Home Home ಕಾಡಾನೆ ನಿಗೂಢ ಸಾವು : ಅರಣ್ಯ ಇಲಾಖೆ ಅಧಿಕಾರಿಗಳಿಂದ ತನಿಖೆ

ಕಾಡಾನೆ ನಿಗೂಢ ಸಾವು : ಅರಣ್ಯ ಇಲಾಖೆ ಅಧಿಕಾರಿಗಳಿಂದ ತನಿಖೆ

A mysterious death in the forest | ಕಾಡಾನೆ ನಿಗೂಢ ಸಾವು

261
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ: ಕಾಡಾನೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೂರ ವಲಯದ ಒಂಟಮಾಲಪುರದ ಬಳಿ ನೆಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿವಲಯದ ಹನೂರು ಬಫರ್ ವಲಯ ವ್ಯಾಪ್ತಿಗೆ ಸೇರಿದ ಒಂಟಮಾಲಪುರ ಕೆರೆಯ ಬಳಿ ಒಂಟಿ ಸಲಗ ಸಾವನಪ್ಪಿರುವ ಘಟನೆ ಕಂಡು ಬಂದಿದ್ದು .

ಸ್ಥಳೀಯ ಕೆಲ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ವಲಯ ಅರಣ್ಯಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು .ಅಲ್ಲದೆ ಪಶು ವೈದ್ಯಾಧಿಕಾರಿ ಸಿದ್ದರಾಜು ಆಗಮಿಸಿ ಮರಣೊತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಡಾನೆಯು ಯಾವಾಗ ಸತ್ತಿದೆ ಯಾವ ಕಾರಣದಿಂದ ಸತ್ತಿದೆ ಎಂಬ ನಿಖರವಾದ ಮಾಹಿತಿ ಇನ್ನೂ ಸಹ ಲಭಿಸಿಲ್ಲ. ಕಾಡಾನೆ ಸಾವಿನ ಬಗ್ಗೆ ಹಲವಾರು ಅನುಮಾನಗಳು ಸೃಷ್ಟಿಯಾಗುತ್ತಿದ್ದು, ಕಾಡಾನೆ ಸಹಜವಾಗಿ ಮೃತಪಟ್ಟಿದೆಯೇ ಅಥವಾ ಬೇಟೆಗಾರರು ಹತ್ಯೆ ಮಾಡಿದ್ದಾರೆಯೇ ಎನ್ನುವ ಪ್ರಶ್ನೆಗಳು ಮೂಡಿದೆ.

ಲಾಕ್ ಡೌನ್ ಸಮಯದಲ್ಲಿ ಕಾಡು ಪ್ರಾಣಿಗಳ ಬೇಟೆಗಾರರು ಅಕ್ರಮವಾಗಿ ಅರಣ್ಯದೊಳಗೆ ಪ್ರವೇಶ ಮಾಡಿ ಕಾಡಾನೆ ಹತ್ಯೆ ಮಾಡಿರಬಹುದೆಂಬ ಶಂಕೆಯೂ ಮೂಡುತ್ತಿದೆ.

VIAA mysterious death in the forest | ಕಾಡಾನೆ ನಿಗೂಢ ಸಾವು
SOURCEA mysterious death in the forest | ಕಾಡಾನೆ ನಿಗೂಢ ಸಾವು
Previous articleಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರೇ ಹೆಚ್ಚು ಮಂದಿ ಕೋವಿಡ್ ಸೋಂಕಿನಿಂದ ಸಾವು : ಸುರೇಶ್ ಕುಮಾರ್
Next articleಉದ್ಯಮಿಗಳನ್ನು ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್; ಈ ಕುರಿತು ಚಿಕ್ಕಬಳ್ಳಾಪುರ S.P ಮಿಥುನ್ ಕುಮಾರ್ ಹೇಳಿದ್ದೇನು?

LEAVE A REPLY

Please enter your comment!
Please enter your name here