ಆಯುಧ ಪೂಜೆ ದುಡ್ಡಿಲ್ಲದೆ ಬರ್ಬಾದ್ ಆಯ್ತಾ ಬಿಎಂಟಿಸಿ..? ಒಂದು ಬಸ್ ಗೆ BMTC ಕೊಟ್ಟಿದ್ದೆಷ್ಟು ಗೊತ್ತಾ..?

ಬೆಂಗಳೂರು

ಬೆಂಗಳೂರು: ಆಯುಧ ಪೂಜೆಗೂ ದುಡ್ಡಿಲ್ಲದೆ ದಿವಾಳಿಯಾಯಿತಾ ಬಿಎಂಟಿಸಿ ಎಂಬ ಪ್ರಶ್ನೆ ಮೂಡಿದ್ದು, ಪೂಜೆಗೆ ತಲಾ ಒಂದು ಬಸ್​ಗೆ ಕೇವಲ 100 ರೂ. ಬಿಡುಗಡೆ ಮಾಡಿದೆ. ಅಕ್ಟೋಬರ್ 4ರಂದು ಆಯುಧ ಪೂಜೆ ಮಾಡಲು ಬಿಎಂಟಿಸಿ 100 ರೂ. ಬಿಡುಗಡೆ ಮಾಡಿದೆ. ಜೀಪು, ಕಾರ್​ಗೆ ಕೇವಲ 40 ರೂ. ಖರ್ಚು ಮಾಡಲು ಸೂಚಿಸಲಾಗಿದೆ. ಹಬ್ಬದ ದಿನ ಸ್ವಚ್ಛತೆ, ಅಲಂಕಾರಕ್ಕೆ ಬಿಎಂಟಿಸಿ ಕೇವಲ ಪುಡಿಗಾಸು ಬಿಡುಗಡೆ ಮಾಡಿದೆ. ಬಸ್​ಗೆ ಕೇವಲ 100 ರೂ. ಬಿಡುಗಡೆ ಮಾಡಿ ಕೈ ತೊಳೆದುಕೊಂಡ ನಿಗಮದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ವರ್ಷವೂ ಆಯುಧ ಪೂಜೆಯ ಖರ್ಚು ವೆಚ್ಚಕ್ಕೆ ನಗಣ್ಯ ಎನಿಸುವಷ್ಟು ಹಣ ಬಿಡುಗಡೆ ಮಾಡಲಾಗಿದೆ.

ಬಿಎಂಟಿಸಿ ಆಡಳಿತ ಮಂಡಳಿಯ ಜಿಪುಣತನಕ್ಕೆ ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ. ಬಸ್​ಗಳನ್ನು ಚೆನ್ನಾಗಿ ಅಲಂಕಾರ ಮಾಡುವ ಸಿಬ್ಬಂದಿಯ ಆಸೆಗೆ ಬಿಎಂಟಿಸಿ ಆಡಳಿತ ಮಂಡಳಿ ಅಕ್ಷರಶಃ ತಣ್ಣೀರೆರಚಿದೆ. ಬಿಡುಗಡೆ ಮಾಡಿರುವ 100 ರೂ.ಗಳಲ್ಲಿ ಒಂದು ಬಸ್​ಗೆ ಪೂಜೆ ಮಾಡೋಕೆ ಆಗುತ್ತಾ‌‌? ಬಿಎಂಟಿಸಿ ಕೊಟ್ಟ ಹಣದಲ್ಲಿ 10 ನಿಂಬೆಹಣ್ಣು ಕೂಡ ಬರೋದಿಲ್ಲ ಅಂತ ನೌಕರರು ಸಿಟ್ಟು ಮಾಡಿಕೊಂಡಿದ್ದಾರೆ. ಹಬ್ಬದ ದಿನ ಪೂಜೆ ನೆರವೇರಿಸಲು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. 100 ರೂ.ಗೆ ಬಸ್‌ಗಳನ್ನು ಸಿಂಗರಿಸಿ ಪೂಜೆ ಮಾಡಲು ಅಸಾಧ್ಯ ಎಂದು ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ.