Home District ಸಂಡೇ ಲಾಕ್ ಡೌನ್ ; ಗಣಿನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ

ಸಂಡೇ ಲಾಕ್ ಡೌನ್ ; ಗಣಿನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ

451
0
SHARE

ಬಳ್ಳಾರಿ. ಜಿಲ್ಲೆಯಲ್ಲಿ ಸಂಡೇ ಲಾಕ್ ಡೌನ್ ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಡೇ ಲಾಕ್ ಡೌನ್ ಇದ್ರೂ ಕೂಡ ಜನರ ಹೊರಗಡೆ ಓಡಾಟ ಸಾಮಾನ್ಯವಾಗಿದೆ. ವಾಹನ ಸವಾರರು ಸಂಡೇ ಲಾಕ್ ಡೌನ್ ಗೂ ನಮಗೂ ಸಂಬಂಧವೇ ಇಲ್ಲಾ ಎಂಬಂತೆ ವರ್ತಿಸುತ್ತಿದ್ದಾರೆ. ಆದಕಾರಣ ಆಟೋ ಚಾಲಕರು ಮತ್ತು ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಇನ್ನೂ ಬಳ್ಳಾರಿಯ  ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ದುರ್ಗಾ ಪಡೆ ಫೀಲ್ಡಿಗಿಳಿದಿದೆ. ಬಳ್ಳಾರಿಯಲ್ಲಿ ಮಹಿಳಾ ಸಂರಕ್ಷಣೆಗಂತಲೇ ವಿಶೇಷವಾಗಿ ರಚಿಸಲಾಗಿರುವ ಪೊಲೀಸರ ತಂಡವೇ ದುರ್ಗಾಪಡೆ.

ದುರ್ಗಾಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿ ಇಂದು ಬಳ್ಳಾರಿ ನಗರವನ್ನು ಸೈಕಲ್ ನಲ್ಲಿ ಸುತ್ತಿದರು. ಸೈಕಲ್ ಜಾಥಾ ಮಾಡುವುದುರ ಮೂಲಕ ಜನಜಾಗೃತಿ ಮೂಡಿಸುವದಕ್ಕೆ ಪ್ರಯತ್ನಿಸಿದರು. ರಾಯಲ್ ಸರ್ಕಲ್, ಬೆಂಗಳೂರು ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿ ಅಲ್ಲಿನ ಜನರಿಗೆ ಲಾಕ್ ಡೌನ್ ಇರೋದ್ರಿಂದ ತುರ್ತು ಸಂಧರ್ಬ ಬಿಟ್ಟು ಹೊರಗಡೆ ಬರದಂತೆ ತಿಳುವಳಿಕೆ ಮೂಡಿಸಿದರು.

ಕಳೆದ ವಾರದ ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲೆಯ ಎಸ್ಪಿ ಸಿ.ಕೆ ಬಾಬಾರವರು ಸೈಕಲ್ ಸವಾರಿ ಮಾಡಿ ಚೆಕ್ ಪೋಸ್ಟ್ ಮತ್ತು ಇತರೆಡೆ ಪರಿಶೀಲನೆ ನಡೆಸಿದ್ದರು.

LEAVE A REPLY

Please enter your comment!
Please enter your name here