ಕೊರೊನಾ ಚಿಕಿತ್ಸೆ ಕೊಡಿಸುವವರಿಲ್ಲದೇ ರಸ್ತೆಯಲ್ಲೇ ಭಿಕ್ಷುಕ ಸಾವು

ಕೊರೊನಾ ಚಿಕಿತ್ಸೆ ಕೊಡಿಸುವವರಿಲ್ಲದೇ ರಸ್ತೆಯಲ್ಲೇ ಭಿಕ್ಷುಕ ಸಾವು

643
0

ವರದಿ; ನಾ ಅಶ್ವಥ ಕುಮಾರ್
ಚಾಮರಾಜನಗರ :ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ‌ ಶಿವನ‌ ಸಮುದ್ರ ಗ್ರಾಮದ ರಂಗನಾಥ ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬ ಕೊರೊನಾದಿಂದ ಮೃತಪಟ್ಟಿರುವ ಘಟನೆ ನಡೆದಿದೆ.ಮೃತಪಟ್ಟ ಭಿಕ್ಷುಕನಿಗೆ ಸುಮಾರು 75 ವರ್ಷ ಇರಬಹುದು. ಈತ ಕಳೆದ 5 ವರ್ಷದಿಂದ ರಂಗನಾಥ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ.

ದೇವಾಲಯದ ಅಸುಪಾಸಿನಲ್ಲಿಯೇ ಜೀವನ ನಡೆಸುತ್ತಿದ್ದ. ಲಾಕ್​ಡೌನ್ ಹಿನ್ನೆಲೆ ದೇವಸ್ಥಾನ ಮುಚ್ಚಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಕೊಟ್ಟ ಆಹಾರ ಸೇವಿಸಿ ಜೀವಿಸುತ್ತಿದ್ದ.ಮೇ 23ರ ಸಂಜೆ ದೇವಸ್ಥಾನದ ಹಿಂಭಾಗದಲ್ಲಿ ಮೃತಪಟ್ಟಿದ್ದು, ಸಮೂಹ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ದೇವಾಲಯದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಿದ್ದಾರೆ.

ಬಳಿಕ ಗ್ರಾಮಾಂತರ ಠಾಣೆ ಸಬ್​​​​​​ ಇನ್ಸ್​ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ತಪಾಸಣೆ ಮಾಡಿಸಿದಾಗ ಪಾಸಿಟಿವ್ ಇರುವುದು ದೃಢವಾಗಿದೆ. ಈ ಸಂಬಂಧ ಗ್ರಾಮಾಂತರ ‌ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಾಗಿದೆ.

VIAಕೊರೊನಾ ಚಿಕಿತ್ಸೆ ಕೊಡಿಸುವವರಿಲ್ಲದೇ ರಸ್ತೆಯಲ್ಲೇ ಭಿಕ್ಷುಕ ಸಾವು
SOURCEಕೊರೊನಾ ಚಿಕಿತ್ಸೆ ಕೊಡಿಸುವವರಿಲ್ಲದೇ ರಸ್ತೆಯಲ್ಲೇ ಭಿಕ್ಷುಕ ಸಾವು
Previous articleಲಸಿಕೆ ಕೇಂದ್ರದಲ್ಲಿ ಭುಗಿಲೆದ್ದ ಆಕ್ರೋಶ!
Next articleಕೊಲೆಯಲ್ಲಿ ಅಂತ್ಯವಾದ ದಾಯಾದಿಗಳ ನಡುವೆ ಕಲಹ!

LEAVE A REPLY

Please enter your comment!
Please enter your name here