Home Latest ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ  IpL  ಮೇಲಿರುವ ಉತ್ಸಾಹ …ಏಷ್ಯಾಕಪ್ ಮೇಲಿಲ್ವಾ… ?

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ  IpL  ಮೇಲಿರುವ ಉತ್ಸಾಹ …ಏಷ್ಯಾಕಪ್ ಮೇಲಿಲ್ವಾ… ?

410
0
SHARE

ನವದೆಹಲಿ. ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜನೆ ಮಾಡಬೇಕಾಗಿದ್ದ ಏಷ್ಯಾಕಪ್ ಟೂರ್ನಿಯನ್ನು ಅಧಿಕೃತವಾಗಿ ಈಗ ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಘೋಷಣೆ ಮಾಡಿದ್ದಾರೆ. ಏಷ್ಯಾದ ಆರು ದೇಶಗಳಾದ ಭಾರತ, ಪಾಕಿಸ್ತಾನ,  ಶ್ರೀಲಂಕಾ, ಬಾಂಗ್ಲಾದೇಶ ,ಅಫ್ಘಾನಿಸ್ಥಾನ ಮತ್ತು ಯುಎಇ ಒಳಗೊಂಡ ಉಪಖಂಡದ ದೇಶಗಳು ಏಷ್ಯಾ ಕಪ್ಪನ್ನು ಸೆಪ್ಟೆಂಬರ್ ನಲ್ಲಿ ಪಾಕಿಸ್ತಾನದಲ್ಲಿ ಆಡಬೇಕಾಗಿತ್ತು.

ಈ ಬಾರಿಯ “ಏಷ್ಯಾ ಕಪ್” ಪಂದ್ಯಾವಳಿಯ ಆಯೋಜನೆಯ ಹಕ್ಕನ್ನು  ಪಾಕಿಸ್ತಾನ ಪಡೆದುಕೊಂಡಿತ್ತು. ಆದರೆ ಕೊರೊನಾ ಹಾವಳಿಯಿಂದಾಗಿ ಪಾಕಿಸ್ತಾನದಲ್ಲಿ ಪಂದ್ಯಾವಳಿ ಆಯೋಜಿಸಲು ಸಾಧ್ಯವಿಲ್ಲವೆಂದು ಏಷ್ಯಾ ಖಂಡದ ಆರು ದೇಶಗಳು ಯುಎಇ ಯಲ್ಲಿ ಪಂದ್ಯಗಳನ್ನು ನಡೆಸಲು ಒಪ್ಪಿಕೊಂಡವು. ಆದರೆ ಕೊರೊನಾ ಹಾವಳಿ ದಿನದಿಂದ  ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಯಾವ ದೇಶವೂ ಕೂಡ ಈಗ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲು ಮುಂದೆ ಬಂದಿಲ್ಲ .ಇದರಿಂದಾಗಿ ಅಧಿಕೃತವಾಗಿ ಏಷ್ಯಾ ಕಪ್ ಪಂದ್ಯಾವಳಿಯನ್ನು ಈ ವರ್ಷ ರದ್ದು ಮಾಡಲಾಗಿದೆ ಎಂದು ಸೌರವ್ ಗಂಗೂಲಿ ಘೋಷಣೆ ಮಾಡಿದ್ದಾರೆ.

ಅದೇ  ರೀತಿಯಾಗಿ  T20 ವಿಶ್ವಕಪ್ ಪಂದ್ಯಾವಳಿಯು ಕೂಡ ಬಹುತೇಕ ಈ ವರ್ಷ ರದ್ದಾಗಿದ್ದು ಅದು ಮುಂದಿನ ವರ್ಷಕ್ಕೆ ಹೋಗಿದೆ.

ಸೌರವ್ ಗಂಗೂಲಿ ಏಷ್ಯಾ ಕಪ್ ಪಂದ್ಯಾವಳಿ ರದ್ದಾಗಿರುವುದನ್ನು ಘೋಷಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ನಿರ್ದೇಶಕ ಸಿಯೋಲ್ ಅಸನ್ ಮಾತನಾಡಿ ಸೌರವ್ ಗಂಗೂಲಿ ಅವರ ಹೇಳಿಕೆಗೆ ಯಾವುದೇ ಮಾನ್ಯತೆ ಇಲ್ಲ ಮತ್ತು ಟೂರ್ನಿಯ ಭವಿಷ್ಯವನ್ನು ನಿರ್ಧರಿಸುವುದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಎಂದು ಅಬ್ಬರಿಸಿದ್ದಾರೆ.

ಈಗ ವಿವಾದ ಹುಟ್ಟಿಕೊಂಡಿದೆ ಇಲ್ಲಿ. ಐಪಿಎಲ್ ಮ್ಯಾಚ್ ನಡೆಸಲು ಉತ್ಸಾಹ ತೋರುತ್ತಿರುವ ಗಂಗೂಲಿ. ಏಷ್ಯನ್ ಕ್ರಿಕೆಟ್ ಪಂದ್ಯಾವಳಿಯನ್ನು  ಭಾರತ ತಂಡ ಆಡಲು ಮಾತ್ರ ಹಿಂದೇಟು ಹಾಕಲು ಗಂಗೂಲಿ ಪ್ರೇರೇಪಿಸುತ್ತಿದ್ದಾರೆ. ಇದು ಯಾಕೆ ? ಎಂಬುದು ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಉದ್ಭವವಾಗಿರುವ ಪ್ರಶ್ನೆ

ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಐಪಿಎಲ್ ಮ್ಯಾಚ್ ಅನ್ನು ನಡೆಸಲು ತೋರುತ್ತಿರುವ ಉತ್ಸಾಹದಲ್ಲಿ ಕಿಂಚಿತ್ತಾದರೂ ಉತ್ಸಾಹವನ್ನು ಏಷ್ಯಾ ಕಪ್ ಪಂದ್ಯಾವಳಿಗೆ ತೋರಲಿ ಎಂಬುದು ಇತರ ಏಷ್ಯಾ ಖಂಡದ ಕ್ರಿಕೆಟ್ ಆಡುವ ದೇಶಗಳ ಒಕ್ಕೊರಲಿನ ಒತ್ತಾಯವಾಗಿದೆ .

ಈ ಬಾರಿಯ ಐಪಿಎಲ್ ಪಂದ್ಯಾವಳಿ ಭಾರತದಲ್ಲಿ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವಾಗ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ದೇಶಗಳು ಐಪಿಎಲ್ ಪಂದ್ಯಾವಳಿಯ ಸಾರಥ್ಯವನ್ನು ವಹಿಸಲು ಮುಂದೆ ಬಂದಿದೆ ಇದಕ್ಕೆ ಗಂಗೂಲಿ ಕೂಡ ಕೈಜೋಡಿಸಿದ್ದು ಎಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತದೆ ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ .

ಐಪಿಎಲ್ ಆದ್ರೆ ಓಕೆ ಏಷ್ಯಾಕಪ್ ಮಾತ್ರ ಬೇಡ ಇದು ತಂಬುಳಿಯ ದ್ವಂದ್ವ ನಿಲುವನ್ನು  ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ

LEAVE A REPLY

Please enter your comment!
Please enter your name here