Home Cinema ಯೂಟ್ಯೂಬ್ ಚಾನೆಲ್‌ಗಳಿಗೆ ಬಿಸಿ ಮುಟ್ಟಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹರಿದಾಡಿದ್ದ ಗಾಸಿಪ್‌ಗಳಿಗೆ ತೆರೆ ಎಳೆದ...

ಯೂಟ್ಯೂಬ್ ಚಾನೆಲ್‌ಗಳಿಗೆ ಬಿಸಿ ಮುಟ್ಟಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹರಿದಾಡಿದ್ದ ಗಾಸಿಪ್‌ಗಳಿಗೆ ತೆರೆ ಎಳೆದ ಅರ್ಜುನ್ ಜನ್ಯ

277
0
SHARE

ವರದಿ-ಮಾವಳ್ಳಿ ಕಾರ್ತಿಕ್

ಸಂಗೀತ ನಿರ್ದೆಶಕ ಅರ್ಜುನ್ ಜನ್ಯ ತಮ್ಮ ಆರೋಗ್ಯದ ಬಗ್ಗೆ ಹರಿದಾಡಿದ್ದ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆರೋಗ್ಯದ ವಿಚಾರವಾಗಿ ಹರಿದಾಡಿದ್ದ ಅಂತೆ ಕಂತೆಗಳಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಸೈಬರ್ ಕ್ರೈಂ ಠಾಣೆಗೆ ದೂರು ಕೊಡೋದರ ಮೂಲಕ ಯೂಟ್ಯೂಬ್ ಚಾನೆಲ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾಗೆ ಏನೋ ಆಗಿಹೋಗಿದೆ ಎಂಬ ಗಾಳಿಸುದ್ಧಿ ಮೂರು ದಿನಗಳಿಂದ ಚಿತ್ರರಂಗಕ್ಕೆ ಆತಂಕವನ್ನುಂಟು ಮಾಡಿಬಿಡ್ತು. ಕೆಲವು ಯೂಟ್ಯೂಬ್ ಚಾನೆಲ್‌ಗಳು ಅರ್ಜುನ್ ಜನ್ಯಾಗೆ ಹೃದಯಾಘಾತವಾಗಿದೆ. ಅರ್ಜುನ್ ಜನ್ಯಾ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಅಂತ ಬಿಂಬಿಸಿಬಿಟ್ಟವು. ಆದರೆ ಪ್ರತ್ಯಕ್ಷವಾಗಿ ಕಂಡ್ರೂ ಪ್ರಾಮಾಣಿಸಿ ನೋಡು ಅಂತ ಅರ್ಜುನ್ ಜನ್ಯಾ ಸಿಡಿದೆದ್ದಿದ್ದಾರೆ. ಅರ್ಥಹೀನ ಸುದ್ಧಿ ಹಬ್ಬಿಸೋ ಕೆಲವು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಹರಿಹಾಯ್ದಿದ್ದಾರೆ.

ಅರ್ಜುನ್ ಜನ್ಯಾ ಕೆಲವು ದಿನಗಳ ಹಿಂದೆಯಷ್ಟೇ ಕೊರೋನಾ ಪಾಸಿಟಿವ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ರು. ಜನ್ಯಾ ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರಾಗಿದ್ದು ನಿಜ, ಆದರೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ತೆಗೆದುಕೊಂಡ ಅರ್ಜುನ್ ಜನ್ಯ ನಂತರ ಸುಧಾರಿಸಿಕೊಂಡಿದ್ರು. ಕ್ವಾರಂಟೈನ್‌ಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ರು. ಆದರೆ ಅರ್ಜುನ್ ಜನ್ಯಾ ಆರೋಗ್ಯವನ್ನೇ ಟಾರ್ಗೆಟ್ ಮಾಡಿದ ಕೆಲವು ಯೂಟ್ಯೂಬ್ ಚಾನೆಲ್‌ಗಳು ಅರ್ಜುನ್ ಜನ್ಯಾ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ತಪ್ಪು ಸಂದೇಶ ಕೊಟ್ಟಿದೆ. ಅರ್ಜುನ್ ಜನ್ಯಾಗೆ ಬಹಳ ಸಿರೀಯಸ್ ಆಗಿದೆ ಎಂಬುವಂತೆ ಫೋಟೊಗಳನ್ನ ಎಡಿಟ್ ಮಾಡಿ ಹರಿಬಿಡಲಾಗಿದೆ. ಇದರ ವಿರುದ್ಧ ಈಗ ಅರ್ಜುನ್ ಜನ್ಯಾ ಬೆಂಗಳೂರು ಸೈಬರ್ ಕ್ರೈಂ ಮೆಟ್ಟಿಲೇರಿ ದೂರು ನೀಡಿದ್ದಾರೆ.

ಯೂಟೂಬ್ ಸುದ್ದಿಗಳನ್ನ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರೋ ಅರ್ಜುನ್ ಜನ್ಯಾ, ಈ ಸುಳ್ಳುಸುದ್ಧಿಗಳಿಂದ ತಮಗೆ ಹಾಗೂ ಕುಟುಂಬಕ್ಕೆ ಮಾನಸಿಕವಾಗಿ ನೋವಾಗಿದೆ ಎಂದಿದ್ದಾರೆ. ಅಗತ್ಯ ಬಿದ್ರೆ ಕಾನೂನು ಕ್ರಮಜರುಗಿಸೋದಾಗಿ ಎಚ್ಚರಿಸಿದ್ದಾರೆ. ಯಾವುದೋ ವಿಷಯಕ್ಕೆ ಹೊಸ ವದಂತಿ ಅಂಟಿಸಿ ನಕಲಿ ಸುದ್ಧಿಗಳನ್ನ ಹಬ್ಬೋ ಯೂಟ್ಯೂಬ್ ಚಾನೆಲ್‌ಗಳಿಗೆ ಇದೊಂದು ಪಾಠವಾಗಬೇಕಿದೆ. ವಿವ್ಯೂಸ್ ಗಳಿಗೋಸ್ಕರ ಬೇರೆಯವರ ಜೀವನದಲ್ಲಿ ಆಟವಾಡೋದು ನಿಲ್ಲಬೇಕಾಗಿದೆ ಎಂದಿ ಜನ್ಯ ಮನವಿ ಮಾಡಿದ್ದಾರೆ..!

LEAVE A REPLY

Please enter your comment!
Please enter your name here