ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್..! ಬೆಂಗಳೂರು ಸೇರಿ 78 ಕಡೆ ACB ರೇಡ್..!

ಬೆಂಗಳೂರು

ಬೆಂಗಳೂರು: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಶಾಕ್​ ನೀಡಿದ್ದು, ರಾಜ್ಯಾದ್ಯಂತ 78 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದ 18 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಏಕಕಾಲಕ್ಕೆ ಇನ್ನೂರಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಬೆಂಗಳೂರಿನ 3 ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿದಂತೆ 14 ಕಡೆಗಳಲ್ಲಿ ಎಸಿಬಿ ಅಧಿಕಾ ರಿಗಳು ದಾಳಿ ನಡೆಸಿದ್ದಾರೆ.

ಬಿ.ಕೆ ಶಿವಕುಮಾರ್ ಹೆಚ್ಚುವರಿ ನಿರ್ದೇಶಕ, ಕೈಗಾರಿಕೆ & ವಾಣಿಹಜ್ಯ ಇಲಾಖೆ, ಖನಿಜ ಭವನ, ಸಿ.ಜೆ ಜ್ಞಾನೇಂದ್ರ ಕುಮಾರ್, ಹೆಚ್ಚುವರಿ ಆಯುಕ್ತ ರಸ್ತೆ ಸುರಕ್ಷತೆ, ಸಾರಿಗೆ ಇಲಾಖೆ, ಬಿಡಿಎ ಉಪ ನಗರ ಯೋಜನೆಯ ನಿರ್ದೇಶಕರಾದ ವಿ.ರಾಕೇಶ್ ಕುಮಾರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published.