Home Home ಬೇಷರತ್ ಶರಣಾಗತಿಗೆ ತಾಲೀಬಾನ್ ತಾಕೀತು, ತಜಕಿಸ್ತಾನಕ್ಕೆ ಹಾರಿದ ಅಫಘಾನಿಸ್ಥಾನ ಅಧ್ಯಕ್ಷ ಅಶ್ರಫ್

ಬೇಷರತ್ ಶರಣಾಗತಿಗೆ ತಾಲೀಬಾನ್ ತಾಕೀತು, ತಜಕಿಸ್ತಾನಕ್ಕೆ ಹಾರಿದ ಅಫಘಾನಿಸ್ಥಾನ ಅಧ್ಯಕ್ಷ ಅಶ್ರಫ್

Afghan President Ashraf flew to Tajikistan | ತಜಕಿಸ್ತಾನಕ್ಕೆ ಹಾರಿದ ಅಫಘಾನಿಸ್ಥಾನ ಅಧ್ಯಕ್ಷ ಅಶ್ರಫ್

247
0
SHARE

ಬೇಷರತ್ ಶರಣಾಗತಿಗೆ ಹಿಂದೇಟು ಹಾಕಿದ ಅಧ್ಯಕ್ಷ ಅಶ್ರಫ್ ಘನಿ ತಮ್ಮ ರಾಷ್ಟ್ರೀಯ ಭದ್ರತಾ ಸಲಹಗಾರ ಹಮ್ದುಲ್ಲಾ ಮೊಹಿಬ್ ಹಾಗೂ ಕೆಲ ಆಪ್ತರನ್ನು ಕರೆದುಕೊಂಡು ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ಈ ಮೂಲಕ ಆಫ್ಘಾನ್ ಸರ್ಕಾರ ಹಾಗೂ ಆಡಳಿತ ಪತನಗೊಂಡಿದೆ. ಇನ್ನು ಸಂಪೂರ್ಣ ತಾಲಿಬಾನ್ ಆಡಳಿತ.

ಅಶ್ರಫ್ ತಜಕಿಸ್ತಾನಕ್ಕೆ ಪರಾರಿಯಾಗಿರುವ ಕಾರಣ ಈಗಾಗಲೇ ಮದ್ಯಂತರ ಅಧ್ಯಕ್ಷರನ್ನಾಗಿ ಅಹಮ್ಮದ್ ಜಲಾಲಿಗೆ ಪಟ್ಟ ಕಟ್ಟಲಾಗಿದೆ. ಕಾಬೂಲ್ ಪ್ರಮುಖ ಆಡಳಿತ ಕೇಂದ್ರಗಳು ತಾಲಿಬಾನ್ ಉಗ್ರರ ಕೈಯಲ್ಲಿದೆ. ಮಿಲಿಟರಿಯನ್ನು ಕಾಬೂಲ್‌ನಿಂದ ಹೊರಕ್ಕೆ ಕಳುಹಿಸಲಾಗಿದೆ. ಇದೀಗ ಎಲ್ಲವೂ ತಾಲಿಬಾನ್ ತೆಕ್ಕೆಯಲ್ಲಿದೆ.

ಅಫ್ಘಾನಿಸ್ತಾನದ ಅಧಿಕಾರ ಬಿಟ್ಟುಕೊಟ್ಟ ಘನಿ, ಅಹ್ಮದ್ ಜಲಾಲಿ ನೂತನ ಮುಖ್ಯಸ್ಥ!

ಕಾಬೂಲ್ ಕೈವಶ ಮಾಡಿದ ಬಳಿಕ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಇತ್ತ ತಾಲಿಬಾನ್ ಮದ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಅಹಮ್ಮದ್ ಜಲಾಲಿ ಹುಟ್ಟಿದ್ದು ಕಾಬೂಲ್‌ನಲ್ಲಿ. ಆದರೆ 1987ರಿಂದ ಅಮೆರಿದಲ್ಲಿ ನೆಲೆಸಿರುವ ಜಲಾಲಿ ಯುಎಸ್ ಪೌರತ್ವವನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here