್ಸ್, ಸರಣಿ ಗೆದ್ದು ಆಸೀಸ್ ನೆಲದಲ್ಲೂ ಭಾರತದ ತಿರಂಗ ಧ್ವಜ ರಾರಾಜಿಸುವಂತೆ ಮಾಡಿದ್ರು.

LEAVE A REPLY

Please enter your comment!
Please enter your name here