ಬಂಡೀಪುರ ವ್ಯಾಪ್ತಿಯ 38 ಎಕರೆ ಪ್ರದೇಶದಲ್ಲಿ ಬಿದಿರು ಬಿತ್ತನೆ ಕಾರ್ಯ

ಬಂಡೀಪುರ ವ್ಯಾಪ್ತಿಯ 38 ಎಕರೆ ಪ್ರದೇಶದಲ್ಲಿ ಬಿದಿರು ಬಿತ್ತನೆ ಕಾರ್ಯ

453
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ: ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಉತ್ತಮವಾಗಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯು ಹುಲ್ಲುಗಾವಲು ಅಭಿವೃದ್ದಿ ಪಡಿಸಲು ಮುಂದಾಗಿದ್ದು, ಬಂಡೀಪರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹನ್ನೆರಡು ವಲಯದಲ್ಲಿ 1.90 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಿದಿರು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬಿದಿರಿನ ಸಂತತಿ ಸಂಪೂರ್ಣವಾಗಿ ನಶಿಸಿ ಹೋಗುತ್ತಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಪ್ರತಿ ವಲಯದಲ್ಲಿ ಹಳ್ಳ ಕೊಳ್ಳ ಮತ್ತು ಹಿನ್ನೀರಿನ ಪ್ರದೇಶ ಹಾಗೂ ಲಂಟಾನ ಕಳೆ ತೆಗೆದು ಹಾಕಿರುವ ಸ್ಥಳಗಳಲ್ಲಿ ಬಿದಿರು ಬೆಳೆಯಲು ಮುಂದಾಗಿದೆ.

ಅದರಂತೆ ಬಂಡೀಪುರ ವಲಯದಲ್ಲಿ 05 ಎಕರೆ, ಜಿ.ಎಸ್.ಬೆಟ್ಟ ವಲಯದಲ್ಲಿ 03 ಎಕರೆ, ಮೂಲೆಹೊಳೆ ವಲಯದಲ್ಲಿ 04 ಎಕರೆ, ಕುಂದಕೆರೆ ವಲಯದಲ್ಲಿ 04 ಎಕರೆ, ಮದ್ದೂರು ವಲಯದಲ್ಲಿ 04 ಎಕರೆ, ಓಂಕಾರ ವಲಯದಲ್ಲಿ 02 ಎಕರೆ, ಹೆಡಿಯಾಲ ವಲಯದಲ್ಲಿ 02 ಎಕರೆ, ಎ.ಎಂ.ಗುಡಿ ವಲಯದಲ್ಲಿ 03 ಎಕರೆ, ನುಗು ( ಬೀರ್ವಾಳು) ವಲಯದಲ್ಲಿ 02 ಎಕರೆ, ಗುಂಡ್ರೆ ವಲಯದಲ್ಲಿ 03 ಎಕರೆ, ಎನ್. ಬೇಗೂರು ವಲಯದಲ್ಲಿ 03 ಎಕರೆ ಹಾಗೂ ಮೊಳೆಯೂರು ವಲಯದಲ್ಲಿ 03 ಎಕರೆ ಪ್ರದೇಶಗಳಲ್ಲಿ ಬಿದಿರು ಬಿತ್ತನೆ ಕಾರ್ಯ ನೆರವೇರಿಸಲು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯಾಧಿಕಾರಿ ಪರಮೇಶ್ ತಿಳಿಸಿದ್ದಾರೆ.

ಪ್ರತಿ ಎಕರೆ ಪ್ರದೇಶದಲ್ಲಿ ಬಿದಿರು ಬಿತ್ತನೆ ಮಾಡಿ ಪೋಷಿಸಿ ಬೆಳಸಲು ಅರಣ್ಯ ಇಲಾಖೆಯಿಂದ 5 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಎಸಿಎಫ್ ಪರಮೇಶ್ ತಿಳಿಸಿದ್ದಾರೆ.

VIAಬಂಡೀಪುರ ವ್ಯಾಪ್ತಿಯ 38 ಎಕರೆ ಪ್ರದೇಶದಲ್ಲಿ ಬಿದಿರು ಬಿತ್ತನೆ ಕಾರ್ಯ
SOURCEಬಂಡೀಪುರ ವ್ಯಾಪ್ತಿಯ 38 ಎಕರೆ ಪ್ರದೇಶದಲ್ಲಿ ಬಿದಿರು ಬಿತ್ತನೆ ಕಾರ್ಯ
Previous articleಮೀನುಕಟ್ಟೆ ಕೆಸರಿನಲ್ಲಿ ಸಿಲುಕಿದ್ದ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ
Next articleಅಂಬರೀಶ್ ಬಿಟ್ರೆ ಕೊಡೊಗೈ ದಾನಿ ಅಂದ್ರೆ ಅದು ಭುವನ್: ಹಿರಿಯ ಕಲಾವಿದ ಅಮರ್ ನಾಥ್

LEAVE A REPLY

Please enter your comment!
Please enter your name here