ಗಂಡ ಹೆಂಡಿರ ಜಗಳ; ಕಣ್ತೆರೆಯುವುದರೊಳಗೇ ಶಿವನ ಪಾದ ಸೇರಿದ ಹಸುಳೆ!

883
0

ಮೈಸೂರು; ಆಕೆ ಇಂದು ಇನ್ನೊಂದು ಜೀವಕ್ಕೆ ಜನ್ಮ ಕೊಡಬೇಕಿತ್ತು. ಆದ್ರೆ ಆಕೆಯೆ ಹೆಣವಾಗಿ ಹೋಗಿದ್ದಾಳೆ.‌ ಗಂಡನ ಅನುಮಾನಕ್ಕೆ ಹೆತ್ತ ತಾಯಿ, ಹೆಂಡತಿ ಹಾಗೂ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಅಷ್ಟೆ ಅಲ್ಲದೆ ಇನ್ನು ಜಗತ್ತು‌ ಕಾಣದ ಕಂದ ಹೊಟ್ಟೆಯಲ್ಲೆ ಜೀವ ಬಿಟ್ಟದ್ದು, ಇಡೀ ಊರಿಗೆ ಊರೆ ಪಾಪಿ ಗಂಡನ ಕೃತ್ಯಕ್ಕೆ ಶಾಪ ಹಾಕಿದ್ದಾರೆ.

ಇಡೀ ಊರಿಗೆ ಊರೆ ಆ ಮನೆ ಮುಂದೆ ಸೇರಿದ್ರು. ಎಲ್ಲರ ಮುಖದಲ್ಲಿ ಆತಂಕ, ಕಣ್ಣಲ್ಲಿ ನೀರು. ಅಷ್ಟಕ್ಕು ಇದಕ್ಕೆಲ್ಲ ಕಾರಣ ಈ ಪಾಪಿ. ಹೌದು, ಇಂದು ಮುಂಜಾನೆ ಜನರು ಕಣ್ಣು ಬಿಡುವಷ್ಟೆಲ್ಲೆ ಗ್ರಾಮದ ಮನೆಯಲ್ಲಿ ಐವರು ಕೊಲೆಯಾಗಿ ಹೋಗಿದ್ರು. ಹೌದು, ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಚಾಮೆಗೌಡನಹುಂಡಿಯಲ್ಲಿ ಐವರು ಕೊಲೆಯಾಗಿದ್ದಾರೆ. ಮಣಿಕಂಠಸ್ವಾಮಿ ಎಂಬಾತ ತನ್ನ ಗರ್ಭಿಣಿ ಪತ್ನಿ ಗಂಗಾ, ತಾಯಿ ಕೆಂಪಮ್ಮ, ಇಬ್ಬರು ಮಕ್ಕಳಾದ ಸಾಮ್ರಾಟ್, ರೋಹಿತ್ ನನ್ನ ಮನೆಯಲ್ಲಿ ರಾತ್ರಿ ವೇಳೆ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಅದರಲ್ಲು ಪತ್ನಿ ತುಂಬು ಗರ್ಭಿಣಿ. ಇಂದು ಡಿಲವರಿಗೆ ಸಮಯ ಕೊಟ್ಟಿದ್ದರಂತೆ. ಇದಕ್ಕಾಗಿ ಇಂದು ಗಂಗಾ ಅಣ್ಣ ಬೆಳಿಗ್ಗೆ ಊರಿಗೆ ಬಂದು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದನಂತೆ. ಆದ್ರೆ ಅಷ್ಟರಲ್ಲಿ‌ ಮನೆಯವರಿಗೆ ಕೊಲೆಯಾಗಿರುವ ವಿಚಾರವನ್ನು ಗ್ರಾಮಸ್ಥರು ತಿಳಿಸಿದ್ದರಂತೆ.

ಮೈಸೂರು ಎಸ್ಪಿ ಸಿ.ಬಿ.ರಿಷ್ಯಂತ್ ಮಾತನಾಡಿ ಅದರಲ್ಲು ಕುಡಿತದ ದಾಸನಾಗಿದ್ದ ಮಣಿಕಂಠನಿಗೆ ಹೆಂಡತಿ ಬಗ್ಗೆ ಇನ್ನಿಲ್ಲದ ಅನುಮಾನವಂತೆ. ಸ್ವಂತ ಅಣ್ಣ‌ಮಾತಾಡಿದ್ರು ಅನುಮಾನ.‌ ಮನೆಗೆ ಯಾರು ಬಂದರು ಹೆಂಡತಿಯನ್ನ ಅನುಮಾನದ ದೃಷ್ಟಿಯಿಂದಲೆ ನೋಡುತ್ತಿದ್ದನಂತೆ.‌ಈ ವಿಚಾರವಾಗಿ ಈ ಮೊದಲು ಹೆಂಡತಿ ಮೇಲೆ ಹಲ್ಲೆಯನ್ನು ಮಾಡಿದ್ದನಂತೆ. ಆದಾದ ಮೇಲೆ ಗ್ರಾಮದ ಮುಖಂಡರು ರಾಜಿ ಪಂಚಾಯಿತಿ ಮಾಡಿ ಸರಿಪಡಿಸಿದ್ದರಂತೆ. ಆದ್ರೆ ಕಳೆದ ರಾತ್ರಿ ಮನೆಯಲ್ಲಿದ್ದ ಎಲ್ಲರನ್ನು ತನ್ನ ಕಬ್ಬಿಣದ ವಾಕಿಂಗ್ ಸ್ಟಿಕ್‌ನಿಂದ ಹೊಡೆದು ಸಾಯಿಸಿದ್ದಾನೆ. ಸದ್ಯ ಸ್ಥಳಕ್ಕೆ ದಕ್ಷಿಣ ವಲಯ ಐಜಿ ಪ್ರವೀಣ್ ಪವಾರ್, ಎಸ್ಪಿ ರಿಷ್ಯಂತ್, ಎಸ್ಪಿ ಶಿವಕುಮಾರ್ ಭೇಟಿ‌‌ ನೀಡಿ ಪರಿಶೀಲನೆ ನಡೆಸಿದ್ದಾರೆ.‌

ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ. ಆದ್ರೆ ಕುಡುಕ ಗಂಡನ ಅನುಮಾನ‌ ಮಾತ್ರ ಐದು ಜೀವಗಳನ್ನು‌ ಬಲಿ ತೆಗೆದುಕೊಂಡಿದ್ದು ಅನ್ಯಾಯವೆ. ಇಂತಹ ಪಾಪಿ ಗಂಡನಿಗೆ ತಕ್ಕ ಶಿಕ್ಷೆಯಾಗಲಿ ಅನ್ನೋದು ಗ್ರಾಮಸ್ಥರ ಒತ್ತಾಯ.

Previous articleಕೋವಿಡ್ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ; ಗ್ರಾ.ಪಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನೋಟಿಸ್!
Next articleಇಂದು ಚಾಮರಾಜನಗರ ಜಿಲ್ಲೆಯಲ್ಲಿ 377 ಮಂದಿ ಕೋರೊನಾ ದೃಢ; 2130ಕ್ಕೆ ಏರಿದ ಸಕ್ರಿಯ ಪ್ರಕರಣ

LEAVE A REPLY

Please enter your comment!
Please enter your name here