Home KARNATAKA ನಾಗರಿಕರೇ ಎಚ್ಚರ .. ಎಚ್ಚರ.. ಬೆಂಗಳೂರು ಲಾಕ್ ಡೌನ್ ಫುಲ್  ಡಿಫರೆಂಟ್…

ನಾಗರಿಕರೇ ಎಚ್ಚರ .. ಎಚ್ಚರ.. ಬೆಂಗಳೂರು ಲಾಕ್ ಡೌನ್ ಫುಲ್  ಡಿಫರೆಂಟ್…

587
0
SHARE

ಬೆಂಗಳೂರು.  ಈ ಬಾರಿ ಬೆಂಗಳೂರು ಲಾಕ್ ಡೌನ್ ಫುಲ್  ಡಿಫರೆಂಟ್ ಆಗಿರುತ್ತೆ. ಮಂಗಳವಾರ ರಾತ್ರಿ ಜಾರಿಯಾಗುವ ಲಾಕ್ ಡೌನ್ ಅನ್ನು 7 ದಿನಗಳ ಕಾಲ ಕಟ್ಟು ನಿಟ್ಟಾಗಿ ಜಾರಿಗೆ ತರಲು ಪೊಲೀಸರು ತೀರ್ಮಾನಿಸಿದ್ದಾರೆ. ಕಳೆದ ಬಾರಿ ಪಾಸ್ ಗಳ ದುರ್ಬಳಕೆಯಿಂದ ಎಚ್ಚೆತ್ತ ಪೊಲೀಸರು ಈ ಬಾರಿ ರಸ್ತೆ ಗಿಳಿಯೋ ವಾಹನ ಸವಾರರಿಗೆ ಪಾಠ ಕಲಿಸಲು ನಿರ್ಧರಿಸಿದ್ದಾರೆ.

ರಸ್ತೆಯಲ್ಲಿ ವಾಹನ ಕಂಡರೆ ಸೀಜ್ ಮಾಡೋದು ಮಾತ್ರವಲ್ಲ , ಗಾಡಿ ವಾಪಸ್ ಕೂಡಾ ಕೊಡೋದಿಲ್ಲ. ವಾಹನ್ ಸೀಜ್ ಮಾಡೋದು ಅಷ್ಟೇ ಅಲ್ಲ, ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕೇಸು ಕೂಡಾ ಹಾಕ್ತಾರೆ. ಇದರಿಂದ ನಿಮ್ಮ ಗಾಡಿನೂ ಅಂದರ್ , ನೀವು ಅಂದರ್ ಆಗ್ತೀರ.

ಇನ್ನೂ ಕಳೆದ ಬಾರಿ ಪಡೆದಿರೋ ಪಾಸ್ ಈ ಬಾರಿ  ಬಳಕೆಗೆ ಪೊಲೀಸರು ನಿಷೇಧ ಹೇರಿದ್ಧಾರೆ.ಹಳೆಯ ಪಾಸುಗಳಿಗೆ ಅವಕಾಶವಿಲ್ಲ ಎಂದ ಕಮಿಷನರ್ ಭಾಸ್ಕರ್ ರಾವ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ಹಿಂದೆ ಲಾಕ್ ಡೌನ್ ವೇಳೆ ಪಾಸ್ ಗಳ ದುರ್ಬಳಕೆ ಆಗಿತ್ತು. ಪಾಸ್ ಬಳಸಿಕೊಂಡು ರಾತ್ರಿ ರೌಂಡ್ಸ್ ಹಾಕಿದ್ದ ನಟಿಯೊಬ್ಬರು ಬೆಂಗಳೂರಿನಲ್ಲಿ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆಸಿದ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಮಾರ್ಚ್ ನಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಪಾಸ್ ನೀಡಿದ್ದರು ಆದರೆ ಜನ ಪಾಸ್ ಗಳನ್ನ ದುರ್ಬಳಕೆ ಮಾಡಿಕೊಂಡು  ವಾಹನಗಳನ್ನು ರಸ್ತೆ ಗಿಳಿಸಿದ್ರು ಹೀಗಾಗಿ ಮೇ ತಿಂಗಳಲ್ಲಿ ಲಾಕ್ ಡೌನ್ ಜಾರಿ ಇದ್ರೂ ಫುಲ್ ಟ್ರಾಫಿಕ್ ಜಾಮ್ ಆಗಿತ್ತು.

ತುರ್ತು ಸೇವೆ, ವಸ್ತುಗಳ ಸಾಗಾಣೆ ಮಾಡೋವರಿಗೆ ಅಗತ್ಯ ದಾಖಲೆ ತೋರಿಸಿದ್ರೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ.

LEAVE A REPLY

Please enter your comment!
Please enter your name here