ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

ಕಲಬುರಗಿ : ಆ.15- ಜಿಲ್ಲೆಯಲ್ಲಿ ಕೈಗಾರಿಕೆಗಳು ಒಂದೇ ಕಡೆ ಇರುವಂತೆ ಕೈಗಾರಿಕೆ ಹಬ್ ಮಾಡಲು ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.ರವಿವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ಮಾಡಿ, ಪರೇಡ್ ಕಮಾಂಡರ ಡಿ.ಎ.ಆರ್ ಮೀಸಲು ಪಡೆಯ ಆರ್.ಪಿ.ಐ ಹಣಮಂತ ನಾಯಕ ಮತ್ತು ಸಹಾಯಕ ಪರೇಡ್ ಕಮಾಂಡರ […]

Continue Reading

ಬಾಯ್ ಕಾಟ್ ನಡುವೆಯು ಆಸ್ಕರ್ ಗಮನ ಸೆಳೆದ ‘ಲಾಲ್ ಸಿಂಗ್ ಚಡ್ಡಾ’

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತಿದ್ದೆ. ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡಿದ್ದರು ಜನ ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಇದೀಗ ಅಮೀರ್ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ವಿಚಾರ ಸಿಕ್ಕಿದೆ. ಈ ಹಿಂದೆ ಅಸಹಿಷ್ಣತೆ ಕುರಿತು ಆಮಿರ್ ಖಾನ್​ ನೀಡಿದ್ದ ಹೇಳಿಕೆಯನ್ನೇ ಇಟ್ಟುಕೊಂಡು ಈಗಲೂ ಅವರ ಚಿತ್ರವನ್ನು ಬಹಿಷ್ಕರಿಸುವ ಟ್ರೆಂಡ್​ ಜಾರಿಯಲ್ಲಿದೆ. ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರಕ್ಕೂ ಬಹಿಷ್ಕಾರದ ಬಿಸಿ ತಟ್ಟಿದ್ದು, ಇದರ ನಡುವೆಯೂ ಸಿನಿಮಾ ‘ಆಸ್ಕರ್​’ ಸಂಸ್ಥೆಯ ಗಮನ ಸೆಳೆದಿದೆ. ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ಹಿಂದಿ ರಿಮೇಕ್​ ‘ಲಾಲ್​ ಸಿಂಗ್​ ಚಡ್ಡಾ’. ಇಂಗ್ಲಿಷ್​ನಲ್ಲಿ ಟಾಮ್​ ಹ್ಯಾಂಕ್ಸ್​ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್​ ಮಾಡಿದ್ದಾರೆ. 1994ರಲ್ಲಿ ತೆರೆಕಂಡ ‘ಫಾರೆಸ್ಟ್​ ಗಂಪ್​’ ಚಿತ್ರ 6 ಆಸ್ಕರ್​ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ‘ಫಾರೆಸ್ಟ್​ ಗಂಪ್​’ ಚಿತ್ರವನ್ನು ಹಿಂದಿಗೆ ರಿಮೇಕ್​ ಮಾಡಿರುವ ರೀತಿಗೆ ಆಸ್ಕರ್​ ಸಂಸ್ಥೆ ಮನಸೋತಿದೆ. ಈ ಬಗ್ಗೆ ಆಸ್ಕರ್ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ಎರಡೂ ಸಿನಿಮಾದ ಕೆಲವು ದೃಶ್ಯಗಳು ಶೇರ್ ಮಾಡಿದೆ. ಅದ್ವೈತ್​ ಚಂದನ್​ ನಿರ್ದೇಶನ ಮಾಡಿರುವ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ಅಮೀರ್ ಗೆ ಜೋಡಿಯಾಗಿ […]

Continue Reading

ಸಾರ್ವಕರ್ ಫೋಟೋ ವಿವಾದ! :ಶಿವಮೊಗ್ಗ ಮಾಲ್​ ನಲ್ಲಿ ಮೊದಲು ನಡೆದಿದ್ದು ಏನು!? ಆಮೇಲೆ ಆಗಿದ್ದು ಏನು!

ಶಿವಮೊಗ್ಗದ ಸಿಟಿ ಸೆಂಟ್ರಲ್​ ಮಾಲ್​ ವಿವಾದವೊಂದಕ್ಕೆ ಸಾಕ್ಷಿಯಾಗಿ ಹಲವು ಸನ್ನಿವೇಶಗಳನ್ನು ಕಂಡಿತು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಾಡಿದ್ದ ಅಲಂಕಾರದ ನಡುವಎ ವೀರ ಸಾರ್ವಕರ್​ ಫೋಟೋಹಾಕಿದ್ದನ್ನ ಪ್ರಶ್ನಿಸಿ ಎಸ್​ಡಿಪಿಐ ಕಾರ್ಯಕರ್ತರು ಆಕ್ರೋಶ ಹೊರಹಾಕಿ ಪ್ರತಿಭಟಿಸಿದರೆ, ಬಿಜೆಪಿ ಕಾರ್ಯಕರ್ತರು ವೀರ ಹೋರಾಟಗಾರರಿಗೆ ಎಸ್​ಡಿಪಿಐ ಅವಮಾನ ಮಾಡಿದೆ ಎಂದು ಆಕ್ರೋಶ ಹೊರಹಾಕಿ ಮಾಲ್​ನ ಎದುರಲ್ಲೆ ಪ್ರತಿಭಟನೆ ನಡೆಸಿತು. ಮೊದಲು ನಡೆದಿದ್ದು ಏನು!? ಮನೆಮನೆಗೂ ತಿರಂಗಾ ಅಭಿಯಾನದ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ನಗರ ಪ್ರತಿಷ್ಟಿತ ಕಟ್ಟಡಗಳು ಹಾಗೂ […]

Continue Reading

ಎತ್ತಿನಗಾಡಿ ಒಡೆದು ಬೈಕ್ ಜಾಥಾಗೆ ಚಾಲನೆ ಕೊಟ್ಟ ಕಂದಾಯ ಸಚಿವ ಆರ್.ಅಶೋಕ್

ಮಂಡ್ಯ :– ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಮತ್ತು ರೈತ ಮೋರ್ಚಾ ವತಿಯಿಂದ ಭಾನುವಾರ ಬೈಕ್ ಮತ್ತು ಎತ್ತಿನಗಾಡಿ ರ್ಯಾಲಿ ನಡೆಯಿತು. ಮದ್ದೂರಿನ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಆರಂಭಗೊಂಡ ಬೈಕ್ ಮತ್ತು ಎತ್ತಿನಗಾಡಿ ರ್ಯಾಲಿಗೆ ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜಂಟಿಯಾಗಿ ಚಾಲನೆ ನೀಡಿದರು.   ನಂತರ ನೂರಾರು ಬಿಜೆಪಿ ಕಾರ್ಯಕರ್ತರು ಹಳೇ ಎಂ.ಸಿ.ರಸ್ತೆ ಮಾರ್ಗವಾಗಿ ಬೆಂಗಳೂರು – ಮೈಸೂರು ಹೆದ್ದಾರಿ ಮೂಲಕ […]

Continue Reading

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಧ್ವಜಾರೋಹಣ

75 ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಆಡಾಳಿತಾಧಿಕಾರಿ  ರಾಕೇಶ್ ಸಿಂಗ್ ಅವರಿಂದ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಧ್ವಜಕ್ಕೆ ಗೌರವ ಸಮರ್ಪಿಸಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ವಿಶೇಷ ಆಯುಕ್ತರಾದ ರವೀಂದ್ರ, ತ್ರೀಲೋಕ್ ಚಂದ್ರ, ಹರೀಶ್ ಕುಮಾರ್, ಜಯರಾಮ್ ರಾಯ್ ಪುರ, ಬಿಬಿಎಂಪಿ ಸಿಬ್ಬಂದಿ ಗಳು ಅಧಿಕಾರಿಗಳು ಉಪಸ್ಥಿತರಿದ್ದರು. ಇನ್ನೂ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆ ಜಾಗೃತಿ ಜಾತಗೆ ಬಿಬಿಎಂಪಿ ಅಧಿಕಾರಿಗಳು ಚಾಲನೆ […]

Continue Reading

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೇರವೇರಿಸಿದ ಎಸಿ ಶಿವಣ್ಣ

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ ನಡೆದಿದೆ. ಎಸಿ ಶಿವಣ್ಣ ಅವರು ಇಂದು ಧ್ವಜಾರೋಹಣ ನೇರವೇರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದೆ. ಎಸಿ ಶಿವಣ್ಣ, ಜಮ್ಮೀರ್ ಅಹಮ್ಮದ್, MP ಪಿಸಿ ಮೋಹನ್ ಧ್ವಜಾರೋಹಣ ವೇದಿಕೆಯಲ್ಲಿ ಉಪಸ್ಥಿತರಾಗಿದ್ದರು. ಎಸಿ ಶಿವಣ್ಣ ಚಾಮರಾಜಪೇಟೆ ಮೈದಾನದಲ್ಲಿ‌ ಧ್ವಜಾರೋಹಣ ನೇರವೇರಿಸಿದ್ದು, ಧ್ವಜಾರೋಹಣ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿದೆ. ಇನ್ನೂ ಸ್ವಾತಂತ್ರ್ಯೋತ್ಸವ, ಗಣೇಶ […]

Continue Reading

75 ನೇ ಸ್ವಾತಂತ್ರ್ಯ ದಿನಾಚರಣೆ: ಮಾಣೆಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿ.ಎಂ

75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಾಣೆಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಭಾರತ ದೇಶಕ್ಕೆ ಈಗ ಅಮೃತ ಗಳಿಗೆ ಬಂದಿದೆ. ಹಲವಾರು ಮಹನೀಯರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಸಹಸ್ರ ಸಂಖ್ಯೆಯ ಮಹನೀಯರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದರು. ಕಿತ್ತೂರುರಾಣಿ ಚೆನ್ನಮ್ಮ, ರಾಯಣ್ಣರನ್ನು ಮರೆಯುವಂತಿಲ್ಲ. ನಾನು ಜಿಲಿಯನ್ […]

Continue Reading

ಕನ್ನಡದ ಹಿರಿಯ ನಟ ಉಮೇಶ್ ಸಿನಿ ಪಯಣಕ್ಕೆ 62ರ ಸಂಭ್ರಮ: ವಾಣಿಜ್ಯ ಮಂಡಳಿಯಿಂದ ಅಭಿನಂದನಾ ಕಾರ್ಯಕ್ರಮ

ರಂಗಭೂಮಿ ಹಾಗೂ ಚಲನಚಿತ್ರರಂಗದ ಹಿರಿಯ ಹಾಸ್ಯ ಕಲಾವಿದರಾದ ಎಂ.ಎಸ್.ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು. ನಾಟಕಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದ ಉಮೇಶ್ ಚಲನಚಿತ್ರ ರಂಗಕ್ಕೆ ‘ಮಕ್ಕಳ ರಾಜ್ಯ’ ಚಿತ್ರದ ಮೂಲಕ ಅಡಿಯಿಟ್ಟರು. ಕನ್ನಡದ ಸುಮಾರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ಪೋಷಿಸಿರುವ ಉಮೇಶ್ ಹಾಸ್ಯ ನಟರಾಗಿ ಹೆಸರುವಾಸಿ. ಕಥಾಸಂಗಮದ ‘ಮುನಿತಾಯಿ’ಯಲ್ಲಿ ತಿಮ್ಮರಾಯಿ ಪಾತ್ರ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತಂದಿತ್ತು. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಮುತ್ತಿಟ್ಟಿರುವ ಉಮೇಶ್ ಕಲಾ ಪಯಣಕ್ಕೆ […]

Continue Reading

ಜಿಂಬಾಬ್ವೆಗೆ ತೆರಳಿದ ಟೀಂ ಇಂಡಿಯಾ ಆಟಗಾರರು..

ಸತತ ಸರಣಿಗಳಲ್ಲಿ ಬ್ಯುಸಿಯಾಗಿರುವ ಭಾರತ ಕ್ರಿಕೆಟ್ ತಂಡ ಮತ್ತೊಂದು ಕದನಕ್ಕೆ ಸಜ್ಜಾಗಿದೆ. ಇದೇ ತಿಂಗಳ 18ರಿಂದ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಕ್ಕಾಗಿ ಭಾರತ ತಂಡದ ಆಟಗಾರರು ಶನಿವಾರ ಜಿಂಬಾಬ್ವೆಗೆ ತೆರಳಿದ್ದಾರೆ. ಶಿಖರ್ ಧವನ್, ದೀಪಕ್ ಚಹಾರ್, ಪ್ರಸೀದ್ ಕೃಷ್ಣ, ಮೊಹಮ್ಮದ್ ಸಿರಾಜ್, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್ ಮತ್ತು ಇತರರು ವಿಮಾನದಲ್ಲಿ ಹೊರಟರು.    

Continue Reading

ನಾನು ಹಾಗೂ ರೂಪೇಶ್ ಸ್ನೇಹಿತರಷ್ಟೇ ಬೇರೆನು ಇಲ್ಲ: ಸಾನಿಯಾ ಸ್ಪಷ್ಟನೆ

ಕನ್ನಡದ ಬಿಗ್ ಬಾಸ್ ಓಟಿಟಿ ಆರಂಭವಾಗಿ ವಾರ ಕಳೆದಿದೆ. ಸ್ಪರ್ಧಿಗಳು ದಿನಕ್ಕೊಂದರಂತೆ ಸ್ಟೇಟ್ ಮೆಂಟ್ ಕೊಡುತ್ತಾ ದೊಡ್ಮನೆ ಒಳಗೆ ಉಳಿದುಕೊಳ್ಳೋಕೆ ಹೊಸ ಹೊಸ ದಾರಿಗಳನ್ನು ಕಂಡುಕೊಳ್ತಿದ್ದಾರೆ. ಈ ಮಧ್ಯೆ ಕಿರುತೆರೆ ನಟಿ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ನಡುವೆ ಕೆಲ ದಿನಗಳಿಂದ ಏನೋ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು ಅದಕ್ಕೀಗ ಸ್ಪಷ್ಟನೆ ನೀಡಿದ್ದಾರೆ. ಕೆಲ ಸಂದರ್ಭದಲ್ಲಿ ಸಾನಿಯಾ ಮೇಲೆ ತಮಗೆ ಆಸಕ್ತಿ ಇದೆ ಎಂಬುದನ್ನು ರೂಪೇಶ್ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.ಈ ಬಗ್ಗೆ ಸಾನಿಯಾ ನೇರವಾಗಿ ಹೇಳಿಲ್ಲವಾದರೂ ಹೆಚ್ಚು […]

Continue Reading