ರಸ್ತೆ ವಿಸ್ತರಣೆಗೆ 180 ಮರಗಳ ತೆರವಿಗೆ ಮುಂದಾದ ಬಿಬಿಎಂಪಿ ಅಧಿಕಾರಿಗಳು

ಬೆಂಗಳೂರು

ಬೆಂಗಳೂರು: ಬೆಂಗಳೂರಿನ ನೆಲಗದರನಹಳ್ಳಿ ತಿರುವಿನಿಂದ ಗಂಗಾ ಇಂಟರ್‌ನ್ಯಾಷನಲ್‌ ಸ್ಕೂಲ್‌ವರೆಗೆ ರಸ್ತೆ ವಿಸ್ತರಣೆ ಸಲುವಾಗಿ 180 ಮರಗಳನ್ನು ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ. ಇಲ್ಲಿನ ಕಿರಿದಾದ ರಸ್ತೆಯು ಈ ಶಾಲೆಯನ್ನು ತುಮಕೂರು ಮುಖ್ಯರಸ್ತೆಗೆ ಸಂಪರ್ಕಿಸುತ್ತದೆ. ನಾಗಸಂದ್ರ ತಿರುವಿನ ನಂತರ ಅಗಲ ಕಿರಿದಾಗಿರುವ ಕಡೆ ದಟ್ಟಣೆ ಉಂಟಾಗಿ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ ರಸ್ತೆ ವಿಸ್ತರಿಸಲು ನಿರ್ಧರಿಸಲಾಗಿದೆ. ದಾಸರಹಳ್ಳಿ ವಿಭಾಗದ ಬಿಬಿಎಂಪಿ ಎಂಜಿನಿಯರ್‌ಗಳು ರಸ್ತೆ ವಿಸ್ತರಣೆಗೆ ಮರಗಳ ತೆರವಿಗೆ ಅನುಮತಿಗೆ ಅರಣ್ಯ ವಿಭಾಗವನ್ನು ಕೋರಿದ್ದರು. ಅರಣ್ಯ ಅಧಿಕಾರಿಗಳು ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿದ್ದಾರೆ.

Leave a Reply

Your email address will not be published.