ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಡಾ.ರಾಜ್ ಕುಮಾರ್ ಥೀಮ್ ನಲ್ಲಿ ಫಲಪುಷ್ಪ ಪ್ರದರ್ಶನ

ಬೆಂಗಳೂರು

ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ ಬಾಗ್ ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗುತ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್​ಕುಮಾರ್ ಥೀಮ್ನಲ್ಲಿ ಫಲಪುಷ್ಪ ಪ್ರದರ್ಶನ ಮಾಡುತ್ತಿರುವುದು ವಿಶೇಷವಾಗಿದೆ. ಲಾಲ್ಬಾಗ್ನಲ್ಲಿ ಈಗಾಗಲೇ ಚಿನ್ನ ಲೇಪಿತ ಅಪ್ಪು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಜ್ಯೋತಿಯನ್ನ ಬೆಳ್ಳಿ ರಥದ ಮೂಲಕ ಲಾಲ್ ಬಾಗ್ ವರೆಗೂ ಮೆರವಣಿಗೆ ಮಾಡಲಾಗುತ್ತದೆ. ಇನ್ನೂ ಜ್ಯೋತಿ ಯಶವಂತಪುರ ಮಾರ್ಗವಾಗಿ ಸದಾಶಿವನಗರದ ಅಣ್ಣಾವ್ರ ನಿವಾಸ ಬಳಿ ಹೋಗುತ್ತೆ. ನಿವಾಸದ ಬಳಿ ರಾಘವೇಂದ್ರ ರಾಜ್ ಕುಮಾರ್ ಜ್ಯೋತಿ ಗೆ ಶುಭ ಕೋರಲಿದ್ದಾರೆ.

ಪುನೀತ್ ರಾಜ್​ಕುಮಾರ್ ಮತ್ತು ಅಣ್ಣಾವ್ರ ಪುಷ್ಪ ಪ್ರದರ್ಶನಕ್ಕೆ ಅಣ್ಣಾವ್ರ ಕುಟುಂಬದವರು ಮಾರ್ಗದರ್ಶನ ನೀಡಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ  ಲಾಲ್ ಬಾಗ್ ಗೆ ಸುಮಾರು 8 ಲಕ್ಷ ಜನ ಆಗಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಲಾಲ್ ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.ಸಂಚಾರ ದಟ್ಟಣೆ ಕಡಿಮೆ ಮಾಡಲು ಸಮೂಹ ಸಾರಿಗೆ ಬಳಸಲು ಟ್ರಾಫಿಕ್ ಪೊಲೀಸರ ಮನವಿ ಮಾಡಿದ್ದಾರೆ. ಬಿಎಂಟಿಸಿ ಬಸ್, ಮೆಟ್ರೋ, ಕ್ಯಾಬ್ ಬಳಸಲು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published.